ಮಾಧ್ಯಮ ಕ್ಷೇತ್ರದಲ್ಲಿ ಸಮಗ್ರ ಪ್ರಭ ಸಾಧನೆ ಮಾಡಲಿ

Samagraphrabha
1 Min Read

ನವಲಗುಂದ: ಸಮಗ್ರ ಪ್ರಭ ಪತ್ರಿಕೆಯು ನೇರ- ನುಡಿಯಂತೆ ವರದಿ ಪ್ರಸಾರ ಮಾಡಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಶ್ರೀ ವಿರೇಂದ್ರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಜಗದ್ಗುರು ಶ್ರೀ ಅಜಾತ ನಾಗಲಿಂಗ ಮಠದಲ್ಲಿ ಸಮಗ್ರ ಪ್ರಭ ಪತ್ರಿಕೆಯ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು
ಸಮಾಜದ ಓರೆ-ಕೊರೆಗಳನ್ನು ತಿದ್ದುವಂತಹ ಕೆಲಸ ಪತ್ರಿಕೆಯದಾಗಿದ್ದು ಧನಾತ್ಮಕ ವಿಷಯಗಳನ್ನು ಪ್ರಸಾರ ಮಾಡುವ ಮೂಲಕ ಸಮಾಜದ ದರ್ಪಣವಾಗಿ ಸಮಗ್ರ ಪ್ರಭ ಪತ್ರಿಕೆ ಕಾರ್ಯ ನಿರ್ವಹಿಸಲಿ ಎಂದು ಶ್ರೀಗಳು ಹಾರೈಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿರಾಜುದ್ದೀನ ಧಾರವಾಡ ಮಾತನಾಡಿ ಪತ್ರಿಕೆಗಳು ಸಮಾಜದಲ್ಲಿ ನೊಂದವರ ಧ್ವನಿಯಾಗಿ ನ್ಯಾಯ ಒದಗಿಸುವಂತಹ ಕೆಲಸ ಮಾಡುತ್ತಿವೆ, ಸಮಗ್ರ ಪ್ರಭ ಪತ್ರಿಕೆಯು ರಾಜ್ಯ ಮಟ್ಟದಲ್ಲಿ ಪ್ರಸರಿಸಲಿ, ಪತ್ರಿಕೆಗೆ ಒಳ್ಳೆಯದಾಗಲಿ ಎಂದರು…

ಈ ಸಂದರ್ಭದಲ್ಲಿ ಸಮಗ್ರ ಪ್ರಭ ಪತ್ರಿಕೆಯ ತಾಲೂಕಾ ವರದಿಗಾರ ಶರೀಪ ಹುಡೇದ ಅವರನ್ನು ಸನ್ಮಾನಿಸಲಾಯಿತು.

- Advertisement -
Ad image

ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ಮಂಜುನಾಥ ಬೈಲೂರ, ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಮಠಪತಿ, ಮಹಮ್ಮದಲಿ ಮಿರ್ಜಿ, ನಿಂಗಪ್ಪ ಕುಂಬಾರ, ಗಂಗಾಧರ ಕತ್ತಿ, ಅಕ್ಬರ ಮುಲ್ಲಾ, ಬಸಯ್ಯ ಮಠಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this Article