ನವಲಗುಂದ: ನಾಡು, ನುಡಿ, ನೆಲ ಜಲದ ವಿಷಯ ಬಂದಾಗ ಟೋಂಕ ಕಟ್ಟಿ ನಿಲ್ಲುವಂತಹ ಎದೆಗಾರಿಕೆಯಿಂದ ಹೋರಾಟಕ್ಕಿಳಿಯುವಂತಹ ವ್ಯಕ್ತಿ ಕರ್ನಾಟಕ ರಕ್ಷಣಾ ವೇದಿಕೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿರಾಜುದ್ದೀನ ಧಾರವಾಡ.
ಹೌದು, ಗಂಡು ಮೆಟ್ಟಿದ ನಾಡು ಬಂಡಾಯದ ನೆಲದಲ್ಲಿ ಸುಮಾರು ಹತ್ತು ವರ್ಷಗಳಿಂದ ನಡೆಯುತ್ತಿರುವಂತಹ ಕಳಸಾ-ಬಂಡೂರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗುವುದರ ಜೊತೆಗೆ ಕನ್ನಡ ಭಾಷೆಯ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತಾ ರಾಜಕೀಯವಾಗಿಯೂ ಸಿರಾಜುದ್ದಿನ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಸಂಘಟನೆ ಕಟ್ಟಿಕೊಂಡು ಬಡವರ ಧ್ವನಿಯಾಗಿ ಜನ ನಾಯಕರಾಗಿ ಗುರುತಿಸಿಕೊಂಡಿದ್ದಾರೆ, ಸ್ಥಳೀಯ ಅಂಜುಮನ್-ಏ-ಇಸ್ಲಾಂ ಸಂಸ್ಥೆಯಲ್ಲಿ ಸದಸ್ಯರಾಗಿ ಮುಸ್ಲಿಂ ಸಮುದಾಯದಲ್ಲಿಯು ಅಭಿವೃದ್ಧಿ ಕೆಲಸಕ್ಕೆ ಶ್ರಮಿಸುತ್ತಿದ್ದಾರೆ, ಸರ್ವ ಧರ್ಮ ದವರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಅವರು ಜನ ನಾಯಕರಾಗಿ ಹೋರಾಟ ಮುಂದುವರೆಸಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯ.
ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದಂದು ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರ ಹುಟ್ಟುಹಬ್ಬದಂದು ರಕ್ತದಾನ ಶಿಬಿರ ಏರ್ಪಡಿಸಿ ಸಾಕಷ್ಟು ಜನರಿಗೆ ಅನಕೂಲ ಮಾಡಿದ್ದಾರೆ.

ಸಿರಾಜ್ ಅವರು ಸಂಘಟನಾ ಚತುರರು, ಎಲ್ಲರ ಜೊತೆಗೂ ಉತ್ತಮ ಭಾಂದವ್ಯ ಹೊಂದಿರುವ ಅವರು ಬಡವರ ಸ್ನೇಹ ಜೀವಿ, ಮಹದಾಯಿ ಹೋರಾಟದಲ್ಲಿ ಭಾಗವಹಿಸಿದ ಅವರಿಗೆ ಕನ್ನಡ ಪರ ಹೋರಾಟದ ಕಟ್ಟಾಳು ಅಂದ್ರೆ ತಪ್ಪೇನಿಲ್ಲ.
* ಮಾಬುಸಾಬ ಯರಗುಪ್ಪಿ,
ಸಾಮಾಜಿಕ ಕಾರ್ಯಕರ್ತ, ನವಲಗುಂದ
ಬಂಡಾಯದ ನೆಲದಲ್ಲಿ ಕನ್ನಡ ಉಳಿವಿಗಾಗಿ ಹೋರಾಟಕ್ಕೇ ಸದಾ ಸಿದ್ದವಿರುವಂತಹ ವ್ಯಕ್ತಿ ಸಿರಾಜ್ ಅಂತಾ ಹೇಳಬಹುದು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಾಮಾಣಿಕ ಹೋರಾಟಗಾರ ಭವಿಷ್ಯದಲ್ಲಿ ನಾಯಕರಾಗಲಿ.
* ಮಲ್ಲಿಕಾರ್ಜುನಸ್ವಾಮಿ ಮಠಪತಿ,
ರೈತ ಮುಖಂಡರು, ಗೊಬ್ಬರಗುಂಪಿ
ಪ್ರತಿ ಹೋರಾಟದಲ್ಲಿ ಭಾಗವಹಿಸುವ ಸಿರಾಜುದ್ದೀನ ಧಾರವಾಡ ಅವರು ಸರ್ವ ಸಮುದಾಯದ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ, ಅವರು ಮುಂದೆ ದೊಡ್ಡ ಮಟ್ಟದ ನಾಯಕರಾಗಲಿ ಎನ್ನುವುದೇ ನನ್ನ ಆಸೆ.
* ರಮೇಶ ಮಲ್ಲದಾಸರ,
ತಾಲೂಕಾ ಅಧ್ಯಕ್ಷರು, ಭೀಮ ಆರ್ಮಿ, ನವಲಗುಂದ
ಲೇಖನ :
ಶರೀಪ ಹುಡೇದ

