ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನ ತೆರವಾಗಿದೆ. ಅಧ್ಯಕ್ಷೆಯಾಗಿದ್ದ ಗಂಗವ್ವ ದ್ಯಾಮಪ್ಪ ಜಂಗಣ್ಣವರ ಅವರ ವಿರುದ್ಧ ವಿರೋಧ ಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಒಟ್ಟು ೧೩ಸದಸ್ಯರ ಪೈಕಿ ೯ಸದಸ್ಯರು ಇಂದು ಅವಿಶ್ವಾಸ ನಿರ್ಣಯ ಸಭೆಗೆ ಹಾಜರಿದ್ದುದರಿಂದ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಕೋರಂ ಭರ್ತಿಯಾಗಿದೆ ಎಂಬ ನಿರ್ಧಾರಕ್ಕೆ ಬಂದ ನಂತರ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಿದರು.
ಹಾಜರಿದ್ದ ಒಂಭತ್ತು ಸದಸ್ಯರೂ ನಿರ್ಣಯದ ಪರ ಇದ್ದುದರಿಂದ ಚುನಾವಣಾಧಿಕಾರಿ ಗಂಗಪ್ಪ ಅಧ್ಯಕ್ಷ ಸ್ಥಾನ ತೆರವಾಗಿದೆ ಎಂದು ರೂಲಿಂಗ್ ನೀಡಿದರು.
ಈ ಹಿಂದೆಯೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಅದಕ್ಕೆ ಸಭೆ ಸೇರುವ ಸಮಯದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದ್ದುದರಿಂದ ಅವಿಶ್ವಾಸ ನಿರ್ಣಯ ಸಭೆ ಇಂದಿಗೆ ಮುಂದೂಡಲ್ಪಟ್ಟಿತ್ತು.
ಈ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಚುನಾವಣಾಧಿಕಾರಿಯಾಗಿ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಕ್ಕಲಿ ಗಾಪಂ ಪಿಡಿಒ ಎಸ್.ಎಸ್. ರಿತ್ತಿ, ಸಿಬ್ಬಂದಿ ಚಂದ್ರಕಲಾ ಕೆ.ಕೆ. ಇನ್ನಿತರರಿದ್ದರು.
ನರೇಗಲ್ಲ ಠಾಣಾ ಪಿಎಸ್ಐ ಐಶ್ವರ್ಯ ನಾಗರಾಳ ಹಾಗೂ ಸಿಬ್ಬಂದಿಗಳು ಹಾಗೂ ರೋಣ ಠಾಣಾ ಕ್ರೈಂ ಪಿಎಸ್ಐ ವೀರಣ್ಣ ಸವಡಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.
ಕಾರ್ಯಕರ್ತರ ವಿಜಯೋತ್ಸವ: ಅವಿಶ್ವಾಸ ನಿರ್ಣಯಕ್ಕೆ ಜಯ ಸಿಗುತ್ತಿದ್ದಂತೆ ವಿರೋಧಿ ಪಾಳೆಯದ ಕಾಂಗ್ರೆಸ್ ಸದಸ್ಯರು ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಜೈ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು. ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ಶಿವರಾಜ ಮುಗಳಿ, ರಮೇಶ ಪಲ್ಲೇದ, ಸಂತೋಷ ಕೋರಿ, ಗುರಪ್ಪ ರೋಣದ, ಬಸವರಾಜ ಶ್ಯಾಶೆಟ್ಟಿ, ಸದಸ್ಯೆಯರಾದ ಅನ್ನಪೂರ್ಣ ಮುಗಳಿ, ಸುವರ್ಣ ತಳವಾರ, ಬಿಬಿಜಾನ ಕದಡಿ, ನಿರ್ಮಲಾ ಆದಿ, ಕಾರ್ಯಕರ್ತರಾದ ಸಂದೇಶ ದೊಡ್ಡಮೇಟಿ, ವೀರಭದ್ರಪ್ಪ ಗಾಣಿಗೇರ, ರುದ್ರಪ್ಪ ದೊಡ್ಡಮೇಟಿ, ಶ್ರೀನಿವಾಸ ಹುಲ್ಲೂರ, ವಿಜಯ ದೊಡ್ಡಮೇಟಿ, ಮುತ್ತು ಮೇಟಿ, ಪ್ರಕಾಶ ಕೋರಿ, ಬಂಧು ಗಡಾದ, ಮಂಜುನಾಥ ದೊಡ್ಡಮೇಟಿ, ಚನ್ನಬಸವ ಅರಹುಣಸಿ, ಮುತ್ತಪ್ಪ ತಳವಾರ, ಫಕೀರಪ್ಪ ಮಾದರ, ಬಸವರಾಜ ಮುಗಳಿ, ಅಂದಪ್ಪ ಕಟ್ನಳ್ಳಿ, ವಿಜಯ ತಳವಾರ, ಯಲ್ಲಪ್ಪ ಮಾದರ, ಮಾಬುಸಾಬ ನದಾಫ್, ರಾಜಸಾಬ ಜಿಡ್ಡಿಮನಿ ಸೇರಿದಂತೆ ಇನ್ನಿತರರು ಇದ್ದರು.
