ಉಚಿತ ನೇತ್ರ ಪರೀಕ್ಷೆ ಹಾಗೂ ಗಾಜು ಬಿಂದು ಅಳವಡಿಕೆ ಶಸ್ತ್ರ ಚಿಕಿತ್ಸೆ
ಕಣ್ಣಿನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶ್ರೀ ಗುರುಪಾದ ಮಹಾಸ್ವಾಮೀಜಿ
ರೋಣ : ಪ್ರತಿಯೊಬ್ಬರಿಗೂ ನೇತ್ರ ಅತೀ ಮಹತ್ವದ್ದು, ಕಣ್ಣಿನ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ರೋಣ ಗುಲಗಂಜಿಮಠದ ಶ್ರೀ ಗುರುಪಾದ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ರಾಜೀವಗಾಂಧಿ ಆಯುರ್ವೇದಿಕ ಮೆಡಿಕಲ್ ಕಾಲೇಜ್ ನಲ್ಲಿ ಸೋಮವಾರ ಆಯೋಜಿಸಿದ್ದ ಮಾತೋಶ್ರೀ ಬಸಮ್ಮನವರ 21ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯ ಎಸ್.ಬಿ.ಲಕ್ಕೋಳ ಮಾತನಾಡಿ, ಮಾತೋಶ್ರೀ ಬಸಮ್ಮನವರು ಹಲವು ಜನಪರ ಕಾರ್ಯಗಳ ಮೂಲಕ ಹೆಸರುವಾಸಿಯಾಗಿದ್ದರು. ಬಡ ಹೆಣ್ಣು ಮಕ್ಕಳಿಗೆ ಟೈಲರ್ ತರಬೇತಿಯನ್ನು50 ವರ್ಷಗಳ ಹಿಂದೆಯೇ ಆರಂಭಿಸಿ ನೆರವಾಗಿದ್ದರು ಎಂದರು.
ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ.ಬಿ.ಸೋಮನಕಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಮಾತೋಶ್ರೀ ಬಸಮ್ಮನವರ 21ನೇ ಪುಣ್ಯ ಸ್ಮರಣೋತ್ಸವ ಐದು ದಿನಗಳ ಕಾಲ ನಡೆಯಲಿದ್ದು ಮೊದಲನೇ ದಿನವಾದ ಇಂದು ತಜ್ಞ ವೈದ್ಯರಿಂದ ಉಚಿತ ನೇತ್ರ ಪರೀಕ್ಷೆ ಹಾಗೂ ಗಾಜುಬಿಂದು ಅಳವಡಿಕೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಹಾಗೂ ನಾಳೆ ಗಜೇಂದ್ರಗಡದ ಸಾಯಿದತ್ತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಹೃದಯ ರೋಗ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ, ಮೂರನೇ ದಿನವಾದ ಬುಧುವಾರ ದಿನಾಂಕ 30 ಏಳು 2025 ರಂದು ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆಸ್ಪತ್ರೆ, ರೋಣದಲ್ಲಿ ಎಚ್ ಪಿ ವಿ ಉಚಿತ ಲಸಿಕಾ ಅಭಿಮಾನವನ್ನು ಹಮ್ಮಿಕೊಳ್ಳಲಾಗಿದೆ ಇದು ಹೆಣ್ಣು ಮಕ್ಕಳಲ್ಲಿ ಬರಬಹುದಾದ ಗರ್ಭಾಶಯ ಮತ್ತು ವಿವಿಧ ಕ್ಯಾನ್ಸರ್ಗಳನ್ನು ತಡೆಗಟ್ಟುವ ಲಸಿಕೆಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವಾಗಿದೆ. 31/ 7/ 2025 ರ ಗುರುವಾರದಂದು ಶ್ರೀ ರೇಣುಕಾಚಾರ್ಯ ಶಾಲೆಯ ಆವರಣ ಹಿರೇಮಠ, ನೆರೆಗಲ್ಲ ದಲ್ಲಿ ಮಹಿಳಾ ಘೋಷ್ಠಿ ಕಾರ್ಯಕ್ರಮ ಹಾಗೂ ಶುಕ್ರವಾರದಂದು ಮಾತುಶ್ರೀ ಅವರ ಪುಣ್ಯರಾಧನೆಯನ್ನು ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನಮ್ಮ ತಾಯಿ ಶ್ರೀಮತಿ ಬಸಮ್ಮನವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ. ಅವರ ಪುಣ್ಯಸ್ಮರಣೋತ್ಸವ ಅಂಗವಾಗಿ ನಾಲ್ಕು ದಿನ ವಿವಿಧ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿಯೊಬ್ಬರೂ ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆರ್.ಎಸ್. ಪಾಟೀಲ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ, ಸಮಿತಿ ಅಧ್ಯಕ್ಚ ವೀರಭದ್ರಗೌಡ ಪಾಟೀಲ, ಬಸವರಾಜ ನವಲಗುಂದ, ಡಾ. ಕೆ.ಬಿ. ದನ್ನೂರ, ತಾಲೂಕ ಆರೋಗ್ಯ ಅಧಿಕಾರಿ ಡಾ. ಬಿ ಎಸ್ ಬಜೇಂತ್ರಿ, ವೀರಭದ್ರಗೌಡ ಪಾಟೀಲ್, ವಿಶ್ವನಾಥ್ ಜಿಡ್ಡಿಬಾಗಿಲು, ದಶರತ್ ಗಾಣಿಗೇರ್, ವೀರಣ್ಣ ಶೆಟ್ಟರ್, ವಿ.ಆರ್. ಗುಡಿಸಾಗರ, ಮಿಥುನ್ ಪಾಟೀಲ, ಅಕ್ಷಯ ಪಾಟೀಲ, ಸಂಜಯ್ ದೊಡ್ಡಮನಿ, ಆಯುರ್ವೇದಿಕ ಕಾಲೇಜ್ ಪ್ರಾಚಾರ್ಯ ಐ.ಬಿ. ಕೊಟ್ಟೂರಶೆಟ್ಟರ್ ಇದ್ದರು.

