ಯೂರಿಯಾ ಗೊಬ್ಬರದ ಕೊರತೆ ಅನ್ನದಾತರ ಪರದಾಟ||ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ
ಗದಗ : ಕಳೆದ ಒಂದು ವಾರದಿಂದ ಜಿಲ್ಲಾಧ್ಯಂತ ಮಳೆಯಾಗುತ್ತಿದ್ದು ಬಿತ್ತಿದ ಬೆಳೆ ರೈತರ ಜಮೀನಿನಲ್ಲಿ ಚೆನ್ನಾಗಿ ಬೆಳೆಯುತ್ತಿದೆ ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ ಆದರೆ ಬೆಳೆಗಳಿಗೆ ನೀಡುವ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ ಉಂಟಾಗಿದ್ದು ರೈತರು ಗೊಬ್ಬರಕ್ಕಾಗಿ ರಾತ್ರಿ,ಹಗಲು ಎನ್ನದೇ ಮಳೆ ಚಳಿಯಲ್ಲಿ ಕಿಲೋ ಮೀಟರ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಯೂರಿಯಾ ಗೊಬ್ಬರ ಖರೀದಿಸಲು ಪರದಾಟ ನಡೆಸುತ್ತಿದ್ದಾರೆ.
ಗದಗ ,ಲಕ್ಷ್ಮೇಶ್ವರ,ಮುಂಡರಗಿ,ನರಗುಂದ,ಶಿರಹಟ್ಟಿ ತಾಲೂಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಗೋವಿನ ಜೋಳ, ಶೇಂಗಾ ಸೇರಿದಂತೆ ಹಲವು ಬೆಳೆಗಳಿಗೆ
ರೈತರು ಗೊಬ್ಬರ ಖರೀದಿಸಲು ಟ್ರ್ಯಾಕ್ ಟರ್ ನಲ್ಲಿ ಮಲಗಿಕೊಂಡು ಮುಂಜಾನೆ, ಗೊಬ್ಬರದ ಅಂಗಡಿ ಮುಂದೆ ಪಾಳೆ ಹಚ್ಚುತ್ತಿದ್ದಾರೆ.
ದಿನಕ್ಕೆ 150 ರೈತರಿಗೆ ಮಾತ್ರ ಗೊಬ್ಬರ:

ಒಂದು ದಿನಕ್ಕೆ 150 ರೈತರಿಗೆ ಮಾತ್ರ ತಲಾ ಒಬ್ಬರಿಗೆ ಎರಡು ಚೀಲದಂತೆ ಯೂರಿಯಾ ಗೊಬ್ಬರ ನೀಡುತ್ತಿದ್ದಾರೆ ಇದರ ಜೊತೆಗೆ ಜಿಂಗ್ ನ್ನು ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಕೆಲವು ಅಂಗಡಿಕಾರರು ಶ್ರೀಮಂತ ರೈತರಿಗೆ, ತಮಗೆ ಬೇಕಾದವರಿಗೆ ಹೆಚ್ಚಿನ ಗೊಬ್ಬರವನ್ನು ನೀಡುತ್ತಿದ್ದಾರೆ ಎಂದು ರೈತರು ಗಂಭೀರವಾದ ಆರೋಪ ಮಾಡಿದ್ದಾರೆ.
ಹೆಚ್ಚಿನ ದರ ಮಾರಾಟ ಮಾಡಿದರೆ ಲೈಸನ್ಸ್ ರದ್ದು :
ಯೂರಿಯಾ ಗೊಬ್ಬರದ MRP ದರ 266 ರೂ ಇದ್ದು ಟ್ರಾನ್ಸಪೋರ್ಟ್ ಚಾರ್ಚ್ 10-20 ರೂ ಹೆಚ್ಚಿಗೆ ಹಾಕುತ್ತಿದ್ದಾರೆ ಈಗಾಗಲೇ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದ್ದು ಯಾವುದೇ ಕಾರಣಕ್ಕೂ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ ಹೆಚ್ಚಿನ ಹಣ ಪಡೆದರೆ ತಕ್ಷಣ ಹೋಗಿ ಅವರಿಗೆ ನೋಟಿಸ್ ಕೊಡಬೇಕು ಒಂದು ಎರಡು ಸಲ ನೋಟಿಸ್ ಕೊಟ್ಟು ವಾರ್ನ್ ಮಾಡಿ
ಅಷ್ಟು ಮೀರಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅವರ ಲೈಸೆನ್ಸ್ ರದ್ದು ಮಾಡುಬೇಕೆಂದು ಎಚ್ಚರಿಕೆ ನೀಡಲಾಗಿದೆ.
ಗದಗ ಜಿಲ್ಲೆಯಲ್ಲಿ 5 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಕೊರತೆ ಇದೆ:
ಜಿಲ್ಲೆಯಲ್ಲಿ 15 ಸಾವಿರ 7 ನೂರು ಮೆಟ್ರಿಕ್ ಟನ್ ಜುಲೈ ಅಂತ್ಯಕ್ಕೆ ಯೂರಿಯಾ ರಸಗೊಬ್ಬರ ಬೇಡಿಕೆ ಇದೆ.
20 ಸಾವಿರ 934 ಟನ್ ಸಪ್ಲಾಯ್ ಆಗಿದೆ 19 ಸಾವಿರ 222 ಮೆಟ್ರಿಕ್ ಟನ್ ಈಗಾಗಲೇ ಮಾರಾಟವಾಗಿದೆ.
ಸದ್ಯ 1700 ಟನ್ ಗೊಬ್ಬರ ಲಭ್ಯವಿದೆ
ಈ ವರ್ಷ ಅತೀ ಹೆಚ್ಚಿನ ಯೂರಿಯಾ ಬೇಡಿಕೆ ಬಂದಿದೆ ರೈತರು ಮುಂಗಾರು ಹಂಗಾಮಿನಲ್ಲಿ 3 ಲಕ್ಷ 6 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇತ್ತು.
ಹೆಸರು 1 ಲಕ್ಷ 25 ಹೆಕ್ಟೇರ್ ಬಿತ್ತನೆ ಆಗಿದೆ ಗೋವಿನಜೋಳ 1 ಲಕ್ಷ 15 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇತ್ತು,
ಆದ್ರೆ ರೈತರು ಈ ಬಾರಿ 1 ಲಕ್ಷ 45 ಸಾವಿರ ಹೆಕ್ಟೇರ್ ಬಿತ್ತನೆ ಮಾಡಿದ್ದಾರೆ.
ಗೋವಿನ ಜೋಳ 30 ಸಾವಿರ ಹೆಕ್ಟೇರ್ ಬಿತ್ತನೆ ಪ್ರಮಾಣ ಹೆಚ್ಚಿಗೆ ಆಗಿದೆ.
ಇದರಿಂದ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ 5000 ಟನ್ ಕೊರತೆ ಆಗಿದೆ ಈ ಕುರಿತು ಕೇಂದ್ರ ಕಚೇರಿಯ ಆಯುಕ್ತರ ಗಮನಕ್ಕೆ ತರಲಾಗಿದೆ.
* ತಾರಾಮಣಿ ಜಿ ಎಚ್,
ಕೃಷಿ ಇಲಾಖೆ ಜಂಟಿ ನಿರ್ದೇಶಕಿ,ಗದಗ

