ಗದಗ: ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿ ದ್ವಿಚಕ್ರ ವಾಹನ ಸವಾರಿಬ್ಬರು ಬೇಗವಾಗಿ ಬೈಕ ಚಲಾಯಿಸಿದ ಪರಿಣಾಮ ನಿಯಂತ್ರಣ ಸಿಗದೆ ಡಿವೈಡರ್ ಹಾಗೂ ಅಲ್ಲಿನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ವಾಹನ ಸವಾರಿಬ್ಬರು ಸಾವನಪ್ಪಿದ ಘಟನೆ ತಡ ರಾತ್ರಿ ನಡೆದಿದೆ.
ಓರ್ವ ಸ್ಥಳದಲ್ಲೆ ಸಾವು, ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವಾಗ ದಾರಿಮದ್ಯೆ ಸಾವುನಪ್ಪಿದ್ದಾನೆ.
ಮೃತರು ಗದಗ ನಗರದ ಜವಳಗಲ್ಲಿಯವರು ಎಂದು ತಿಳಿದು ಬಂದಿದ್ದು ಅಮನ್ ಮುಳಗುಂದ(25), ಜುನೇದ್ ಕಾಗದಗಾರ(20) ಮೃತ ದುರ್ದೈವಿಗಳಾಗಿದ್ದಾರೆ.
ಮುಳಗುಂದ ನಾಕಾದಿಂದ ಭೀಷ್ಮ ಕೆರೆ ಕಡೆ ಹೋಗುವಾಗ ನಡೆದ ಅಪಘಾತ ನಡೆದಿದ್ದು ಅಪಘಾತದ ರಭಸಕ್ಕೆ ವಿದ್ಯುತ್ ಕಂಬದ ಮೇಲಿಂದ ಬಲ್ಬ್ ಗಳು ಕೆಳಗೆ ಬಿದ್ದಿವೆ.
ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

