ಮಾಜಿ ಸೈನಿಕರ ಕಲ್ಯಾಣ ಸಂಘದ ವತಿಯಿಂದ ಕಾರ್ಗಿಲ್ ವಿಜಯಯೋತ್ಸವ ಆಚರಣೆ

Samagraphrabha
1 Min Read

ನವಲಗುಂದ: ಭಾರತೀಯರಿಗೆ ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕಾರ್ಗಿಲ್‌ ವಿಜಯೋತ್ಸವವಾಗಿದೆ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು..

ಪಟ್ಟಣದ ಮಾಡೆಲ್ ಹೈಸ್ಕೂಲನಲ್ಲಿ ಅಯೋಜಿಸಿದ್ದ 26ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಈ ವಿಜಯೋತ್ಸವವು ಭಾರತೀಯ ಪ್ರತಿಯೂಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ ಎಂದರು.

ಈ ಸಂದರ್ಭದಲ್ಲಿ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ‌ ಹಾಗೂ ನಾಗಲಿಂಗಸ್ವಾಮಿ ಮಠದ ಶ್ರೀ ವೀರೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ವಹಿಸಿದ್ದರು. ರಾಯನಗೌಡ ಪಾಟೀಲ, ಪರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಜೀವನ ಪವಾರ, ತಾಲ್ಲೂಕಾ ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ಅಡಿವೆಪ್ಪಗೌಡ ನಾಗನಗೌಡ್ರ, ಉಪಾಧ್ಯಕ್ಷ ರಾಮಚಂದ್ರ ತಹಶೀಲ್ದಾರ ಸದಸ್ಯರಾದ ಈರಪ್ಪ ಬಾಂತಗೇರಿ, ಮಂಜು ಲಕ್ಕಣ್ಣವರ, ಮಹಾಂತೇಶ ಗಲಗಲಿ, ಶರಣಪ್ಪ ಬೆಡಸೂರ, ಬಸವರಾಯ ಅಕ್ಕಿ, ಬಸವರಡ್ಡಿ ಕರಡ್ಡಿ, ಶಿವಪ್ಪ ಗುಳೇದ, ಗಿರೀಶ ದೇವರಡ್ಡಿ, ರುದ್ರಪ್ಪ ದೊಡಮನಿ, ಗುರುಸಿದ್ದಪ್ಪ ಕಟ್ಟಿಮನಿ ಉಪಸ್ಥಿತರಿದ್ದರು.

Share this Article