ಬ್ರೈಟ್ ಬಿಗಿನಿಂಗ್ ಶಾಲಾ ಮಕ್ಕಳಿಂದ ಸೈನಿಕರಿಗೆ ಪುಷ್ಪ ನಮನ

Samagraphrabha
1 Min Read

ಗಜೇಂದ್ರಗಡ: ನಗರದ ಸಮೀಪದ ಸೈನಿಕ ನಗರ ಹತ್ತಿರದ ಬ್ರೈಟ್ ಬಿಗಿನಿಂಗ್ ಶಾಲಾ ಮಕ್ಕಳು ಶನಿವಾರ ಕಾರ್ಗಿಲ್ ವಿಜಯ ದಿವಸವನ್ನು ಅತ್ಯಂತ ಭಾವಪೂರಿತ ಹಾಗೂ ದೇಶಭಕ್ತಿಯ ಮನೋಭಾವದಲ್ಲಿ ಆಚರಿಸಿದರು.

ಬಳಿಕ ಶಾಲಾ ಮಕ್ಕಳು ಶಹೀದರಾದ ಸೈನಿಕರ ಅಮರ ಜವಾನ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಸೈಲೂಟ್ ಮಾಡಿ ದೇಶ ಭಕ್ತಿ ಮೆರೆದರು.

ಬಳಿಕ ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್ ಮಾತನಾಡಿ
ಕಾರ್ಗಿಲ್ ವಿಜಯ ದಿವಸವು ನಮಗೆ ತ್ಯಾಗ, ಶೌರ್ಯ, ಹಾಗೂ ದೇಶಭಕ್ತಿಯ ಮಾದರಿಯನ್ನು ತೋರಿಸುತ್ತದೆ. ಶಹೀದರಾದ ಸೈನಿಕರ ಬದಲಿ ಮಾಡಲಾಗದ ಕೊಡುಗೆಗೆ ನಾವು ಸದಾ ಋಣಿ” ಎಂದು ಹೇಳಿದರು.

ಬಳಿಕ ಮಾಜಿ ಸೈನಿಕರಾದ ಎಲ್.ಎಮ್.ಮುಧೋಳ, ಎಸ್.ವಾಯ್.ವೇದಾರ ಮಾತನಾಡಿ
ಕಾರ್ಗಿಲ್ ಯುದ್ಧವನ್ನು ಪಾಕಿಸ್ತಾನ ಹೇರಿತು. ಆಪರೇಷನ್ ವಿಜಯ್ ಅಡಿಯಲ್ಲಿ ಭಾರತವು ಶತ್ರುಗಳಿಗೆ ಸೂಕ್ತ ಉತ್ತರ ನೀಡಿತು. ಕಾರ್ಗಿಲ್ ಒಂದು ಸವಾಲಿನ ಸ್ಥಳವಾಗಿತ್ತು. ಅಲ್ಲಿ ಹಗಲಿನಲ್ಲಿಯೂ ತಾಪಮಾನ ಮೈನಸ್ 50 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಪಾಕಿಸ್ತಾನದ ಹೇಡಿಗಳು ಭಾರತೀಯ ಸೇನೆಯ ಶಕ್ತಿಯ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ.” ಎಂದು ಕಾರ್ಗಿಲ್‌ ಯುದ್ಧದ ಇತಿಹಾಸವನ್ನು ಸ್ಮರಿಸಿದರು

- Advertisement -
Ad image

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸೀತಲ ಓಲೇಕಾರ, ಕಳಕಪ್ಪ ಡೊಳ್ಳಿನ, ಎಚ್.ಎಚ್.ಮಾದರ, ಬಾಳಮ್ಮ ಗೌಡರ, ಎಮ್.ಎನ್.ವೈಧ್ಯ, ಎಚ್.ಬಿ.ಉಪ್ಪಾರ, ಎಸ್.ಬಿ.ಮಾರನಬಸರಿ, ಎಸ್.ಪಿ.ಕುರುಮನಾಳ, ಎಚ್.ಅಕ್ಬರ್ ಅಲಿಸಾಬ ಸೇರಿದಂತೆ ಮುದ್ದು ಮಕ್ಕಳು ಇದ್ದರು.

Share this Article