ಲಕ್ಷ್ಮೇಶ್ವರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಲಕ್ಷ್ಮೇಶ್ವರ ವತಿಯಿಂದ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಬಸ್ಸ ಸೌಲಭ್ಯ ಹಾಗೂ ಸರ್ಕಾರಗಿಂದ ನೀಡುವ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದ ಬಸ್ಟ್ಯಾಂಡನ ರಸ್ತೆ ತಡೆದು ನೂರಾರು ವಿದ್ಯಾರ್ಥಿ ಸರಕಾರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ ತಾಲೂಕಿನ ಸುತ್ತಮುತ್ತಲಿನ ವಿವಿಧ ಗ್ರಾಮದ ನೂರಾರು ಪಟ್ಟಣಕೆಕ ವಿದ್ಯಾರ್ಥಿಗಳುಶಾಲಾ ಕಾಲೇಜಿಗೆ ಬರುತ್ತಾರೆ ಆದರೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದೆ ಇರುವ ಕಾರಣಕ್ಕೆ ಪ್ರತಿದಿನ ಎರಡು ಮೂರು ಕ್ಲಾಸ್ ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಮಾಡಬೇಕು.

ಇನ್ನೂ ರಾಜ್ಯ ಸರಕಾರ ವಿದ್ಯಾರ್ಥಿಗಳ ವೇತನ ಬಿಡುಗಡೆ ಮಾಡದೆ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ತಕ್ಷಣ ವಿದ್ಯಾರ್ಥಿಗಳ ವೇತನ ಜಾರಿ ಮಾಡಬೇಕು ಹಾಗೂ ಹಾಸ್ಟೆಲಗಳ ಸಮಸ್ಯೆಗಳನ್ನು ಬಗ್ಗೆ ಗಮನ ಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಎಬಿವಿಪಿ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರ ತಹಶಿಲ್ದಾರ ಧನಂಜಯ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭಿಷೇಕ್ ಉಮಚಗಿ, ಪ್ರಕಾಶ್ ಕುಂಬಾರ, ವಿನಯ್ ಸಪಡ್ಲ,
ಯಶ್ವಂತ್ ಶಿರಹಟ್ಟಿ, ಮನೋಜ್ ತಂಡಗೆರ, ವಿನಾಯಕ ಕುಂಬಾರ, ಅಭಿಷೇಕ್ ಇಸನಗೌಡರ್,
ವಿನಾಯಕ ಹುಂಬಿ, ಅರವಿಂದ ಇಚಾಂಗಿ, ಯುವರಾಜ್ ದುರ್ಗದ, ಈರಣ್ಣ ಕುಂಬಾರ,ಸಂಜನಾ ಪಾಟೀಲ,ರತ್ನಾ ಕಮತದ,ರಕ್ಷಿತಾ ಗಂಟಿ,ಅನುಷಾ,ಸವಿತಾ ಕರೆಯತ್ತಿನ, ಅನು ಅಣ್ಣಿಗೇರಿ,ಗೀತಾ ಹುಲ್ಲೂರ, ತೇಜಸ್ವಿನಿ ಕ್ಷತ್ರಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

