ಪತ್ರಿಕೆ ಓದುವುದರಿಂದ ಜ್ಞಾನವನ್ನು ನೀಡುತ್ತವೆ ತಾಲೂಕು ಪತ್ರಿಕಾ ದಿನಾಚರಣೆಯಲ್ಲಿ ಸ್ವಾಮಿಜಿ ಕರೆ

Samagraphrabha
2 Min Read

ಮುಂಡರಗಿ, : ಪತ್ರಿಕೆಗಳು ನಮಗೆ ನಿಜವಾದ ಜ್ಞಾನವನ್ನು ನೀಡುತ್ತವೆ. ಜಗತ್ತಿನ ಎಲ್ಲ ವಿಷಯಗಳನ್ನು ಪತ್ರಿಕೆಗಳು ನಮಗೆ ಒದಗಿಸುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆಯ ಬದಲಾಗಿ ನಿಯಮಿತವಾಗಿ ಪತ್ರಿಕೆ ಓದಬೇಕು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಸಲಹೆ ನೀಡಿದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳವಾರ ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಹಲವು ರೀತಿಯಿಂದ ನೆರವಾಗುತ್ತವೆ. ಆದ್ದ-ರಿಂದ ವಿದ್ಯಾರ್ಥಿಗಳು ಪತ್ರಿಕೆಗಳ ಓದನ್ನು ನಿರಂತರವಾಗಿ ರೂಢಿಸಿಕೊಳ್ಳಬೇಕು. ಪತ್ರಿಕೆಗಳು ಜ್ಞಾನವಾಗಿದ್ದು ಅವು ನಮ್ಮ ಬದುಕು ರೂಪಿಸುವ ದಾರಿದೀಪಗಳಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಅನ್ನದಾನೀಶ್ವರ ಮಹಾಸ್ವಾಮಿಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಾ ಮುಖ್ಯವಾಗಿದ್ದು, ಮೊದಲು ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು. ಮೊಬೈಲ್ ಬಳಕೆಯ ಬದಲಾಗಿ ಹೆಚ್ಚು ಪುಸ್ತಕ ಹಾಗೂ ಪತ್ರಿಕೆಗಳನ್ನು ಓದಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಸಿ.ಕೆ.ಗಣಪ್ಪನವರ ಅವರಿಗೆ ಜಗದ್ಗುರು ಅನ್ನದಾನೀಶ್ವರ ಮಾದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಎ.ನೂರುಲ್ಲಾಖಾನ್ ಸನ್ಮಾನಿಸಲಾಯಿತು. ಅವರನ್ನುತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶಿವಮೂರ್ತಿ ಹೊಂಬಳಗಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕ ಹಾಗೂ ಪತ್ರಕರ್ತ ಶಿವಕುಮಾರ ಕುಷ್ಟಗಿ ಮಾತನಾಡಿ ಇಂದಿನ ಸ್ವದಾತ್ಮಕ ಯುಗದಲ್ಲಿ ಪತ್ರಿಕೆಗಳ ಓದುವವರ ಸಂಖ್ಯೆ ಕಡಿಮೆಯಾಗಿದ್ದು, ಯುವ ಪೀಳಿಗೆ ಮೊಬೈಲ್ ಬಳಕೆ ಮಾಡುವುದನ್ನು ಬಿಟ್ಟು ಪ್ರತಿನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ರೂಢಿಸಿಕೊಳ್ಳಬೇಕು ಅಂದಾಗ ನಿಮ್ಮ ಜೀವನದಲ್ಲಿ ಯಶಸ್ವಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಗದ್ಗುರು ಅನ್ನದಾನೀಶ್ವರ ಮಾದ್ಯಮ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ಸಿ.ಕೆ.ಗಣಪ್ಪನವರ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ನಾನು ಪತ್ರಿಕೆಯಲ್ಲಿ ನಿರಂತರ ಕಾರ್ಯದಲ್ಲಿ ತೊಡಗಿದ್ದು ಸಮಾಜಮುಖಿ ಹಾಗೂ ಅನೇಕ ಸಾರ್ವಜನಿಕ ವಲಯದಲ್ಲಿ ಅನೇಕ ಸುದ್ದಿಗಳನ್ನು ಸರ್ಕಾರ ಮಟ್ಟಕ್ಕೆ ಜಿಲ್ಲಾಡಳಿತಕ್ಕೆ ಮನ ಮುಟ್ಟುವ ಹಾಗೇ ಕೆಲಸ ಮಾಡಿರುವೆ. ಇಂದಿನ ಯುವ ಪೀಳಿಗೆ ಕೇವಲ ಪತ್ರಿಕೆಯನ್ನು ಓದುವ ಕೆಲಸ ಮಾಡದೇ ಅದರಲ್ಲಿರುವ ಪ್ರಮುಖ ಅಂಶಗಳನ್ನುಗಣನೆಗೆ ತೆಗೆದುಕೊಂಡು ತಮ್ಮ ಜೀವನದಲ್ಲಿ ಅಳವಕೊಳ್ಳಬೇಕೆಂದು ಸಲಹೆ ನೀಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿದರು. ಸಂತೋಷ ಮುರುಡಿ ಸ್ವಾಗತಿಸಿದರು. ಸಿ.ಎಸ್. ಅರಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಹು.ಬಾ. ವಡ್ಡಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವಮೂರ್ತಿ ಹೊಂಬಳಗಟ್ಟಿ ವಂದಿಸಿದರು. ಪತ್ರಕರ್ತರಾದ ಕಾಶಿನಾಥ ಬಿಳಿಮಗ್ಗದ, ಶರಣು ಸೊಲಗಿ ಮಲ್ಲಿಕಾರ್ಜುನಗೌಡ ಪಾಟೀಲ, ಲಕ್ಷ್ಮಣ ದೊಡ್ಡಮನಿ, ಶಿವಕುಮಾರ ಬ್ಯಾಳಿ, ಮಂಜುನಾಥ ಜಾಗಟಗೇರಿ, ಪ್ರಕಾಶ ಅತ್ತರವಾಲಾ, ರಿಯಾಜ್ ಅಹ್ಮದ ದೊಡ್ಡಮನಿ, ವಿಜಯ ಸೊರಟೂರ ಮಹಾಂತ ಸ್ವಾಮೀಜಿ, ರುದ್ರಮುನಿ ಸ್ವಾಮಿಜಿ, ಬಿಜೆಪಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಡಿ.ಡಿ. ಮೋರನಾಳ, ಸ್ಥಾಯಿ ಕಮೀಟಿ ಚೇರಮನ್ ಮಹಮ್ಮದರಫಿ ಮುಲ್ಲಾ,ಹಿರಿಯರಾದ ಕರಬಸಪ್ಪ ಹಂಚಿನಾಳ, ಕೊಟ್ರೇಶ ಅಂಗಡಿ, ಫಕ್ಕೀರಸಾಬ್ ಕಲಕೇರಿ, ರಜನೀಕಾಂತ ದೇಸಾಯಿ, ನಾಗರಾಜ ಹೊಂಬಳಗಟ್ಟಿ, ಎಸ್.ವಿ. ಪಾಟೀಲ, ಪ್ರಮಾದ ಹೊಸಮನಿ, ಧೃವ ಹೂಗಾರ, ಮಂಜುನಾಥ ಕಟ್ಟಿಮನಿ, ಬಸವರಾಜ ನವಲಗುಂದ, ಸೋಮು ಹಕ್ಕಂಡಿ, ಉಪಸ್ಥಿತರಿದ್ದರು.

Share this Article