ನವಲಗುಂದ: ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ವಿಠ್ಠಲ್ ಹರಿ ಮಂದಿರದಲ್ಲಿ ಆಷಾಡ ಮಾಸದ ಪ್ರಯುಕ್ತ ಗುರು ನಾಮದೇವ ಮಹಾರಾಜರ ಪುಣ್ಯತಿಥಿ ಪಲ್ಲಕ್ಕಿ ಸೇವೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಜ್ಞಾನೇಶ್ವರಿ ಗ್ರಂಥ ಸ್ಥಾಪನೆ, ಪಾರಾಯಣ, ಹರಿಪಾಠ, ಪ್ರವಚನ, ಕೀರ್ತನೆ, ಭಜನೆ, ಹರಿ ಜಾಗರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
, ನೀಲಗುಂದ, ಚಿಲಮೂರಿ, ಕುಲಕೋಡ, ಕಂಕನವಾಡಿ, ಹುಲಕೋಟಿ, ಗೊಬ್ಬರಗುಂಪಿ, ಹಣಸಿ, ಹುಲಗಾಪುರ, ಅಳಗವಾಡಿ, ಮೊರಬ, ತುರನೂರು, ಕಂಕ್ಲಿಕೊಪ್ಪ, ಅನ್ವಾಳ, ಮನ್ಸೂರ್, ಯಮನೂರು, ಕರ್ಲವಾಡ, ಚಿತ್ರಬಾನೂಕೋಟೆ, ಶಿಬಾರಗಟ್ಟಿ, ಚಂದ್ರಮಟ್ಟಿ, ಬೇವೂರು, ಕುಪ್ತಾಳ, ಹುಬ್ಬಳ್ಳಿ, ಧಾರವಾಡ, ಮುದ್ದೇನೂರು, ಹುಳಕೊಪ್ಪ, ಬೆಳವಟಗಿ, ಪಡೆಸೂರ, ಬಸಾಪೂರ್, ಲಕ್ಷ್ಮೇಶ್ವರ, ರಾಮದುರ್ಗ ಹಾಗೂ ಶಿರಕೋಳ, ವಾರಕರಿ ಭಜನಾ ಮಂಡಳಿಯವರಿಂದ ಸಾಂಪ್ರದಾಯಿಕ ಭಜನೆ ಕಾರ್ಯಕ್ರಮ ಜರುಗಿದವು.
ಈ ಸಮಯದಲ್ಲಿ ಸತತ 26 ವರ್ಷಗಳಿಂದ ದಿಂಡಿ ಮಹೋತ್ಸವದಲ್ಲಿ ಕೀರ್ತನೆ ಹಾಗೂ ಪ್ರವಚನ ಸೇವೆ ಸಲ್ಲಿಸುತ್ತಾ ಬಂದ ಪುಂಡಲಿಕ ಕುರಹಟ್ಟಿ ಹುಬ್ಬಳ್ಳಿ ಮಹಾರಾಜರಿಗೆ ಶ್ರೀ ಲಾಲಗಡಿ ಮಾರುತಿ ದೇವಸ್ಥಾನದ ಸಮಿತಿಯವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಬುಧವಾರ ದಿವಸ ಬೆಳಿಗ್ಗೆ ವಿಶೇಷ ಪೂಜೆ, ಕಾಕಡಾರತಿ ನಂತರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪ್ರತಿ ಮನೆ ಎದುರು ಪಲ್ಲಕ್ಕಿ ಬಂದಾಗ ಭಕ್ತರು ನೀರು ಹಾಕಿ, ಆರತಿ ಮಾಡಿ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಕಡೆದ, ಸಿದ್ದಪ್ಪ ಬೇವಿನಮಟ್ಟಿ, ಬಾಬು ಗಾಯಕವಾಡ, ಪಕೀರಪ್ಪ ಮಾಳೆ, ಬಸಪ್ಪ ಮುಪ್ಪಯ್ಯನವರ, ವಿಠ್ಠಲ ನೀರಗಾಡಿ, ವಿಠ್ಠಲ ಗುಳೇದ್, ಸಹದೇವ ಗುಳೇದ, ತುಕಾರಾಂ ಜಾದವ್, ಶಿವಾಜಿ, ಪ್ರಕಾಶ ಗುಡಸಲಮನಿ, ಮಂಜುನಾಥ ಆರೇರˌ ಪ್ರಭು ಇಬ್ರಾಹಿಂಪೂರˌ ಸಚೀನ ಕೇರಿಮಠˌ ಮಲ್ಲಿಕಾರ್ಜುನ ಮುಪ್ಪಯ್ಯನವರˌ ಶಿವಾಜಿ ಪವಾರˌ ನವೀನ ಹರಿಹರˌ ಈರಣ್ಣ ಚವಡಿˌ ರಾಯನಗೌಡ ಪಾಟೀಲˌ ಶಂಕರ ತೋಟದˌ ಮಾರುತಿ ವಾಲೀಕಾರˌ ಮಕ್ತುಮ ಗೋವನಕೊಪ್ಪˌ ಶಂಕ್ರು ಹುಣಶೀಮರದ ಹಾಗೂ ಸಮಿತಿ ಸದಸ್ಯರು ಮತ್ತು ತಾಲೂಕಿನ ನಗರ ಹಾಗೂ ಗ್ರಾಮಗಳಿಂದ ಆಗಮಿಸಿದ ವಾರಕರಿ ಸಂತರು, ಮಹಿಳೆಯರು ಹಾಜರಿದ್ದರು.
ನಮ್ಮಲ್ಲಿನ ಸ್ವಾರ್ಥ, ನಾನು ಎನ್ನುವ ಅಹಂಕಾರವನ್ನು ದೂರಮಾಡಿದಾಗ ದೇವರು ನಮ್ಮ ಬಳಿಗೆ ಓಡಿ ಬರುತ್ತಾನೆ ಆದ್ದರಿಂದ ಪರಮಾತ್ಮನ ನಾಮಸ್ಮರಣೆ ಮಾಡಿದಾಗ ಮಾತ್ರ ಪರಮಾತ್ಮ ದರ್ಶನ್ ನೀಡುತ್ತಾನೆ..
ರಾಮಕೃಷ್ಣಾ ಹಂಬರ
ಶಿರಕೋಳ ಮಹಾರಾಜರು
ಈ ನಾಲ್ಕು ದಿನದ ಸಪ್ತಹ ಹರಿ ಸಂಪ್ರದಾಯದ ಯಜ್ಞ ಶ್ರೀ ಪಂಡರಾಪುರದ ವಾಸ್ಕರ್ ಮಹಾರಾಜರು ಹಾಗೂ ಸೂರಕರ್ ಮಹಾರಾಜರ ನೇತೃತ್ವದಲ್ಲಿ ಜರಗುವುದು.
ವಿಠ್ಠಲ ಕಂಕಣ್ಣವಾಡಿ
ಮೃದಂಗಕರಿ

