ರಾಜ್ಯಕ್ಕೆ 1449 ಕೋಟಿ ರೂ. ಬೆಳೆ ಪರಿಹಾರ ; ಕಲಬುರಗಿ ಮತ್ತು ಗದಗ ಜಿಲ್ಲೆಗೆ ಹೆಚ್ಚಿನ ಪರಿಹಾರ

Samagraphrabha
2 Min Read

ಬೆಂಗಳೂರು : 2024-25ನೇ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಹಾನಿಗೆ ಬೆಳೆ ವಿಮೆ ಮಂಜೂರಾಗಿದ್ದು, ರಾಜ್ಯಕ್ಕೆ 1,449 ಕೋಟಿ ರೂ. ಬಿಡುಗಡೆಯಾಗಿದೆ. ಕಲಬುರಗಿ ಹಾಗೂ ಗದಗ ಜಿಲ್ಲೆಗೆ ಬಂಪರ್ ಪರಿಹಾರ ದೊರಕಿದೆ.

ಕಳೆದ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆಗಳಾದ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಹೆಸರು, ನೆಲಗಡಲೆ ಮುಂತಾದ ಬೆಳೆಗಳಿಗೆ ಬೆಳೆವಿಮೆ ಮಂಜೂರಾಗಿದೆ. ಇದರಲ್ಲಿ ಶೇ. ಅರ್ಧಕ್ಕಿಂತ ಹೆಚ್ಚಿನ ಹಣ ಈಗಾಗಲೇ ರೈತರ ಖಾತೆಗಳಿಗೆ ಜಮೆ ಆಗಿದೆ. ಕಳೆದ ಹಲವಾರು ವರ್ಷಗಳಿಂದ 1,400ರಿಂದ 1,600 ಕೋಟಿ ರೂ. ಅಂದಾಜಿನಲ್ಲಿ ರಾಜ್ಯಕ್ಕೆ ಬೆಳೆವಿಮೆ ಬಿಡುಗಡೆಯಾಗುತ್ತಿದೆ. ಅದೇ ರೀತಿ 2024-25ನೇ ಸಾಲಿನ ಮಂಜೂರಾತಿ ಆಗಿರುವ ಒಟ್ಟಾರೆ ಬೆಳೆ ವಿಮೆ ಪರಿಹಾರದಲ್ಲಿ ಸಿಂಹಪಾಲು ಕಲಬುರಗಿ ಹಾಗೂ ಗದಗ ಜಿಲ್ಲೆ ಪಡೆದಿದೆ.

ಕಲಬುರಗಿ ಜಿಲ್ಲೆಗೆ 656 ಕೋಟಿ ರೂ., ಗದಗ ಜಿಲ್ಲೆಗೆ 242 ಕೋ.ರೂ., ಹಾವೇರಿಗೆ 95 ಕೋ. ರೂ., ವಿಜಯಪುರಕ್ಕೆ 97 ಕೋ. ರೂ., ಧಾರವಾಡಕ್ಕೆ 23 ಕೋ. ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ.
ರಾಜ್ಯದಲ್ಲಿ 1,449 ಕೋಟಿ ರೂ. ಬೆಳೆವಿಮೆ ಪರಿಹಾರ 23 ಲಕ್ಷ ರೈತರಿಗೆ ದೊರಕಲಿದೆ.

ಯಾವ ಜಿಲ್ಲೆಗೆ ಎಷ್ಟು ಪರಿಹಾರ?

- Advertisement -
Ad image

ಬೆಂಗಳೂರು ಗ್ರಾಮಾಂತರ 79 ಲಕ್ಷ ರೂ., ಬೆಂಗಳೂರು ನಗರ 4 ಲಕ್ಷ ರೂ., ದಕ್ಷಿಣ ಕನ್ನಡ 2.40 ಲಕ್ಷ ರೂ., ಧಾರವಾಡ 23 ಕೋ. ರೂ., ಹಾವೇರಿ 95 ಕೋ. ರೂ., ಉತ್ತರ ಕನ್ನಡ 1 ಕೋ. ರೂ., ಚಿಕ್ಕಬಳ್ಳಾಪುರ 38 ಕೋ. ರೂ., ಕಲಬುರಗಿ 656 ಕೋ.ರೂ., ಉಡುಪಿ 3 ಲಕ್ಷ ರೂ., ಚಿಕ್ಕಮಗಳೂರು 48 ಲಕ್ಷ ರೂ., ಚಿತ್ರದುರ್ಗ 33 ಕೋ. ರೂ., ದಾವಣಗೆರೆ 44 ಕೋ. ರೂ. ಗದಗ 242 ಕೋ. ರೂ., ಹಾಸನ 26 ಕೋ. ರೂ., ಕೊಡಗು 23 ಲಕ್ಷ ರೂ., ಕೊಲಾರ 1 ಕೋ. ರೂ., ರಾಮನಗರ 2 ಕೋ. ರೂ., ಶಿವಮೊಗ್ಗ 13 ಕೋ. ರೂ., ತುಮಕೂರು 1 ಕೋ. ರೂ., ವಿಜಯನಗರ 70 ಕೋ. ರೂ., ವಿಜಯಪುರ 97 ಕೋ. ರೂ., ಬಳ್ಳಾರಿ 32 ಲಕ್ಷ ರೂ., ಕೊಪ್ಪಳ 34 ಕೋ. ರೂ., ಮೈಸೂರು 39 ಲಕ್ಷ ರೂ., ಯಾದಗಿರಿ 18 ಕೋ. ರೂ., ಬಾಗಲಕೋಟೆ 14 ಕೋ. ರೂ., ಬೆಳಗಾವಿ 24 ಕೋ. ರೂ., ಬೀದರ್ 13 ಕೋ. ರೂ., ಚಾಮರಾಜನಗರ 2 ಕೋ.ರೂ., ಮಂಡ್ಯ 3 ಕೋ. ರೂ., ರಾಯಚೂರು 3 ಕೋ. ರೂ., ಒಟ್ಟು 1,449 ಕೋ. ರೂ. ಬಿಡುಗಡೆಯಾಗಿದ್ದು ಶೀಘ್ರದಲ್ಲೇ ರೈತರ ಖಾತೆಗೆ ಹಣ ಜಮೆ ಆಗುತ್ತದೆ.

Share this Article