ಕನ್ನಡ ಜಾನಪದ ಪರಿಷತ್ ವೇದಿಕೆ ಕಾರ್ಯಕ್ರಮಗಳಿಗಿಂತ ತರಬೇತಿ ಕಾರ್ಯಕ್ರಮಗಳಿಗೆ ಒತ್ತು ನೀಡಲಿದೆ.ಡಾ.ಜಾನಪದ ಬಾಲಾಜಿ.

Samagraphrabha
1 Min Read

ಧಾರವಾಡ: ಜಾನಪದ ಯುವ ಬ್ರಿಗೇಡ್ ವತಿಯಿಂದ ಶ್ರೀ ರಾ.ಹ.ಕೊಂಡಕೇರ ಇವರ ನಿವಾಸದಲ್ಲಿ ನಡೆದ ಮನ – ಮನೆಯಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ.ಜಾ.ಪ ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಕ.ಸಾ.ಪ ಧಾರವಾಡ ಜಿಲ್ಲಾ ಅಧ್ಯಕ್ಷರು,ಕೋಶಾಧ್ಯಕ್ಷರು ,ಉದಯೋನ್ಮುಖ ಗಾಯಕ ಶ್ರೀ ನಿಜಗುಣಿ ಮಂಗಿ,ಹಾಗೂ ಜಾನಪದ ಕಲಾವಿದೆ,ಸೂಲಗಿತ್ತಿ ಚಂದ್ರವ್ವ .ದು.ಹಾದಿಮನಿ ಇವರನ್ನು ಜಿಲ್ಲಾ ಘಟಕದ ವತಿಯಿಂದ ಗೌರವಿಸಿ,ಸನ್ಮಾನಿಸಲಾಯಿತು.
ಉಪಸ್ಥಿತರಿದ್ದ ಎಲ್ಲ ಗಣ್ಯರು ಜಾನಪದದ ಪ್ರಚಾರ ಮತ್ತು ಸಂರಕ್ಷಣೆ ಕುರಿತಾಗಿ ಮಾತನಾಡಿ ಆ ಕೆಲಸವನ್ನು ಧಾರವಾಡ ಜಾನಪದ ಯುವ ಬ್ರಿಗೇಡ್ ಮಾಡುತ್ತಿದೆ ಎಂದು ಶ್ಲಾಘಿಸಿದರು. ಧಾರವಾಡ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಶ್ರೀ ಮಹೇಶ ಎಸ್ ತಳವಾರ ಪ್ರಾಸ್ತಾವಿಕವಾಗಿ‌ ಮಾತನಾಡಿದರು.ಜಿಲ್ಲಾ ಸಹ ಸಂಚಾಲಕರು ಹಾಗೂ ಕಾರ್ಯಕ್ರಮ ಆತಿಥ್ಯ ವಹಿಸಿದ್ದ ಶ್ರೀ ರಾ.ಹ.ಕೊಂಡಕೆರವರು ಘನ ಉಪಸ್ಥಿತಿ ವಹಿಸಿದ್ದರು.ನೈ.ರೈ.ಕ.ಸಂಘ ಧಾರವಾಡ ಶಾಖೆಯ ಕಾರ್ಯದರ್ಶಿಗಳಾದ ಸುರೇಶ ಹೀರೆಣ್ಣವರು ಕಾರ್ಯಕ್ರಮ ನಿರೂಪಿಸಿದರು.

Share this Article