ನವಲಗುಂದ: ರೈತಕುಲದ ಉಳಿವಿಗಾಗಿ ಹಾಗೂ ಶ್ರೇಯೋಭಿವೃದ್ದಿಗಾಗಿ
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕ.ರ.ವೇ ಅಧ್ಯಕ್ಷ ಸಿರಾಜುದ್ದೀನ ಧಾರವಾಡ ಅಭಿಪ್ರಾಯ ವ್ಯಕ್ತಪಡಿಸಿದರು.
1980ರ ಬಂಡಾಯದಲ್ಲಿ ಪೊಲೀಸರ ಗುಂಡಿಗೆ ಹುತಾತ್ಮರಾದ ರೈತ ನಾಯಕ ಅಳಗವಾಡಿಯ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಅವರು ನೆಲ, ಜಲ, ಭಾಷೆ ಅಂತಾ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ, ಯಾವಾಗಲೂ ಹೋರಾಟಕ್ಕೆ ಮುಂದಾಗುತ್ತದೆ, ಅದೇ ರೀತಿ ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ಹೋರಾಟಕ್ಕೆ ನಮ್ಮ ಸಂಘಟನೆ ಸದಾ ಸಿದ್ದವಾಗಿದೆ ಎಂದರು..
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದಿಂದ ಧಾರವಾಡ ಜಿಲ್ಲೆಗೆ ನೂತನವಾಗಿ ಬಂದಂತಹ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರನ್ನು ಸನ್ಮಾನಿಸಲಾಯಿತು.
ಎಮ್.ಎಮ್. ಮುಲ್ಲಾ, ಮಲ್ಲಿಕಾರ್ಜುನ ಕಾಲವಾಡ, ಮೈಲಾರಪ್ಪ ಹಗ್ಗಣ್ಣವರ, ಪ್ರಕಾಶ ಗೊಂದಳೆ, ವಿರೇಶ್, ಸಂತೋಷ್, ಅನ್ವರ ಮೂಲಿಮನಿ, ಇಮ್ತಿಯಾಜ್ ಜಮಖಾನ್, ಮಹಮ್ಮದ ಮಟಿಗಾರ, ಮುನ್ನಾ ಮಾರಿಹಾಳ, ಭಾಷೆಸಾಬ ಹುಗ್ಗಿ ಜಮಾಲ್ ಜಿಗಳೂರ, ರಿಯಾಜ್ ಜಮಖಾನ್, ರಿಯಾಜ್ ಹುಗ್ಗಿ, ಜಾಕಿರ್ ಕಲ್ಲಕುಟ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

