ಛಾಯಾಗ್ರಾಹರಿಗೆ ಆರ್ಥಿಕ ನೆರವು ಸೇವಾ ಭದ್ರತೆ ಒದಗಿಸುವಂತೆ ಸಚಿವ ಸಂತೋಷ ಲಾಡ್ ಗೆ ಮನವಿ

Samagraphrabha
1 Min Read

ಗದಗ: ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮತ್ತು ಸ್ಮಾರ್ಟ್ ಕಾರ್ಡ್‌ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಇತ್ತೀಚಿಗೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರಿಗೆ ಕರ್ನಾಟಕ ರಾಜ್ಯದ ಸಮಸ್ತ ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೆರ್ಪಡೆ ಮಾಡಿದ್ದಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಛಾಯಾಗ್ರಾಹರು ವೃತ್ತಿಯನ್ನು ನಂಬಿಕೊಂಡು ಬದುಕುತ್ತಿದ್ದಾರೆ ಆದರೆ ವಿಭಿನ್ನ ಶೈಲಿಯ ಮೊಬೈಲ್‌ಗಳ ಹಾವಳಿಯಿಂದ ಬದುಕುವ ಬಾಳಿಗೆ ಕಷ್ಟವಾಗಿದೆ. ಆದ್ದರಿಂದ ಕಾರ್ಮಿಕ ಇಲಾಖೆಯಿಂದ ಛಾಯಾಗ್ರಾಹಕರ ಮಕ್ಕಳಿಗೆ ಒಂದನೆ ತರಗತಿಯಿಂದ ವಿಶೇಷ ಶಿಶ್ಯವೇತನ ನೀಡಬೇಕು, ಹಾಗೂ ಉಚಿತ ಜೀವವೀಮೆಯನ್ನು, ಛಾಯಾಗ್ರಾಹರ ಸಲಕರಣೀಗಳ(ಕ್ಯಾಮರಾ, ಪ್ರಿಂಟರ್,ಇತರೆ) ಸಾಮಗಿಗಳ ಖರೀಧಿಸಲು ಸರಕಾರದಿಂದ ಅಥವಾ ಕಾರ್ಮಿಕ ಇಲಾಖೆಯಿಂದ ಆರ್ಥಿಕ ನೇರವನ್ನು ನೀಡಬೇಕು, ಹಾಗೂ ವೃತ್ತಿ ನೀರತ ಛಾಯಾಗ್ರಾಹರಿಗೆ ಬದುಕಿಗೆ ಸಾಮಾಜಿಕ ಭದ್ರತೆ,ಒದಗಿಸಿ ಕೊಡಬೇಕೇಂದು ಈ ಮೂಲಕ ಸಮಸ್ತ ಛಾಯಾಗ್ರಾಹಕರು ಪರವಾಗಿ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಪವನ ಕೆ ಮೇಹರವಾಡೆ,ಪ್ರಧಾನ ಕಾರ್ಯದರ್ಶಿ ಮಹಾದೇವಗೌಡ ಸಂಕನಗೌಡ್ರ,ಮಾಜಿ ಅಧ್ಯಕ್ಷರಾದ ಚನ್ನಪ್ಪ ಬ್ಯಾಹಟ್ಟಿ,ಶಂಕರ ವಡ್ಡಿನ,ಮಂಜುನಾಥ ಲಕ್ಷೆಟ್ಟಿ, ಗಜೇಂದ್ರಗಡ ಅಧ್ಯಕ್ಷರಾದ ಶಿವು ಮೇಟಿ,
ಲಕ್ಷ್ಮೇಶ್ವರ ಅಧ್ಯಕ್ಷರಾದ ನೀಲಕಂಠೇಶ್ವರ (ರಾಜು)ಬರುಡಿ,ಉಪಾಧ್ಯಕ್ಷರಾದ ರಾಯಪ್ಪ ಹತ್ತಿಕಾಳ,ಮುಂಡರಗಿ ಅಧ್ಯಕ್ಷರಾದ ವೀರೇಶ ಹಡಗಲಿ,
ಸದಸ್ಯರಾದ ಕೊಟ್ರೇಶ ಕುಂದ್ರಳ್ಳಿ,ರವಿ ಬಳಿಗೇರ,ಪ್ರಭು ಕುಮಾರ ನಾಗನೂರು,ಹನುಮಂತ ರಾಮಗಿರಿ, ವೀರೇಶ್ ಹೆಬಸುರು,ಪ್ರಕಾಶ ವಸ್ತ್ರದ,
ಕಾಶಿನಾಥ್ ಕಲಬುರ್ಗಿ,ನಾಗಲಿಂಗಪ್ಪ ಅರ್ಕಸಾಲಿ, ಶ್ರೀಕಾಂತ ಹೂಗಾರ, ಗಂಗಾಧರ ಬಡಿಗೇರ,ಮಾರುತಿ ಯಾವಗಲ್,ಸಂತೋಷ ಅಳವಂಡಿ,ನಿಂಗಪ್ಪ ಮುದಗಲ್ಲ ಹಾಗೂ ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರು ಉಪಸ್ಥಿತರಿದ್ದರು‌.

Share this Article