ಗದಗ : ಸನ್ಮಾರ್ಗ ಕಾಲೇಜಿನ ಅಪೇಕ್ಷೆಯನ್ನು ನಿನ್ನೆ ತಾನೇ ಸಾಧಿಸಿ ತೋರಿಸಿದ ನಮ್ಮ ವಿದ್ಯಾರ್ಥಿನಿ ಅಪೇಕ್ಷಾ ಪಾಟೀಲರ ಅಪೂರ್ವ ಸಾಧನೆಯನ್ನು ಮೆಲುಕು ಹಾಕುವುದರೊಳಗೆ ಆಗಿಯೇ, ನಮ್ಮ ವಿದ್ಯಾಲಯದ ಮತ್ತೋರ್ವ ಸಾಧಕಿ ಕುಮಾರಿ ಸುಮನ್ ಪಾಟೀಲ, 2020–21 ರ ಶೈಕ್ಷಣಿಕ ವರ್ಷದಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ವಿದ್ಯಾರ್ಜನೆಗೈದು ಇಂದು ‘ಅಮೆಜಾನ್ ವೆಬ್ ಸರ್ವೀಸಸ್ (ಂ.W.S)
ಕಂಪನಿಯಲ್ಲಿ ವರ್ಷಕ್ಕೆ ರೂ 22 ಲಕ್ಷ ಪ್ಯಾಕೇಜ್ನ ಉದ್ಯೋಗವನ್ನು ಸುಲಭವಾಗಿ ಗಿಟ್ಟಿಸಿಕೊಂಡಿರುವುದು ನಮ್ಮೆಗೆಲ್ಲರಿಗೂ ಸಂತಸದ ವಿಷಯವೇ, ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾದ ಕುಮಾರಿ ಸುಮನ್ ಪಾಟೀಲ ಪದವಿ ಪೂರ್ವ ಹಂತದಲ್ಲೂ ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದು ಸನ್ಮಾರ್ಗದ ಪರಿವಾರದವರಾದ ನಮಗೆಲ್ಲರಿಗೂ ಹೆಮ್ಮೆಯ ವಿಷಯವೇ. ವಿದ್ಯಾರ್ಥಿಗಳು ಈ ಪರಿಯ ಅಮೋಘ ಸಾಧನೆಗೈದರೆ ಪಾಲಕರ ನಂತರ ಖುಷಿ ಪಡುವ ಮೊದಲ ವ್ಯಕ್ತಿಯೆಂದರೆ ಶಿಕ್ಷಕ.
ವಿದ್ಯಾರ್ಥಿನಿಯ ಈ ಅಮೋಘ ಸಾಧನೆಗೆ ಸಂಸ್ಥೆಯ ಚೇರ್ಮನ್ರಾದ ಪ್ರೊ.ರಾಜೇಶ ಕುಲಕರ್ಣಿ, ಪ್ರಾಚಾರ್ಯರಾದ ಪ್ರೇಮಾನಂದ ರೋಣದ ಹಾಗೂ ನಿರ್ದೇಶಕರಾದ ಪ್ರೊ.ರಾಹುಲ ಒಡೆಯರ್, ಪ್ರೊ.ರೋಹಿತ್ ಒಡೆಯರ್, ಪ್ರೊ.ಪುನೀತ್ ದೇಶಪಾಂಡೆ, ಪ್ರೊ.ಸೈಯ್ಯದ್ ಮತೀನ್ ಮುಲ್ಲಾ ಹಾಗೂ ಆಡಳಿತಾಧಿಕಾರಿಗಳಾದ ಶ್ರೀ.ಎಮ್.ಸಿ.ಹಿರೇಮಠ ಹಾಗೂ ಕಾಲೇಜಿನ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯು ಹೃದಯಪೂರ್ವಕವಾಗಿ ಅಭಿನಂದಿಸಿ, ಭವಿಷ್ಯದಲ್ಲಿ ಸುಮನ್ ಪಾಟೀಲರ ಜೀವನ ಉತ್ತರೋತ್ತರವಾಗಿ ವಿಕಸಿತವಾಗಲಿ ಎಂದು ಹಾರೈಸಿದ್ದಾರೆ.
“ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಒಲಿದ ಮತ್ತೊಂದು ಸಿರಿ – ಗರಿ”
