ಕಾ ನಿ ಪ ನೂತನ ಪದಾಧಿಕಾರಿಗಳ ಆಯ್ಕೆ

Samagraphrabha
0 Min Read

ಮುಂಡರಗಿ: ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹು.ಬಾ.ವಡ್ಡಟ್ಟಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಸಲಾಯಿತು.


ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರನ್ನಾಗಿ ಸಿ.ಕೆ.ಗಣಪ್ಪನವರ, ಅಧ್ಯಕ್ಷರಾಗಿ ಶಿವಮೂರ್ತಿ ಹೊಂಬಳಗಟ್ಟಿ, ಉಪಾಧ್ಯಕ್ಷರಾಗಿ ಶರಣು ಸೊಲಗಿ, ರಿಯಾಜ್‍ಅಹ್ಮದ್ ದೊಡ್ಡಮನಿ(ಗ್ರಾಮೀಣ), ಪ್ರ.ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನಗೌಡ ಪಾಟೀಲ, ಕಾರ್ಯದರ್ಶಿಯಾಗಿ ಶಿವಕುಮಾರ ಬ್ಯಾಳಿ(ಗ್ರಾಮೀಣ),ಖಜಾಂಚಿಯಾಗಿ ಮಂಜುನಾಥ ಜಾಗಟಗೇರಿ ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ‘ಶ್ರೀ ಜಗದ್ಗುರು ಅನ್ನದಾನೀಶ್ವರ ಮಾಧ್ಯಮ ಪ್ರಶಸ್ತಿ’ ಪುರಸ್ಕøತರಾಗಿ ಸಿ.ಕೆ.ಗಣಪ್ಪನವರ ಆಯ್ಕೆಗೊಂಡರು. ಸಭೆಯಲ್ಲಿ ಸಿ.ಎಸ್.ಅರಸನಾಳ, ಸಂತೋಷ ಮುರಡಿ ಇದ್ದರು.

Share this Article