ಗುರುವಿನಿಂದ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವುದಕ್ಕೆ ಸಾಧ್ಯ : ಡಾ.ಮಲ್ಲಿಕಾರ್ಜುನ ಸ್ವಾಮೀಜಿ

Samagraphrabha
1 Min Read

ಮುಂಡರಗಿ: ಗುರುವಿನ ಆಶೀರ್ವಾದ ಬಹಳಷ್ಟು ದೊಡ್ಡದು ಗುರುವನ್ನು ಕಡೆಗಣಿಸಿ ಗುಡಿ ಕಡೆಗೆ ಹೋಗುವುದು ಅರ್ಥವಿಲ್ಲ ದೇವಸ್ಥಾನದ ದೇವರ ಮೂರ್ತಿಗೆ ಸಂಸ್ಕಾರ ಕೊಡುವುದು ಗುರುವಿನಿಂದ ಮಾತ್ರ ಸಾಧ್ಯ ಗುರುವಿನಿಂದ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವುದಕ್ಕೆ ಸಾಧ್ಯ ಎಂದು ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಜರುಗಿದ 1832ನೇ ಮಾಸಿಕ ಶಿವಾನುಭವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಚನ ನೀಡಿ, ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅವಶ್ಯಕ. ಗುರು ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡಿ ಒಳ್ಳೆಯ ಮಾರ್ಗದಲ್ಲಿ ನಡೆಸುತ್ತಾನೆ ಎಂದು ಹೇಳಿದರು.
ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಬಸವರಾಜ ಬಳ್ಳಾರಿ ಮಾತನಾಡಿ, ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಾದ ಮೂಲಕ ನನಗೆ ಶಕ್ತಿ ನೀಡಿದ್ದಾರೆ ಶ್ರೀಗಳ ಆಶೀರ್ವಾದದಿಂದ ಮತ್ತು ನಿಮ್ಮೆಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ ಎಂದರು.
ಯಲಬುರ್ಗಾದ ಸಂಗಣ್ಣ ಕೊಪ್ಪಳ, ಶ್ರೀ ಚನ್ನಬಸವ ದೇವರು ಮಾತನಾಡಿದರು. ವಿಜಯವಾಣಿ ಪತ್ರಿಕೆ ಕೊಡಲ್ಪಡುವ ವಿಜಯರತ್ನ ಪ್ರಶಸ್ತಿ ಪುರಸ್ಕøತ ಆನಂದಗೌಡ ಪಾಟೀಲ ಹಾಗೂ ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಬಸವರಾಜ ಬಳ್ಳಾರಿ ಅವರಿಗೆ ಶ್ರೀಗಳು ಗುರುರಕ್ಷೆ ನೀಡಿದರು.
ಭಕ್ತಿಸೇವೆ ವಹಿಸಿಕೊಂಡಿದ್ದ ಅಕ್ಕಮಹಾದೇವಿ ಅಂದಪ್ಪ ಕಡ್ಡಿ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ನೂರಾರು ಭಕ್ತರು ಶ್ರೀಗಳಿಗೆ ಗುರವಂದನೆ ಸಲ್ಲಿಸಿದರು. ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯಶಿಕ್ಷಕ ಎಸ್.ಎಸ್.ಇನಾಮತಿ, ಶಿಕ್ಷಕ ಎಸ್.ಎಸ್.ಮಠ ಕಾರ್ಯಕ್ರಮ ನಿರ್ವಹಿಸಿದರು.

Share this Article