ನೂತನ ತೋಟಗಾರಿಕೆ ಇಲಾಖೆಯ ಕಟ್ಟಡ ಉದ್ಘಾಟನೆ

Samagraphrabha
1 Min Read

ಮುಂಡರಗಿ: ಇಲಾಖೆ ವಿನೂತನವಾಗಿರುವ ಯೋಜನೆಗಳನ್ನು ರೂಪಿಸುವ ಕೆಲಸ ಮಾಡಬೇಕು ಉತ್ತಮ ಆಡಳಿತ ಸೇವೆಗೆ ಬಳಕೆಯಾಗಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನೂತನ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತೋಟಗಾರಿಕೆಗೆ ಉತ್ತೇಜನೆ ಕೊಡಬೇಕೆನ್ನುವ ಉದ್ದೇಶದಿಂದ 63 ಲಕ್ಷದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ರೈತರಿಗೆ ಸಲಹೆ ಸೂಚನೆಗಳು ಹಾಗೂ ಜಾಗೃತಿ ಕಾರ್ಯಕ್ರಮಗಳು ಜರುಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ರೈತರಿಗೆ ಲಾಭದಾಯಕ ಬೆಳೆಗಳ ಬಗ್ಗೆ ಇಲಾಖೆಯು ಉತ್ತೇಜನ ನೀಡಬೇಕು. ತಾಲೂಕಿನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ. ಈ ನಿಟ್ಡಿನಲ್ಲಿ ರೈತರಿಗೆ ಅಧಿಕಾರಿಗಳು ತೋಟಗಾರಿಕೆ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಗಿರೀಶ ಹೊಸೂರ, ಡಿ.ಡಿ.ಮೋರನಾಳ, ಹೇಮಗಿರೀಶ ಹಾವಿನಾಳ, ಮಹ್ಮದರಫಿ ತಾಂಬೋಟಿ, ಶೋಭಾ ಮೇಟಿ, ಜ್ಯೋತಿ ಹಾನಗಲ್, ಪ್ರಶಾಂತ ಕುಲಕರ್ಣಿ, ಸುರೇಶ ಕುಂಬಾರ, ಶಿವಾನಂದ ಇಟಗಿ, ಶಂಕರ ಜಯಣ್ಣಗೌಡ್ರ, ಶರಣಪ್ಪ ಕುಂಬಾರ ಇತರರು ಇದ್ದರು. ತಾಂತ್ರಿಕ ಸಹಾಯಕ ಕುಭೇರಡ್ಡಿ ನೀಲಣ್ಣವರ ಕಾರ್ಯಕ್ರಮ ನಿರ್ವಹಿಸಿದರು.

Share this Article