ಹೂಗಾರ ಮಾದಯ್ಯ ತನ್ನ ಶ್ರೇಷ್ಠ ಕಾಯಕದಿಂದ ಕೈಲಾಸವನ್ನು ಗೆದ್ದವರು: ಮಂಜುನಾಥ ಮುಧೋಳ

Samagraphrabha
3 Min Read

ಮುಂಡರಗಿ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ,ಶರಣ ಸಾಹಿತ್ಯ ಪರಿಷತ್ತು ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ಸೌರಭ ಇವುಗಳ ಆಶ್ರಯದಲ್ಲಿ ನಡೆದ ಶರಣ ಚಿಂತನ ಮಾಲೆ ೨೧ ರ ಶರಣ ಹೂಗಾರ ಮಾದಯ್ಯ ನವರ ಕುರಿತು ಉಪನ್ಯಾಸ ನೀಡಿದ ಕನ್ನಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ ಮಾತನಾಡಿ‌ ದಿನನಿತ್ಯ ಬೆಳಗಿನ ಜಾವ  ಕಲ್ಯಾಣದ ವನಕ್ಕೆ ಹೋಗಿ ಹೂ ಪತ್ರಿಗಳನ್ನು ಹರಿದು ಬಂದು ಕಲ್ಯಾಣದ ಶರಣರಿಗೆ ಕೊಡುವದು ಇವರ ಕಾಯಕವಾಗಿತ್ತು,
ಹೂಗಾರ ಮಾದಯ್ಯನವರ ಜೀವನದ ಕುರಿತು ಉಲ್ಲೇಖವಿಲ್ಲ ಆದರೆ ಜನಪದರ ಹಾಡುಗಳ ಮೂಲಕ ಪ್ರಸಿದ್ದಿಯಾಗಿದ್ದಾರೆ.

ಬಾಗಲಕೋಟ ಜಿಲ್ಲೆಯಲ್ಲಿ ಜನಿಸಿ ಕಲಕುರ್ಕಿಯ ರಾಜ ರಾಣಿಯ ಆ ಶಿವ ದೇವಾಲಯಕ್ಕೆ ಬರುತ್ತಿರುತ್ತಾರೆ,  ಇವರ ಮಗ ಶಿವಯೋಗಿ ಮಾದರಸ ,ಮಹಾದೇವನ ಶಿವನ ಭಕ್ತಿ,ನಿಷ್ಠೆ ಶ್ರದ್ಧೆಯಿಂದ ಮಗ ಜನಿಸುತ್ತಾನೆ ,ಇವನಿಗೆ ಮಹಾದೇವ ಅಂತಾ ಹೆಸರಿಡುತ್ತಾರೆ, ತಂದೆ ಮತ್ತು ಮಗನ ಹೆಸರು ಒಂದೆ ಇರುವ ಕಾರಣ ಊರಿನ ಜನ ಎಲ್ಲರೂ ಮಗನಿಗೆ ಚಿಕ್ಕ ಮಾದಯ್ಯ ಎಂದು ಕರೆಯುತ್ತಾರೆ, ಚಿಕ್ಕ ಮಾದಯ್ಯ ತಂದೆಯೊಂದಿಗೆ ಶಿವನ ಪೂಜೆ ಪತ್ರಿ ಹೂ ತಂದು ಅಲಂಕಾರ ಮಾಡುತ್ತಾನೆ, ಚಿಕ್ಕ ಮಾದಯ್ಯ ಅಲಂಕಾರ ಮಾಡುವದು ಕಂಡು ಜನರು ಮಾದಯ್ಯ ನನ್ನು ಹೂಗಾರ ಮಾದಯ್ಯ ಎಂದು ಕರೆಯಲಾರಂಬಿಸಿದರು ಅಂದಿನಿಂದ ಚಿಕ್ಕ ಮಾದಯ್ಯ ಹೂಗಾರ ಮಾದಯ್ಯನಾದ ಹಡಪದ ಅಪ್ಪಣ್ಣನವರನ್ನು ಭೇಟಿ ಮಾಡಿದ ಹೂಗಾರ ಮಾದಯ್ಯ ಸತ್ಯ ಶುದ್ಧ ಕಾಯಕ ಜೀವಿಗಳಾಗಿದ್ದರು.
ಶಿವಯೋಗಿ ಮಾದರಸ ತನ್ನ ಜ್ಞಾನ ತತ್ವದಿಂದ ಸಕಲೇಶ ಮಾದರಸರಾಗುತ್ತಾರೆ ಮಾದಯ್ಯನ ಗುರುಗಳಾಗುತ್ತಾರೆ, ಹೂಗಾರ ಮಾದಯ್ಯ ಹಾಗೂ ಹೆಂಡತಿ ಮಾದೇವಿಯವರಿಗೆ ಲಿಂಗದಿಕ್ಷೆ ನಿಡುತ್ತಾರೆ.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ದೈಹಿಕ ಶಿಕ್ಷಕರಾದ ಎನ್ ಎಸ್ ಅಲ್ಲಿಪೂರ ಮಾತನಾಡಿ
ಜಟ್ಟಿ ಕಾಳಗದಲ್ಲಿ ಗೆಲ್ಲದಿದ್ದರೆ ಅದು ಆತನ ವಿಫಲತೆ ಅಲ್ಲ ಮುಟ್ಟಿ ನೋಡು ಆತನ ತೋಳು ಕಬ್ಬಿಣದ ಗಟ್ಟಿತನ.
ಕ್ರೀಡೆ ಇಲ್ಲದ ಬಾಳು ಕೀಡೆಯಂತೆ.
ಬಸವಣ್ಣನವರ ಸಪ್ತ ಸೂತ್ರಗಳು ಕಳಬೇಡ ಕೊಲಬೇಡ ಎಂಬ ವಚನವೇ ಸಾಕು
೧೨ ನೇ ಶತಮಾನದ ಶರಣ ಕಾಯಕ ದಾಸೋಹ ಹಾಗೂ ಅವರ ವಚನಗಳು ಸರಿದಾರಿಗೆ ತೋರುವದಾಗಿದೆ ಎಂದು ಬಸವಣ್ಣವರ ವಚನಗಳು ಜಗತ್ತಿಗೆ ಸಾರಿ ಹೇಳಿವೆ ಎಂದರು.

ವಿಜಯವಾಣಿ ಪತ್ರಿಕೆ  ಕೊಡಮಾಡುವ ವಿಜಯರತ್ನ ಪ್ರಶಸ್ತಿಗೆ ಭಾಜನಾರಾದ ಸದಾ ಸಾರ್ವಜನಿಕ ಜೀವನದಲ್ಲಿ ಕ್ರೀಯಾಶಿಲರಾಗಿ ಸೇವೆ ಸಲ್ಲಿಸುತ್ತಿರುವ ಮುಖಂಡ ಆನಂದಗೌಡ ಪಾಟೀಲ ರವನ್ನು ಸನ್ಮಾನಿಸಿ ಅಭಿನಂದಸಲಾಯಿತು, ನಂತರ ಅವರು ಮಾತನಾಡಿ ನಾನು ಮಾಡುತ್ತಿರುವ ಸೇವೆಗೆ ಹಾಗೂ ಗುರುಗಳ ಕುಟುಂಭದ ಸ್ನೇಹಿತರ ಹಾರೈಕೆಯಿಂದ ಈ ಪ್ರಶಸ್ತಿ ಲಭಿಸಿದ್ದಕ್ಕೆ ಖೂಷಿಯಾಗಿದೆ ಎಲ್ಲರಿಗೂ ನಾನು ಅಬಾರಿಯಾಗಿದ್ದೆನೆ ಎಂದರು.
ಮಾಜಿ ಸೈನಿಕ ವೆಂಕಟೇಶ ಗುಗ್ಗರಿಯವರ ಮಗಳು ಕು.ಮಹಾಲಕ್ಷ್ಮಿ ಗುಗ್ಗರಿಯವರು ಪಿಎಚ್ ಡಿ ಪದವಿ ಪಡೆದಿರುವದಕ್ಕೆ ಅವರನ್ನು ಸನ್ಮಾನಿಸಿ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

- Advertisement -
Ad image

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಮ್ ಜಿ ಗಚ್ಚಣ್ಣವರ ಕಸಾಪ ಅಧ್ಯಕ್ಷರು ಮಾತನಾಡಿ ಶರಣ ಚಿಂತನ ಮಾಲೆಯಲ್ಲಿ ಉಪೇಕ್ಷಿತ ಶರಣ ಚಿಂತನೆ ಅವರ ಕಾಯಕ ದಾಸೋಹ ಇಂದಿನ ಪಿಳಿಗೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ, ಉಪನ್ಯಾಸ ಮಾಡಲೂ ಆಸಕ್ತಿಯಿರುವ ಹೊಸ ಯುವ ಪ್ರತಿಭೆಗಳಿಗೆ ಅವಕಾಶ ನಿಡುವದರಿಂದ ಅನುಕೂಲವಾಗುತ್ತದೆ.  ಪಟ್ಟಣದ ಸಾಹಿತ್ಯ ಭವನದ ನಿರ್ಮಾಣಕ್ಕೆ ಅನೇಕ ಮಹನಿಯರು ದೇಣಿಗೆ ನಿಡತಾ ಇದ್ದಾರೆ ಅವರ ಈ ಸಹಾಯ ಸಾಹಿತ್ಯ ಪರಿಷತ್ತು ಮರೆಯುವದಿಲ್ಲಾ ಸಾಹಿತ್ಯಾಸಕ್ತರು ಸಾಹಿತ್ಯ ಭವನಕ್ಕೆ ಭೇಟಿ ನಿಡಲೂ ವಿನಂತಿಸಿದರು.

ಕು.ಮಾನಸ ಪ್ರಾರ್ಥಿಸಿದರು
ಪ್ರಾಸ್ತಾವಿಕವಾಗಿ ಹಿರಿಯ ಸಾಹಿತಿ ಆರ್ ಎಲ್ ಪೋಲಿಸ್ ಪಾಟೀಲ ಮಾತನಾಡಿದರು.
ಸರ್ವರನ್ನೂ  ಶಿಕ್ಷಕ ಹನುಮರೆಡ್ಡಿ ಇಟಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ  ವ್ಹಿ ಎಪ್ ಗುಡದಪ್ಪನವರ,  ಡಾ.ನಿಂಗು ಸೋಲಗಿ,ಆರ್ ಕೆ ರಾಯನಗೌಡ, ಎಮ್ ಎಸ್   ಶಿರನಳ್ಳಿ, ಶಂಕರ ಕೂಕನೂರ,ಮಹೇಶ ಮೇಟಿ,ಎಮ್ ಐ ಮುಲ್ಲಾ, ರಮೇಶಗೌಡ ಪಾಟೀಲ,ಕೃಷ್ಣಾ ಸಾವುಕಾರ, ಕಾವೇರಿ ಬೋಲಾ,  ಜಯಶ್ರೀ ಅಳವಂಡಿ, ಮೊಹನ್ ಪಾಟೀಲ, ಸುಧಾ ಯಾಳಗಿ, ಕಾಶಿನಾಥ ಶಿರಬಡಗಿ,ವೆಂಕಟೇಶ ಗುಗ್ಗರಿ,ಎಸ್ ಕೆ ಹುಬ್ಬಳ್ಳಿ,ಮಹಾದೇವಿ ಹಿರೇಮಠ, ಇತರರು ಇದ್ದರು.
ರತ್ನಾ ಕಾಗನೂರಮಠ ನಿರೂಪಿಸಿದರು
ವೀಣಾ ಪಾಟೀಲ ವಂದಿಸಿದರು.

Share this Article