ನೀರಿ ಟ್ಯಾಂಕರದಲ್ಲಿ ಬಿದ್ದ ನಾಯಿ ರಕ್ಷಿಸಿದ ಅಗ್ನಿಶಾಮಕ ದಳ

Samagraphrabha
1 Min Read

ಗದಗ : ನಗರದ ಅಗ್ನಿಶಾಮಕ ಕಚೇರಿ ಹತ್ತಿರದಲ್ಲೇ ಮಳೆಯಿಂದ ಕೆಸರು ನೀರು ತುಂಬಿದ ಒಂದು ದೊಡ್ಡ ಟ್ಯಾಂಕ್‍ನಲ್ಲಿ ನಾಯಿ ಒಂದು ಆಗಸ್ಮಿಕವಾಗಿ ಬಿದ್ದ ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಸಲಕರಣೆಯೊಂದಿಗೆ ಸ್ಥಳಕ್ಕೆ ದಾವಿಸಿ ಕೆಲ ಗಂಟೆಗಳ ಪರಿಶ್ರಮದಿಂದ ಟ್ಯಾಂಕಿನಲ್ಲಿ ಬಿದ್ದು ಮೇಲೆ ಬರಲು ಆಗದೆ ನರಳುತ್ತಿರುವ ನಾಯಿಯನ್ನು ರಕ್ಷಿಸಲಾಗಿತು.
ಅದೇ ರೀತಿ ಅಂದೇ ಇನ್ನೊಂದೆಡೆ ಕೆ.ಸಿ. ರಾಣಿ ರೋಡ ಡಾ. ನಿಂಬ್ಬಣ್ಣವರ ಚಿಕ್ಕಮಕ್ಕಳ ಆಸ್ಪತ್ರೆ ಹತ್ತಿರ ಹಾಳು ಬಾಯಿಯಲ್ಲಿ ನಾಯಿ ಒಂದು ಬಿದ್ದ ಮಾಹಿತಿ ಪಡೆದ ತಕ್ಷಣ ನಾಯಿ ಎನ್ನದೇ ಒಂದು ಜೀವ ರಕ್ಷಣೆ ಎಂಬ ಭಾವನೆಯಿಂದ ರಾತ್ರಿ ಸುಮಾರು 11 ಘಂಟೆಗೆ ಕೆಲ ಗಂಟೆಗಳ ಕಾಲ ಹರ ಸಾಹಸದಿಂದ ಆಳದ ಬಾಯಿಯಲ್ಲಿ ಬಿದ್ದ ನಾಯಿಯನ್ನು ರಕ್ಷಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮುತ್ತು ಮುಶಿಗಿರಿ, ಚಂದ್ರು ಹುಬ್ಬಳಿಮಠ, ಕ್ರೀಶ್ ಸೇರಿದಂತೆ ಹಲವರು ಅಗ್ನಿಶಾಮಕ ಸಿಬ್ಬಂದಿಯನ್ನು ಮನಸ್ಸು ಪೂರ್ವಕವಾಗಿ ಹಾರೈಸಿ ಧನ್ಯಾವಾದಗಳನ್ನು ವ್ಯಕ್ತಪಡಿಸಿದರು. ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ನೆರವಿಗೆ ಬರುವ ಅಗ್ನಿಶಾಮಕ ದಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ರಕ್ಷಣಾ ಕಾರ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿ. ಎಸ್. ಟೆಕ್ಕೆಕರ್‍ರವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ರಾಮಣ್ಣ ಹಲಗಿ ಹಾಗೂ ಸಿಬ್ಬಂದಿಯವರಾದ, ಶ್ರೀಧರ. ಆರ್. ದೇಸಾಯಿ, ಹನಮಂತ ಮುಚಖಂಡಿ, ನಜೀರಹ್ಮದ್ ಜಮಖಂಡಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು.

Share this Article