ಪಂಚ ಗ್ಯಾರಂಟಿ ಅನುಷ್ಠಾನ ಶೇ 98 ರಷ್ಟು ಯಶಸ್ವಿ : ಶರಣಪ್ಪ ಬೆಟಗೇರಿ

Samagraphrabha
2 Min Read

ನರೇಗಲ್:‌ ನಮ್ಮ ವ್ಯಾಪ್ತಿಗೆ ಒಳಪಡುವ 13 ಪಂಚಾಯ್ತಿ, ಅದಕ್ಕೆ ಸಂಬಂಧಿತ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕಾಟಾಚಾರಕ್ಕೆ ಕೆಲಸ ಮಾಡಬಾರದು. ಪ್ರತಿ ಮನೆಮನೆಗೆ ಹೋಗಿ ಯೋಜನೆ ಅವರಿಗೆ ತಲುಪಿದೆಯಾ ಇಲ್ಲವೋ ಎನ್ನುವ ಬಗ್ಗೆ ನಿಖರ ಮಾಹಿತಿ ಪಡೆದು ಒದಗಿಸಬೇಕು ಎಂದು ಗಜೇಂದ್ರಗಡ ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಹೇಳಿದರು.
ಪಂಚಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಹಾಗೂ ಗಜೇಂದ್ರಗಡ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿಯ ಸಹಯೋಗದಲ್ಲಿ ಸ್ಥಳೀಯ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಗುರುವಾರ ಬೆಳಿಗ್ಗೆ ನಡೆದ ಗ್ಯಾಋಂಟಿ ಪ್ರಗತಿ ಪರಶೀಲನಾ ಸಭೆಯಲ್ಲಿ ಮಾತನಾಡಿದರು.
ನಮ್ಮ ಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಂತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿದೆ. ಅದರಲ್ಲೂ ನರೇಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳ ಅನುಷ್ಠಾನವು ಶೇ 98 ರಷ್ಟಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. . ಈ ಯೋಜನೆ ಇಷ್ಟೊಂದು ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಬಹುಮಟ್ಟಿಗೆ ಕಾರಣರಾಗಿದ್ದಾರೆ ಎಂದರು. ಇನ್ನೂ ಈ ಯೋಜನೆ ಯಾರಿಗೆ ತಲುಪಿಲ್ಲ ಅಂಥವರು ಪಟ್ಟಣ ಪಂಚಾಯಿತಿಯನ್ನಾಗಲಿ, ಗ್ಯಾರಂಟಿ ಸಮಿತಿಯ ಸದಸ್ಯರನ್ನಾಗಲಿ ಸಂಪರ್ಕಿಸಬೇಕು ಎಂದು ಹೇಳಿ ತಮ್ಮ ಮೊಬೈಲ್‌ ಸಂಖ್ಯೆ 9481729300 ಯನ್ನು ನೀಡಿದರು.
ಸಮಿತಿಯ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಳಿದ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲು ಮನೆಮನೆ ಸಮೀಕ್ಷೆಯನ್ನು ಮಾಡಿ ಶೇ. 100ರಷ್ಟು ಯಶಸ್ವಿ ಮಾಡಲು ಶ್ರಮಿಸಬೇಕೆಂದರು.
ಅಂಗನವಾಡಿ ಮೇಲ್ವಿಚಾರಕಿ ರಾಧಿಕಾ ಪವಾರ ಮಾತನಾಡಿ, ಪಟ್ಟಣದ 6ನೇ ವಾರ್ಡ್‌ನಲ್ಲಿ ಇನ್ನೂ 44 ಫಲಾನುಭವಿಗಳು ಯೋಜನೆಯ ಲಾಭ ಪಡೆದಿಲ್ಲ. ಇದಕ್ಕೆ ಹಲವಾರು ತಾಂತ್ರಿಕ ಕಾರಣಗಳಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದೆಲ್ಲವನ್ನೂ ಸರಿಪಡಿಸಿಲಾಗುವುದು ಎಂದರು. ನರೇಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 3064 ಗ್ಯಾರಂಟಿ ಯೋಜನೆಯ ಫಲಾನುಭವಿಗಳಿದ್ದು, ಅದರಲ್ಲಿ ಈಗಾಗಲೆ 3016 ಜನರು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಪಡೆಯುತ್ತಿದ್ದಾರೆ ಎಂದರು.
ಪಂಚ ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಶಿವನಗೌಡ ಪಾಟೀಲ ಮಾತನಾಡಿ, ಪಟ್ಟಣದ 6ನೇ ವಾರ್ಡ್‌ನಲ್ಲಿ ವಾಸಿಸುವ ಜನರು ಬಡವರಾಗಿದ್ದು, ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಜನರಾಗಿದ್ದಾರೆ. ಅವರಿಗೆ ಯಾವುದೇ ತೊಂದರೆಗಳಿದ್ದರು ಸರಿಪಡಿಸಿ ಫಲಾನುಭವಿಗಳನ್ನಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್ಮನ್‌ ಮುತ್ತಪ್ಪ ನೂಲ್ಕಿ, ಪಂಚ ಗ್ಯಾರಂಟಿ ಸಮಿತಿ ಸದಸ್ಯೆ ಪ್ರೇಮಾ ಇಟಗಿ, ಅಲ್ಲಾಬಕ್ಷಿ ನದಾಫ್, ಮಲ್ಲಿಕಸಾಬ ರೋಣದ, ಈರಪ್ಪ ಜೋಗಿ, ಫಕೀರಪ್ಪ ಬಂಬ್ಲಾಪುರ, ಕಳಕನಗೌಡ ಪೊಲೀಸ್ ಪಾಟೀಲ, ಶೇಕಪ್ಪ ಕೆಂಗಾರ, ನಿಂಗನಗೌಡ ಲಕ್ಕನಗೌಡ್ರ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಇದ್ದರು.

Share this Article