ಲಕ್ಷ್ಮೇಶ್ವರ :ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಸನ್ 2024-25ನೇ ಸಾಲಿನ ಲೆಕ್ಕ ಶೀರ್ಷಿಕೆ 8443 ವಿವೇಕ ಯೋಜನೆ ಅಡಿಯಲ್ಲಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಎರಡು ನೂತನ ಕೊಠಡಿ ನಿರ್ಮಾಣ ಅಂದಾಜು ಮೊತ್ತ 34.30 ಲಕ್ಷ ರೂಗಳ ಕಾಮಗಾರಿಯ ಭೂಮಿಯನ್ನು ಪೂಜೆಯನ್ನು ಶಾಸಕ ಡಾ.ಚಂದ್ರು ಕೆ. ಲಮಾಣಿಯವರು ನೆರವೇರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದೊಡ್ಡೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಶೇಖರ ಈಳಿಗೇರ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಮಂಜಣ್ಣ ಅಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ನಾನಕಿ ನಾಯಕ, ಮುಖಂಡರಾದ ಮಹಾಂತ ಗೌಡ ಭರಮಗೌಡ್ರ, ತುಕ್ಕಪ್ಪ ಪೂಜಾರ, ಸಕ್ರಪ್ಪ ಕಡೆಮನಿ, ಫಕ್ಕೀರಗೌಡ ಭರಮಗೌಡ್ರ, ಮಹಾಂತೇಶ ಹರಕುಣಿ, ಹನುಮಂತಪ್ಪ ಲಮಾಣಿ, ರಾಮಣ್ಣ ಲಮಾಣಿ, ಕಿರಣ ಲಮಾಣಿ, ಕುಮಾರ ಲಮಾಣಿ, ಮಹಾಂತೇಶ ಮತ್ತೂರು, ಶಿವಪ್ಪ ಅಕ್ಕೂರ, ಸುನೀಲ ಲಮಾಣಿ, ಡಾಕಪ್ಪ ಲಮಾಣಿ, ರವಿ ಭಜಕ್ಕನವರ, ಅಧಿಕಾರಿಗಳಾದ ಎಫ್ ಎಚ್ ತಿಮ್ಮಾಪುರ, ಮಹೇಶ ಅಥಣಿ, ಯು ಜಿ ಹುಚ್ಚಯ್ಯನಮಠ, ಫಕ್ಕೀರೇಶ ಕಟಗಿ, ಮುಖ್ಯೋಪಾಧ್ಯಾಯರಾದ ಬಿ ಎನ್ ಗಾಯಕವಾಡ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಮತ್ತು ಯುವಕರು ಗುರು ಹಿರಿಯರು ಉಪಸ್ಥಿತರಿದ್ದರು.
