ಜಿಲ್ಲಾ ಕಾಂಗ್ರೆಸ್ ಯುವ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ : ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಯೋಜನೆಗಳನ್ನೇ ರಿನೇಮ್ : ಪ್ರಿಯಾಂಕ ಖರ್ಗೆ

Samagraphrabha
5 Min Read

ಗದಗ: ಕೇಂದ್ರ ಸರ್ಕಾರ ದೇಶದ ಜನರನ್ನು ಸುಳ್ಳಿನ ಸುಳಿಯಲ್ಲಿ ಸಿಲುಕಿಸಿದ್ದು ಸದ್ಯ ಕೇಂದ್ರ ಸರ್ಕಾರದ ಯೋಜನೆಗಳು ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ ಜಾರಿ ತಂದ ಯೋಜನೆಗಳನ್ನೇ ರಿನೇಮ್, ರಿಪ್ರಾಡಕ್ಟ, ರಿಪ್ಯಾಕೇಜ್(ಆರ್.ಆರ್.ಆರ್) ಮಾಡಿ ಜಾರಿ ತರಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದರು.

ಅವರು ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್ ಯುವ ಘಟಕದ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭಗಳಲ್ಲಿ ಮಾತನಾಡಿ
ದೇಶದಲ್ಲಿ ಜಾತಿ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಆದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ.

ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಕಾಂಗ್ರೆಸ್ ಯುವ ಘಟಕದ ಪಾತ್ರ ಬಹುಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ.

ಸದ್ಯ ಪ್ರಧಾನಿ ಮೋದಿ ಅವರೇ ಈಗ ಬಿಜೆಪಿಯ ಬ್ರಾಂಡ್ ಆಗಿಬಿಟ್ಟಿದ್ದಾರೆ ಚುನಾವಣೆ ಬಂದಾಗ ಚಾಯ್ ವಾಲಾ ಸರ್ಕಾರದಲ್ಲಿದ್ದಾಗ ಪ್ರಧಾನ ಸೇವಕ ಪಾಕಿಸ್ತಾನದ ಬಗ್ಗೆ ಪ್ರಶ್ನೆ ಮಾಡಿದ್ದರೆ ಚೌಕಿದಾರ ಆಗುತ್ತಾರೆ ಕೋಮು ಗಲಭೆ ಸೃಷ್ಟಿ ಮಾಡೋದಕ್ಕೆ ಹಿಂದೂ ಹೃದಯ ಸಾಮ್ರಾಟ ಆಗುತ್ತಾರೆ ಒಮ್ಮೆ ಮೋದಿ ಲೋಹ ಪುರುಷ ವಿಕಾಸ ಪುರುಷ ಆಗುತ್ತಾರೆ ಯಾವುದೇ ಯೋಜನೆ ತಂದರೂ ಮೋದಿ ಕಾ ಮಾಸ್ಟರ್ ಸ್ಟ್ರೋಕ್ ಅಂತಾರೆ ಡಿಮಾನಿಟೈಜೇಷನ್ ನಿಂದ ಯಾರಿಗಾದ್ರೂ ಒಳ್ಳೆಯದಾಗಿದೆಯಾ..? ಗ್ರಾಮೀಣ ಭಾಗದಲ್ಲಿ ಮುಟ್ಟುತ್ತಿರುವ ಒಂದು ಮೋದಿ ಯೋಜನೆ ಬಗ್ಗೆ ಹೇಳಿ..? ಯಾವ ಯೋಜನೆಯೂ ಇಲ್ಲ.

- Advertisement -
Ad image

ಇನ್ನೂ ಮುಂದುವರೆದು ಮಾತನಾಡಿದ ಅವರು ಆಪರೇಷನ್ ಸಿಂಧೂರ ವೇಳೆ ಭಾರತದ ಪರ ಯಾವೊಂದು ದೇಶವು ನಿಲ್ಲಲಿಲ್ಲ ಇಂಡಿಯಾ ಪಾಕ್ ಯುದ್ಧದ ಸಮಯದಲ್ಲಿ‌ ಎಷ್ಟು ರಾಷ್ಟ್ರಗಳು ನಮ್ಮ ಜೊತೆ ಇದ್ದವು ಒಂದು ರಾಷ್ಟ್ರವೂ ಪಾಕ್ ಮಾಡಿದ್ದು ತಪ್ಪು ಅಂತಾ ಹೇಳಿಲ್ಲ ವಿವಿಧ ದೇಶದ ಜೊತೆಗೆ ಸಂಬಂಧಗಳು ಸರಿಯಾಗಿ ಇಲ್ಲ ನಮಗೆ ಎಂಥನಾಯಕರು ಬೇಕು ಅಂತಾ ನೀವು ತೀರ್ಮಾನಿಸಬೇಕು ಮೋದಿ ಯೋಜನೆ ಬಗ್ಗೆ ಪ್ರಶ್ನಿಸಿದ್ರೆ ದೇಶದ್ರೋಹಿಗಳು ಅಂತಾರೆ ಆರ್ ಎಸ್ ಎಸ್ ಪ್ರಶ್ನೆ ಮಾಡಿದರೆ ದೇಶದ್ರೋಹಿ ಅವರ ತತ್ವಸಿದ್ಧಾಂತ ಒಪ್ಪದಿದ್ದರೆ ದೇಶದ್ರೋಹಿ ದೇಶಭಕ್ತಿ ಸರ್ಟಿಫಿಕೇಟ್ ಕೊಡಡುವವರು ಸ್ವಾತಂತ್ರ್ಯ ಹೋರಾಟ ನಡೆದಾಗ ಎಲ್ಲಿದ್ದರು? ಇವರಿಗೆ ಗಾಂಧಿ ಬೇಡ‌ ಗೋಡ್ಸೆ ಅವರ ಪ್ರತಿಮೆ ಬೇಕು ಗಾಂಧಿಯನ್ನ ಹತ್ಯೆ ಮಾಡಿದವರು ದೇಶಭಕ್ತರು ಎನ್ನುವುದಾದರೆ ಗಾಂಧಿಜಿ ಯಾರು ವಿಶ್ವದಾದ್ಯಂತ ಗಾಂಧಿಜೀ ಪ್ರತಿಮೆ ಇವೆ ಹೊರತು ಗೋಡ್ಸೆ ಪ್ರತಿಮೆಗಳಿಲ್ಲ. ಗಾಂಧಿಯವರು ವಿಶ್ವ ಶಾಂತಿ ಬಯಸಿದರು ಬಿಜೆಪಿಯವರು ರಾಷ್ಟ್ರ ನಿರ್ಮಾಣದಲ್ಲಿ ರಕ್ತ ಬಿಡಿ ಬೆವರು ಸುರಿಸದವರು ಇವತ್ತು ದೇಶ ಭಕ್ತಿಯ ಸರ್ಟಿಫಿಕೇಟ್ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜಕೀಯ ಗುರುಗಳು ವೀರ್ ಸಾವರ್ ಕರ್.. ಅವರ ಬಗ್ಗೆ ಸದನದಲ್ಲೇ ಕೇಳಿದ್ದೇನೆ ವೀರ ಸಾವರ್ಕರ್ ಅವರಿಗೆ ವೀರ್ ಬಿರುದು ಕೊಟ್ಟವರಾರು ಸದನದಲ್ಲಿ ಮೈಮೇಲೆಯೇ ಬಿದ್ದರು ಯಾಕೆಂದರೆ ಬಿಜೆಪಿಗರ ಹತ್ತಿರ ಉತ್ತರ ಇಲ್ಲ ವೀರ ಅಂತಾ ಸಾವರಕರ್ ಅವರೇ ತಮಗೆ ತಾವೇ ಕರೆದುಕೊಂಡಿದ್ದು ಬ್ರಿಟೀಷ್ ರಿಂದ ಪೆನ್ಷನ್ ತೆಗೆದುಕೊಂಡವರನ್ನ ದೇಶಪ್ರೇಮಿಗಳನಬೇಕಾ ಇಂಡಿಯಾ ಪಾಕಿಸ್ತಾನ 2 ನೇಷನ್ ಥಿಯರಿ ಪ್ರಸ್ತಾಪ ಮಾಡಿದ್ದು ಸಾವರ್ಕರ್ 52 ವರ್ಷ ಆರ್ ಎಸ್ ಎಸ್ ತಮ್ಮ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿಲ್ಲ ಇದನ್ನ ಪ್ರಶ್ನೆ ಮಾಡಿದ್ರೆ ದೇಶದ್ರೋಹಿಗಳಂತಾರೆ ಎಂದರು.

ಸಲೀಂ ಅಹಮ್ಮದ ಮಾತನಾಡಿ, ಸುಸಂಸ್ಕೃತ ಸಮಾಜ ಯುವಕರಿಂದ ಮಾತ್ರ ಸಾಧ್ಯ. ರಾಜೀಗಾಂಧಿ ಯಿಂದ ರಾಹುಲ್ ಗಾಂಧಿ ವರೆಗೂ ಯುವ ಘಟಕ ಬಲಿಷ್ಠಗೊಳಿಸಲು ಶ್ರಮ ವಹಿಸಿದ್ದಾರೆ. ಯುವಕರು ಅನ್ಯಾಯ ವಿರುದ್ಧ ಹೋರಾಟ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಕಾಂಗ್ರೆಸ್ ಯುವ ಘಟಕಕ್ಕೆ ಇತಿಹಾಸ ಇದೆ. ಸಾಮಾಜಿಕ ಕಲ್ಯಾಣ, ಏಕತೆ, ಎಲ್ಲರನ್ನು ಸಮಾನಭಾವದಿಂದ ನೋಡುವ ಶಕ್ತಿ ಯುವ ಘಟಕಕ್ಕೆ ಇದೆ ಸಲೀಂ ಅಹ್ಮದ್ ಮಾತನಾಡಿ, ಯುವ ಕಾಂಗ್ರೆಸ್ ಸಂಘಟನೆಗೆ ದೊಡ್ಡ ಇತಿಹಾಸ ಇದೆ ಇದು ನಿನ್ನೆ ಮೊನ್ನೆ ಹುಟ್ಟಿದ ಸಂಘಟನೆ ಅಲ್ಲ 65 ವರ್ಷಗಳ ಇತಿಹಾಸ ಇದೆ ಯುವಕರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಲ ನೀಡಿದ್ದು, ಯುವ ಸಂಘಟನೆ ಆಗಿದೆ ಯುವ ಕಾಂಗ್ರೆಸ್ ಸಂಘಟನೆಯಿಂದ ಅನೇಕ ನಾಯಕರು ರಾಜಕೀಯ ಪ್ರವೇಶ ಮಾಡಿದ್ದಾರೆ ರಾಜೀವ್ ಗಾಂಧಿ ಅವರು ಯುವಕರಿಗೆ ಶಕ್ತಿ ನೀಡಿದ್ದಾರೆ. ದೇಶ ಉಳಿಯಬೇಕಾಗಿದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಮೋದಿ ರಾಮ ರಾಜ್ಯ ಮಾಡುತ್ತೇವೆ ಎಂದು ಅಧಿಕಾರ ತೆಗೆದುಕೊಂಡು ದೇಶದ ಜನರ ಜಾತಿ ಜಾತಿಗಳ ಮಧ್ಯ ಜಗಳ ತಂದು ದೇಶ ನೆಮ್ಮದಿ ಹಾಳು ಮಾಡಿ ದೇಶವನ್ನು ಒಡೆದು ರಾವಣ ರಾಜ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ರಾಜ್ಯದಲ್ಲಿ 20 ಬಿಜೆಪಿ ಸಂಸದರು ಇದ್ದಾರೆ. ಮಹಾದಾಯಿ, ಮೇಕೆ ದಾಟು ಯೋಜನೆಗಳಲ್ಲಿ ರಾಜ್ಯದ ಜನತೆಗೆ ಬಿಜೆಪಿ ಸಂಸದರು ಮೋಸ ಮಾಡಿದ್ದಾರೆ. ಸಂಸದರಾಗಿ ನಿವೇನು ಕತ್ತೆ ಕಾಯ್ತಿದ್ದಿರಾ ಎಂದು ಸಲೀಂ ಅಹ್ಮದ್ ಟಿಕೀಸಿದರು.

ಶಾಸಕ ಜಿ.ಎಸ್. ಪಾಟೀಲ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಹಾಗೂ ಕಾನೂನು ಸಚಿವ ಎಚ್ ಕೆ ಪಾಟೀಲ, ಶಾಸಕರಾದ ಎನ್.ಎಚ್. ಕೋನರೆಡ್ಡಿ, ಜಿ.ಎಸ್. ಪಾಟೀಲ,ಸೇರಿದಂತೆ ದೀಪಿಕಾ ರೆಡ್ಡಿ, ಬಿ.ಆರ್. ಯಾವಗಲ್, ಸಲೀಂ ಅಹಮ್ಮದ್, ಐ.ಎಸ್. ಪಾಟೀಲ, ಡಿ.ಆರ್. ಪಾಟೀಲ, ಮಿಥುನ ಪಾಟೀಲ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಬಿ.ಬಿ. ಅಸೂಟಿ, ಮಂಜುನಾಥ ಗೌಡ, ಅಕ್ಷಯ ಪಾಟೀಲ, ಎಂ. ಡಿ. ಸೌದಾಗರ, ಆನಂದ ಗಡ್ಡದೇವರಮಠ, ಸುಜಾತ ದೊಡ್ಡಮನಿ, ರಾಮಣ್ಣ ಲಮಾಣಿ, ಎ. ಎಂ. ಹಿಂಡಸಗೇರಿ, ರಾಮಕೃಷ್ಣ ದೊಡ್ಡಮನಿ, ಕೃಷ್ಣ ಪರಾಪುರ, ಶಕುಂತಲಾ ಅಕ್ಕಿ, ಸಚಿನ ಪಾಟೀಲ, ವಿವೇಕ ಯಾವಗಲ್, ಪೀರಸಾಬ ಕೌತಾಳ ಇತರರಿದ್ದರು.

ಎಲ್ಲ ಧರ್ಮ, ಜಾತಿಗಳನ್ನು ಒಗ್ಗೂಡಿಸಿ, ಸೇವಾ ಮನೋಭಾವದಿಂದ ಇರುವ ಏಕೈಕ ಪಕ್ಷವೇ ಕಾಂಗ್ರೆಸ್. ಸಂಘಟನೆಯ ಬಲದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು. ನಾನು ಜನರ ಎಲ್ಲ ಕೆಲಸವನ್ನು ಮಾಡಿಕೊಡಿತ್ತೇನೆ ಎಂಬ ಆಡಂಬರದ ಮಾತನ್ನಾಡುವುದಿಲ್ಲ. ಆದರೆ ಗೌರವ ಕೊಟ್ಟು ಪ್ರಾಮಾಣಿಕತೆಯಿಂದ ಸಮಸ್ಯೆಗೆ ಸ್ಪಂಧಿಸುತ್ತೇನೆ.
* ಕೆ.ಎಚ್. ಪಾಟೀಲ, ನೂತನ ಜಿಲ್ಲಾಧ್ಯಕ್ಷ ಯುವ ಕಾಂಗ್ರೆಸ್, ಗದಗ

ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಇತರೆ ರಾಜ್ಯಗಳ ಅನುಸರಿಸಿವೆ. ಗ್ಯಾರಂಟಿ ಯೋಜನೆ ಟೀಕಿಸುವ ಬಿಜೆಪಿ ಕೂಡ ಕೆಲ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ನಕಲು ಮಾಡಿದೆ. ಕಾಂಗ್ರೆಸ್ ಪಕ್ಷ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುವ ಪಕ್ಷ. ಯುವ ಘಟಕ ಸದಸ್ಯರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಲು ಪ್ರಯತ್ನಿಸಬೇಕು.
* ಮಂಜುನಾಥ ಗೌಡ, ರಾಜ್ಯಾಧ್ಯಕ್ಷ. ಕಾಂಗ್ರೆಸ್ ಯುವ ಘಟಕ

Share this Article