ಗದಗ : ಉತ್ತರ ಕರ್ನಾಟಕದ ಸೈಯಾದ್ರಿ ಎಂದೇ ಹೆಸರುವಾಸಿಯಾದ ಕಪ್ಪತ್ತಗುಡ್ಡದಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆ ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ತಾಯಿಯ ಹೆಸರಲ್ಲೋಂದು ಗಿಡ” ಸಸಿ ನೆಡುವ,ಹನುಮಾನ ಚಾಲೀಸಾ ಪಠಣ ಮಾಡಿ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಚಂದ್ರು ಕೆ. ಲಮಾಣಿ ಅವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅವರು ಮಾತಾನಾಡಿ ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು ಎಂಬಂತೆ ಇವತ್ತು ನಮಗೆ ಕಪ್ಪತಗುಡ್ಡ ನಮಗೆ ಮತ್ತು ಜಿಲ್ಲೆಯ ಜನತೆಯ ಪಾಲಿಗೆ ಸಂಜೀವಿನಿ ಪರ್ವತ ಇದ್ದಂತೆ ಎಂದರು.
ವಿಧಾನಪರಿಷತ್ ಸದಸ್ಯ ಎಸ್. ವಿ. ಸಂಕನೂರವರು ಮಾತನಾಡಿ ಇವತ್ತು ಕಪ್ಪಗುಡ್ಡದಲ್ಲಿ ಸುಮಾರು ಐದುನೂರಕ್ಕೂ ಹೆಚ್ಚು ಔಷಧಿ ಸಸ್ಯಗಳನ್ನು ಹೊಂದಿದ್ದು ಏಷ್ಯಾದಲ್ಲೇ ಶುದ್ಧ ಗಾಳಿ ಇರುವ ಜಿಲ್ಲೆ ಅಂದರೆ ಅದು ನಮ್ಮ ಗದಗ ಕಾರಣ ಕಪ್ಪತಗುಡ್ಡ.ಸದಸನದಲ್ಲಿ ಮಾತನಾಡಿ ಇಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಪ್ರವಾಸೋದ್ಯಮಕ್ಕೆ ವತ್ತು ನೀಡಲು ಧ್ವನಿ ಎತ್ತಲಾಗುವುದು.
ಜಿಲ್ಲಾಧಕ್ಷ ರಾಜು ಕುರಡಗಿಯವರು ಮಾತನಾಡಿ ಕಾಡನ್ನು ಬೆಳಸಿದಾಗ ಮಾತ್ರ ನಾಡು ಉಳಿಯಲು ಸಾಧ್ಯ, ಹಸಿರಿಂದ ನಮ್ಮ ಉಸಿರು ಪರಿಸರದಿಂದ ನಮಗೆ ಏನಾಗಿದೆಯೋ ಅದು ಎಲ್ಲಾ ದೇವರ ಕೊಡುಗೆ ಮತ್ತು ಪ್ರಕೃತಿಯ ಕೊಡುಗೆ ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಬೇಕು, ಸಸಿಗಳನ್ನು ನೆಡಬೇಕು, ನೀರು ಉಳಿಸಬೇಕು, ಮಾಲಿನ್ಯವನ್ನು ನಿಲ್ಲಿಸಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಜಿಲ್ಲಾ ಅಧ್ಯಕ್ಷ ರಾಜಣ್ಣ ಕುರಡಗಿ, ವಿಧಾನಪರಿಷತ ಸದಸ್ಯ ಎಸ್ ವಿ ಸಂಕನೂರ, ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಗೌಡ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಪ್ರಕೋಷ್ಠಗಳ ಜಿಲ್ಲಾ ಸಹ ಸಂಯೋಜಕರಾದ ರಮೇಶ್ ಸಜ್ಜಗಾರ,ಶಹರ ಘಟಕದ ಅಧ್ಯಕ್ಷರಾದ ಸುರೇಶ ಮರಳಪ್ನವರ, ಶಂಕರ ಕಾಕಿ, ಅಮರನಾಥ ಗಡಗಿ, ಶಿರಹಟ್ಟಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ ಪಾಟೀಲ, ಯುವ ಮೋರ್ಚಾ ಜಿಲ್ಲಾ ತಂಡದ ಉಪಾಧ್ಯಕ್ಷರಾದ ರಾಜೇಶ ಅರಕಲ್, ಸುರೇಶ್ ಚವಾಣ್, ಯುವ ಮೋರ್ಚಾ ಜಿಲ್ಲಾ ತಂಡದ ಕಾರ್ಯದರ್ಶಿಗಳಾದ ಧರ್ಮರಾಜ ಕೊಂಚಿಗೇರಿ, ಜಿಲ್ಲಾ ತಂಡದ ಸದಸ್ಯರಾದ ರೋಹನ ಕುಂದನ್ಹಳ್ಳಿ,ಶಿರಹಟ್ಟಿ ಮಂಡಳದ ಯುವ ಮೋರ್ಚಾ ಅಧ್ಯಕ್ಷರಾದ ಬಸವರಾಜ ಚಕ್ರಸಾಲಿ, ಮುಂಡರಗಿ ಮಂಡಳದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪವನ ಲಾಂಡ್ವೆ, ಗದಗ ನಗರ ಮಂಡಲದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ನರೇಗಲ್,ವಿರೇಶಪ್ರಭು ಗದುಗಿನ್, ಸದಸ್ಯರಾದ ವಿನಾಯಕ ಹೊರಕೇರಿ,ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಅರವಿಂದ ಅಣ್ಣಿಗೇರಿ , ಪ್ರಧಾನ ಕಾರ್ಯದರ್ಶಿ ಕಾಳು ತೋಟದ, ರೋಣ ಮಂಡಲ ಅಧ್ಯಕ್ಷರಾದ ಶ್ರೀ ಹುಲಗಪ್ಪ ಕೆಂಗಾರ್ , ಪ್ರಧಾನ ಕಾರ್ಯದರ್ಶಿ ಕಿರಣ್ ಕಟ್ಟಿ ಡಂಬಳ ಮಂಡಲ ಅಧ್ಯಕ್ಷ ಪ್ರಕಾಶ ಕೋತಂಬ್ರಿ , ಪ್ರಧಾನ ಕಾರ್ಯದರ್ಶಿ ನಾಗರಾಜ ನಾವಲಿಟ, ಶಿವಾನಂದ ಬಂಡಿ ,ಮುಖಂಡರಾದ ತಿಪ್ಪಣ್ಣ ಕೊಂಚಗೇರಿ, ಸಿದ್ದಲಿಂಗೇಶ್ವರ ಅಂಗಡಿ, ಡಾ. ಪುನೀತ ಉಪ್ಪಾರ, ಉಮೇಶ ಚನ್ನು ಪಾಟೀಲ, ವೈ ಡಿ ಅಡ್ನೂರ, ಶರಣಪ್ಪ ಹರ್ಲಾಪುರ, ಶಿವಯೋಗಿ ಹೊಸಕೆರಿ, ಈರಣ್ಣ ಪೂಜಾರ, ವಿನಾಯಕ ಕರಿಬಿಸ್ಟಿ ಫಕ್ಕೀರೇಶ ಚೌಟಗಿ, ವೀರೇಂದ್ರ ಅಂಗಡಿ, ವಿನೋದ ಕಪ್ಪತ್ತನವರ, ಮುತ್ತು ಚಕ್ರಸಾಲಿ, ಧರ್ಮರಾಜ ಚವ್ಹಾಣ, ವಿರುಪಾಕ್ಷ ಗೌಡ ಪಾಟೀಲ, ಶಾಂತವೀರಯ್ಯ ಮಠಪತಿ, ವಿಠೋಬಾ, ಹಾಗೂ ಯುವ ಮೋರ್ಚಾದ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಯುವಕ ಮಿತ್ರರು ಉಪಸ್ಥಿತರಿದ್ದರು.

