ರಾತ್ರೋರಾತ್ರಿ ಮನೆಗೆ ನುಗ್ಗಿ ಕಳ್ಳತನ :ಹಾಡಹಗಲೇ ಮಹಿಳೆಯ ಚೈನ್ ಸ್ಯ್ಯಾಚಿಂಗ್ : ಖಾರದ ಪುಡಿ ಎರಚಿ ಹಣ ದೋಚಿ ಪರಾರಿ: ಸಿಸಿ ಕ್ಯಾಮಾರಾದಲ್ಲಿ ದೃಶ್ಯ ಸೆರೆ
ಗದಗ : ಜಿಲ್ಲೆಯಲ್ಲಿ ಮತ್ತೆ ಮುಸುಕುದಾರಿ ಕಳ್ಳರ ಹಾವಳಿ ಶುರುವಾಗಿದೆ ರಾತ್ರಿ ಹಗಲು ಎನ್ನದೇ ಯುವಕರ ಗುಂಪೊಂದು ಮುಖ ಕಾಣದಂತೆ ಮಾಸ್ಕ ಧರಿಸಿ ಮನೆ, ಅಂಗಡಿಗಳನ್ನು ಕಳ್ಳತನ ಮಾಡುತ್ತಿದ್ದಾರೆ ಜೊತೆಗೆ ರಸ್ತೆಯಲ್ಲಿ ಒಂಟಿಯಾಗಿ ತಿರುಗಾಡುವ ಮಹಿಳೆ ಮಾಂಗಲ್ಯ ಸರವನ್ನು ಕಿತ್ತು ಕೊಂಡು ಹೋಗಿದ್ದಾರೆ.
ಕಳ್ಳರ ಹಾವಳಿಯಿಂದ ನಗರದಲ್ಲಿ ಭಯದ ವಾತಾವರಣ ಶುರುವಾಗಿದೆ.
ಜಿಲ್ಲೆಯ ಶಿರಹಟ್ಟಿ, ಗದಗ -ಬೆಟಗೇರಿ ಅವಳಿ ನಗರದಲ್ಲಿ ಒಂದೇ ವಾರದ ಅಂತರದಲ್ಲಿ ಯುವಕರ ಗುಂಪು ಮುಸುಕುಹಾಕಿಕೊಂಡು ಮಾರಕಾಸ್ತ್ರಗಳೊಂದಿಗೆ ಕಳ್ಳತನಕ್ಕೆ ಇಳಿದಿದ್ದಾರೆ.
40 ಗ್ರಾಂ ಚಿನ್ನ ಹಾಗೂ 6 ಸಾವಿರ ನಗದು ಕಳ್ಳತನ:
ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕಳೆದವಾರ ಕೃಷ್ಣ ಲಮಾಣಿಯವರ ಮನೆಯಲ್ಲಿ ಕಳ್ಳತನ ಮಾಡಿ ಮನೆಯಲ್ಲಿದ್ದ 40 ಗ್ರಾಂ ಚಿನ್ನ ಹಾಗೂ 6 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಬೆಳ್ಳಟ್ಟಿ ಗ್ರಾಮದ, ರಾಜಣ್ಣ ಗೋಪಾಳಿ, ಮಂಗೇಶಪ್ಪ ಲಮಾಣಿ ಅವರ ಮನೆ ಹಾಗೂ ಗ್ರಾಮ ಒನ್ ಕೇಂದ್ರ, ಛಬ್ಬಿ, ಬನ್ನಿಕೊಪ್ಪ, ಬೆಳ್ಳಟ್ಟಿ ಸೇರಿದಂತೆ ಹಲವು ಗ್ರಾಮದಲ್ಲಿ ಕಳ್ಳತನ ಹಾಗೂ ಕೆಲವು ಮನೆಗಳಲ್ಲಿ ವಿಫಲ ಯತ್ನ ಮಾಡಿದ್ದಾರೆ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದ ಜನರನ್ನು ಬೆಚ್ಚಿಬೀಳಿಸಿದೆ.
ಪೆಟ್ರೋಲ್ ಬಂಕ್ ಗೆ ನುಗ್ಗಿ ಖಾರದ ಪುಡಿ ಎರಚಿ ನಗದು ದೋಚಿ ಪರಾರಿಯಾದ ಖದೀಮರು:
ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಖಾರದ ಪುಡಿ ಎರಚಿ ನಗದು ದೋಚಿ ಪರಾರಿಯಾದ ಘಟನೆ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶರಣಬಸವೇಶ್ವರ ನಗರದ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ.

ತಡ ರಾತ್ರಿ 2 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕ್’ಗೆ ನುಗ್ಗಿದ ಮೂವರು
ಕಳ್ಳರು ಪೆಟ್ರೊಲ್ ಬಂಕ್ ನ ಗಾಜಿನ ಬಾಗಿಲು ಒಡೆದು ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ಕ್ಯಾಶ್ ಬ್ಯಾಗ್ ಕಿತ್ತುಕೊಂಡು
ಬಾಗಿಲು ಒಡೆದಿದ್ದಾರೆ ಕ್ಯಾಶ್ ಬ್ಯಾಗ ಕೊಡದಿದದ್ದಕ್ಕೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ.
ಹಾಡಹಗಲೇ ಬೈಕನಲ್ಲಿ ಬಂದು ಮಹಿಳೆಯ ಚೈನ್ ಸ್ನ್ಯಾಚ :
ಶಹರ ಠಾಣಾ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್ ಭವನ ಸಮೀಪ ಬುಧವಾರ ಹಾಡಹಗಲೇ ಚೈನ್ ಸ್ನ್ಯಾಚಿಂಗ್ ನಡೆದಿದ್ದು, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಎಫ್ ಡಿಸಿ ಶಾಂತಾ ಮಧ್ಯಾಹ್ನ ಊಟ ಮುಗಿಸಿಕೊಂಡು ಕಚೇರಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಲ್ಲಿ ಹೊರಟಿದ್ದ ಶಾಂತಾ ಅವರನ್ನು ಹತ್ತಿರದಿಂದ ಹಿಂಬಾಲಿಸಿದ ಇಬ್ಬರು ಯುವಕರು ಮಾಸ್ಕ್ ಹಾಕಿಕೊಂಡು ಬೈಕ್ ಮೇಲೆ ಬಂದು 20 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.
ಪಾನ್ ಶಾಪ್ ಅಂಗಡಿ ಕೀಲಿ ಒಡೆದ ಮುಸುಕುದಾರಿಗಳು :

ಇನ್ನೊಂದು ಪ್ರಕರಣದಲ್ಲಿ ನಗರದ ಹಾತಲಗೇರಿ ರಸ್ತೆಯಲ್ಲಿರುವ ಖಾಸಗಿ ಬಾರ್ ವೊಂದರ ಹತ್ತಿರ ಇರುವ ಪಾನಶಾಪ್ ಕೀಲಿ ಮುರಿದು ಕಳ್ಳತನ ಮಾಡಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ :
ಮುಸುಕುದಾರಿಗಳು ಮಾರಕಾಸ್ತ್ರಗಳನ್ನು ಹಿಡಿದು ಮನೆ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರುವ ಗ್ಯಾಂಗ್ನ ಭಯಾನಕ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಹೀಗಾಗಿ ಮುಸುಕುದಾರಿ ಕಳ್ಳರನ್ನು ಪತ್ತೆ ಮಾಡುವಂತೆ ಸಾರ್ವಜನಿಕರು ಪೋಲಿಸರಿಗೆ ಒತ್ತಾಯ ಮಾಡಿದ್ದಾರೆ.
ಹಿಂದೆ ಕೂಡ ಗದಗ ಬೆಟಗೇರಿ ಅವಳಿ ನಗರದಲ್ಲಿ ಮುಸುಕುದಾರಿ ಕಳ್ಳರ ಹಾವಳಿ ಹೆಚ್ಚಾಗಿತ್ತು ಆ ವೇಳೆಯಲ್ಲಿ ಪೊಲೀಸರು ಅವರನ್ನು ಪತ್ತೆ ಮಾಡಿದ್ದರು ಇದೀಗ ಮತ್ತೆ ಗ್ರಾಮೀಣ ಹಾಗೂ ಶಹರ ಪ್ರದೇಶದಲ್ಲಿ ಮುಸುಕುದಾರಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಜನರು ಭಯದಲ್ಲಿದ್ದಾರೆ.
ಈಗಾಗಲೇ ಈ ಕೃತ್ಯವನ್ನು ಗಂಭೀರವಾಗಿ ತೆಗೆದುಕೊಂಡಿ ಪೋಲಿಸ್ ಇಲಾಖೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದು ಮುಸುಕುದಾರಿ ಗ್ಯಾಂಗ ಪತ್ತೆಗೆ ಬಲೆ ಬೀಸಿದ್ದಾರೆ.

