ತಹಸೀಲ್ದಾರ್ ಕಚೇರಿಯಲ್ಲಿ ಶ್ರೀ ಹಡಪದ ಅಪ್ಪಣ್ಣನವರ 891ನೇ ಜಯಂತಿ ಆಚರಣೆ

Samagraphrabha
1 Min Read

ಲಕ್ಷ್ಮೇಶ್ವರ : ಪಟ್ಟಣದ ತಹಶೀಲ್ದಾರ್ ಕಚೇರಿ ಪುರಸಭೆ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಸರಕಾರಿ ಶಾಲೆ ಕಾಲೇಜು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಹಡಪದ ಸಮಾಜ ಬಾಂಧವರ ಮನೆ ಮತ್ತು ಸಲೂನ್ ಶಾಪ್ ಗಳಲ್ಲಿ ಇದ
ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ 891 ನೇ ಜಯಂತಿಯನ್ನು ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಜಯಂತಿ ಅಧ್ಯಕ್ಷತೆ ವಹಿಸಿದ್ದ ಉಪ ತಹಸಿಲ್ದಾರ್ ಮಂಜುನಾಥ್ ಅಮಾಸಿ ಅವರ ಮಾತನಾಡಿ 12ನೇ ಶತಮಾನದ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ ಯಾಗಿ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ಹಲವಾರು ವಚನಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ ಅವರ ವಚನಗಳು ಇಂದಿನ ಜನಾಂಗಕ್ಕೆ ಮಾಧುರಿಯಾಗಿವೆ ಎಂದರು

ಹಡಪದ ಸಮಾಜದ ತಾಲೂಕ ಅಧ್ಯಕ್ಷ ಗುಡ್ಡಪ್ಪ ಹಡಪದ ಅವರು ಮಾತನಾಡಿ ರಾಜ್ಯದಲ್ಲಿ ಹಡಪದ ಸಮಾಜ ಚಿಕ್ಕ ಸಮಾಜ ವಾಗಿದ್ದು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ ಅದಕ್ಕಾಗಿ ಸರ್ಕಾರ ಹಡಪದ ಸಮಾಜವನ್ನು ಪ್ರವರ್ಗ ಒಂದಕ್ಕೆ ಸಲ್ಲಿಸಬೇಕು ಹಡಪದ ಸಮಾಜದ ನಿಗಮ ಮಂಡಳಿ ಸ್ಥಾಪಿಸಬೇಕು ಕ್ಷೌರಿಕ ವೃತ್ತಿ ದಾರರಿಗೆ ಸರ್ಕಾರದಿಂದ ಪ್ರತಿ ಪುರಸಭೆಗೆ ಮತ್ತು ಗ್ರಾಮ ಪಂಚಾಯಿತಿಯ ಮೂಲಕ ಸಲಕರಣೆಗಳನ್ನು ಪೂರೈಸಬೇಕು ಎಂದರು.

ಈ ಸಮಯದಲ್ಲಿ ಕಚೇರಿಯ ವಿವಿಧ ಇಲಾಖೆ ಅಧಿಕಾರಿಗಳು ಸಮಾಜದ ಬಾಂಧವರು
ಉಪಸ್ಥಿತರಿದ್ದರು.

- Advertisement -
Ad image

Share this Article