ಗದಗ : ವಿಜಯ ಲಲಿತಾ ಕಲಾ ಸಂಸ್ಥೆಯ ಅಡಿಯಲ್ಲಿರುವ ವಿಜಯ ಪ್ರಾಥಮಿಕ ಶಾಲೆ, ವಿಜಯ ವಾಣಿಜ್ಯ ಪದವಿ ಪೂರ್ವ ವಿದ್ಯಾಲಯ ಶಾಲೆಯ ಸಿಬ್ಬಂದಿಯವರು ಆಯೋಜಿಸಿದ್ದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಅಕ್ಕಿ ಇವರನ್ನು ಗೌರವಿಸಲಾಯಿತು ನಂತರ ಮಾತಾನಾಡಿದ ಇವರು ವಿದ್ಯಾರ್ಥಿಗಳು ಮೋಬೈಲ್ ಬಳಕೆ ಕಡಿಮೆ ಮಾಡಬೇಕು, ಏಕಾಗ್ರತೆಯಿಂದ ಪುಸ್ತಕ ಓದುವ ಮತ್ತು ವಿವಿದ ಕಲೆಗಳಲ್ಲಿ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು. ನಂತರ ಸಂಸ್ಥೆಯ ಕಾರ್ಯದರ್ಶಿಗಳಾದ ಸಂತೋಷ ಅಕ್ಕಿ ಅವರು ಮಾತನಾಡಿ ಸನಾತನ ಕಾಲದಲ್ಲಿ ಗುರುಶಿಷ್ಯ ಪರಂಪರೆಯ ಬಗ್ಗೆ ಮತ್ತು ಹಿಂದಿನ ಗುರುಕುಲದ ಪದ್ಧತಿ ಹಾಗು ಈಗಿನ ಶೈಕ್ಷಣದ ಬಗ್ಗೆ ವಿವರಿಸಿದರು. ಸಂಸ್ಥೆಯ ಸಾಗರಿಕಾ. ಎಸ್. ಅಕ್ಕಿ ಹಾಗೂ ಪದವಿ ಮಹಾವಿದ್ಯಾಲಯದ ಪ್ರ.ಪ್ರಾ ಡಾ. ಸಿ. ವಿ. ಬಡಿಗೇರ,ಪೂರ್ವ ಪದವಿ ಮಹಾವಿದ್ಯಾಲಯದ ಪ್ರ.ಪ್ರಾ ಶಿಲ್ಪಾ ಮಲ್ಲಾಪೂರ, ಪೂರ್ವ ಪ್ರಾಥಮಿಕ ಮುಖ್ಯೋಪಾಧ್ಯಾಯರು ರೇಖಾ ಮಲೇಕರ್, ಪ್ರಾಥಮಿಕ ಮುಖ್ಯೋಪಾಧ್ಯಾಯರು ಭಾಗ್ಯಲಕ್ಷ್ಮೀ ಶೇಷಗಿರಿ ಮತ್ತು ಸಂಸ್ಥೆಯ ಸಿಬ್ಬಂದಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾಗತವನ್ನು ಪ್ರೊ. ರವಿಚಂದ್ರ ನುಡಿದರು. ವಂದನಾರ್ಪಣೆಯನ್ನು ಪ್ರೊ. ಅರುಣಕುಮಾರ ನೆರೆವೆರೆಸಿದರು. ನಿರೂಪಣೆಯನ್ನು ಪ್ರೊ. ವೀರೇಶ ಬನಿಕಟ್ಟಿ ನಡೆಸಿಕೊಟ್ಟರು.
