ಗಜೇಂದ್ರಗಡ : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳ ಪೈಕಿ ಯುವತಿ ಇಂದು ಚಿಕಿತ್ಸೆ ಫಲಿಸದೆ ಗದಗ ಜಿಮ್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಕಳೆದ ಸೋಮವಾರ ಜುಲೈ 7 ರಂದು ರಾಜೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಕ್ರಿಮಿನಾಶಕ ಸೇವನೆ ಮಾಡಿದ್ದ ಪ್ರೇಮಿಗಳು ಪೈಕಿ ಇಂದು ಯುವತಿ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾಳೆ.
ಇಬ್ಬರೂ ಅಪ್ರಾಪ್ತೆ ವಯಸ್ಕರಾಗಿದ್ದು ಯುವತಿ ಸಾವನಪ್ಪಿದ್ದಾಳೆ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ.
ಚಿಕಿತ್ಸೆ ಫಲಿಸದೇ ಅಪ್ರಾಪ್ತೆ ಸಾವನಪ್ಪಿದ್ದು ಯುವಕ ದೇವಪ್ಪ ಹಾದಿಮನಿಗೆ ಚಿಕಿತ್ಸೆ ಮುಂದುವರೆದಿದೆ.
ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

