ರೋಣ : ತಾಲ್ಲೂಕಿನ ಬಾಚಲಾಪುರ ಗ್ರಾಮದಲ್ಲಿ ಮಹಿಳೆಯರಿಂದ ಮಳೆಗಾಗಿ ಕೆರೆಯಲ್ಲಿ ಗಂಗಾ ಪೂಜೆ ಗುರ್ಜಿ ಒಕ್ಕಲಿಗರಿಗೆ ಮಳೆ ತರುವ ಸಂಪ್ರದಾಯದ ದೇವರು. ಪ್ರತಿವರ್ಷ ಭಾದ್ರಪದ ಆಶ್ವೇಜ ಮಾಸಗಳಲ್ಲಿ ಹಳ್ಳಿಗಳಲ್ಲಿ ಮಳೆಯಾಗದೇ ಇದ್ದಾಗ ಗುರ್ಜಿ ಆಡುವುದು ಸಾಮಾನ್ಯ. ಗುರ್ಜಿ ಆಡಿ ಹೋದ ಏಳೆಂಟು ದಿನಗಳಲ್ಲಿ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ. ರೊಟ್ಟಿ ಬೇಯಿಸುವ ಹೆಂಚಿನ ಮೇಲೆ ಸಗಣಿಯಿಂದ ಗುರ್ಜಿ ತಯಾರಿಸಿ (ಮೂರ್ತಿ ತರಹ) ಗರಿಕೆಯಿಂದ ಶೃಂಗರಿಸುತ್ತಾರೆ. ಅದನ್ನು ಹೆಂಚಿನ ಮೇಲಿಟ್ಟುಕೊಂಡು, ತಲೆಯ ಮೇಲೆ ಹೊತ್ತುಕೊಂಡು ಗ್ರಾಮದ ಓಣಿಗಳಲ್ಲಿ ತಿರುಗುತ್ತಾರೆ. ಆಗ ಮನೆಯವರು ತಂಬಿಗೆಯಲ್ಲಿ ನೀರು ತಂದು ಗುರ್ಜಿಯ ಮೇಲೆ ಸುರಿಯುತ್ತಾರೆ. ನೀರು ಹಾಕುವಾಗ ಗುರ್ಜಿ ಹೊತ್ತುಕೊಂಡ ಮಕ್ಕಳು ಗರಗರನೇ ತಿರುಗುತ್ತಾರೆ. ಆಗ ಪಕ್ಕದಲ್ಲಿನ ಯುವಕರು, ಮಕ್ಕಳು, ಮಹಿಳೆಯರು ಸೇರಿ ಗುರ್ಜಿಯ ಜಾನಪದ ಹಾಡು ಹಾಡುತ್ತಾರೆ. ನಂತರ ಗುರ್ಜಿಯಿಂದ ಸಂಗ್ರಹಿಸಿ ಗಿರಣಿಯಲ್ಲಿ ಜೋಳ ಒಡೆಯಿಸುತ್ತಾರೆ. ಊರ ದೇಗುಲದ ಆವರಣದಲ್ಲಿಯೇ ಜೋಳದ ನುಚ್ಚು ಸಾರು ತಯಾರಿಸಿ ಮೇಘರಾಜನಿಗೆ ಪೂಜೆ, ಪುನಸ್ಕಾರ ಮಾಡುತ್ತಾರೆ.
ಈ ಸಂದರ್ಭದಲ್ಲಿ ರವೀಂದ್ರ ಕೊಪ್ಪದ ಬಾಸಲಾಪುರ ಗ್ರಾಮದ ಗುರುಹಿರಿಯರು ಮಕ್ಕಳು ವರುಣ ದೇವರಿಗೆ ಪ್ರಾರ್ಥಿಸುತ್ತಿದ್ದಾರೆ.
ರೋಣ ತಾಲ್ಲೂಕಿನಿ ಬಾಸಲಾಪುರ ಗ್ರಾಮದಲ್ಲಿ ಮಳೆಗಾಗಿ ಕೆರೆಯಲ್ಲಿ ಗಂಗಾ ಪೂಜೆ
