ಕುಷ್ಟಗಿ : ತಾಲ್ಲೂಕಿನ ಬಸಾಪೂರ ಗ್ರಾಮದ ನಿವೃತ ಯೋಧ ರಂಗಪ್ಪ ವಾಲ್ಮೀಕಿ ಅವರು 39 ವರ್ಷ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹುಟ್ಟೂರಿಗೆ ಆಗಮಿಸಿದ್ದ ವೇಳೆ ಅಭೂತ ಪೂರ್ವ ಸ್ವಾಗತ ದೊರೆಯಿತು.ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬಸಾಪೂರ ಗ್ರಾಮದಲ್ಲಿ ಜನಿಸಿ ಇಂಡಿಯನ್ ಪ್ಯಾರಾ ಮಿಲಿಟರಿಯಲ್ಲಿ ಅವಕಾಶ ಪಡೆಯುವ ಮೂಲಕ ರಾಷ್ಟ್ರ ರಕ್ಷಣೆಗೆ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಸುದೀರ್ಘ 39 ವರ್ಷಗಳ ಸೇವೆಯ ನಂತರ ವಯೋಸಹಜ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ರಂಗಪ್ಪ ರವರಿಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಅಭೂತಪೂರ್ವ ಸ್ವಾಗತ ಕೋರಿದರು.ಇದೆ ವೇಳೆಯಲ್ಲಿ ವಿವಿಧ ಗ್ರಾಮದ ಸಾರ್ವಜನಿಕರು,ಕುಟುಂಬ ಸದಸ್ಯರು,ಸ್ನೇಹಿತರು ಸೇರಿದಂತೆ ಅನೇಕರು ಉಪಸ್ಥಿತಿವಹಿಸಿದ್ದರು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ರಂಗಪ್ಪ ಅವರು ರಾಷ್ಟ್ರ ರಕ್ಷಣೆಯ ಸೇವೆ ಎಲ್ಲಾರಿಗೂ ಸಿಗುವಂತಹುದಲ್ಲಾ ಆದರೆ ನನಗೆ ಅಂತಹ ಅವಕಾಶ ಸಿಕ್ಕಿತ್ತು ಭಾರತಾಂಬೆಯ ಸೇವೆ ಮಾಡಿದ ಸಾರ್ಥಕತೆ ನನಗಿದೆ ಅದು ಹೆಮ್ಮೆ ಎಂದರು.
ರಂಗಪ್ಪ ಹನಮಪ್ಪ ವಾಲ್ಮೀಕಿ,
ನಿವೃತ್ತ ಯೋಧ.
