ಗದಗ : ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ 2 ರಲ್ಲಿ ಸ್ಪೂರ್ತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಶಾಲೆಯಲ್ಲಿನ ಮಕ್ಕಳಿಗೆ ಉಚಿನ ನೋಟಬುಕ್ಕ ವಿತರಣೆ ಮಾಡಿದರು.
ಯೋಗ ದಿನಾಚರಣೆ ಅಂಗವಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಸ್ಪೂರ್ತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯು ಇತ್ತೀಚಿಗೆ 200+ ನೋಟ ಬುಕ್ಕ,ಪುಸ್ತಕ, ಪೆನ್ನು,ಪೆನ್ಸಿಲ್ ಗಳನ್ನು ಉಚಿತವಾಗಿ ವಿತರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್ ಎಸ್ ಬುರಡಿ ಮಾತನಾಡಿ ಗುಣಮಟ್ಟದ ಶಿಕ್ಷಣ ದೊರಕಿಸಲು ಸಮಾಜದ ಪ್ರೋತ್ಸಾಹವೂ ಆಗತ್ಯ ಈ ನಿಟ್ಟಿನಲ್ಲಿ ಯುವಕರು ಇಂದು ಮಾಡುತ್ತಿರುವ ಕಾರ್ಯ ಮಾದರಿಯಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪೂರ್ತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಅನುಪ ಅರಳಗುಪ್ಪಿ ಇವರು ವಹಿಸಿಕೊಂಡಿದ್ದರು.
ಈ ಸಂಧರ್ಭದಲ್ಲಿ ಶಹರ ಬಿಇಓ
ಆರ್ ವಿ ಶೆಟ್ಟಪ್ಪನವರ,ಸಮನ್ವಯ ಅಧಿಕಾರಿ,ಎಸ್ ಪಿ ಪ್ರಭಯ್ಯನಮಠ, ಎಸ್ ವಿ ಲಾಂಡೆ,ಶಾಲಾ ಮುಖ್ಯೋಪಾಧ್ಯೆ ಗೀತಾ ದೇವಾಂದಂಠ,ಸಂಸ್ಥೆಯ ಉಪಾಧ್ಯಕ್ಷ ಪ್ರಮೋದ ಅಂಟಿನ್,ಸದಸ್ಯರಾದ ಸಚಿನ ಯತಾನೂರ,ಶಿವಕುಮಾರ ಬಗಾಡೆ,ಪ್ರವೀಣ ಬಡಿಗೇರ,ಗಣೇಶ ಗಂಜಿ,ಮಂಜುನಾಥ ಮುದಗಲ್ಲ,ವಿಶ್ವನಾಥ ಗುಂಟಾಪೂರ,ಚಂದ್ರು ಆರಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು, ಪದ್ಮಾವತಿ ಕರಮುಡಿ ವಂದನಾರ್ಪಣೆ ಗೈದರು.

