ರೋಣ : ಶ್ರೀ ಮದ್ ಪ್ರಣವ ಸ್ವರೂಪಿ ಗಂಗಾದೇಶ್ವರ ಮಹಾಸ್ವಾಮಿಗಳು ಅಂಕಲಿ ಅಡವಿಸಿದ್ದೇಶ್ವರ ಸಂಸ್ಥಾನಮಠ ಸ್ವಾಮಿಗಳು ತಮ್ಮ 50ನೇ ಹುಟ್ಟುಹಬ್ಬವನ್ನು ತಾವು ಕಲಿತ ತಾಲೂಕಿನ ಕೊತಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ನೀಡುವದರ ಮೂಲಕ ಮಕ್ಕಳೊಂದಿಗೆ ಆಚರಿಸಿಕೊಂಡರು.
ಗಂಗಾದೇಶ್ವರ ಮಹಾಸ್ವಾಮಿಗಳು ಮಾತನಾಡಿ ಹುಟ್ಟುಹಬ್ಬ ಎಂಬುದು ನಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ. ಮಕ್ಕಳು ದೇವರ ಸ್ವರೂಪ ದೇವರನ್ನು ನಾವು ಮಕ್ಕಳಲ್ಲಿ ಕಾಣುತ್ತೆವೆ ಹುಟ್ಟುಹಬ್ಬದ ದಿನವನ್ನು ನಾವು ಮಕ್ಕಳೊಂದಿಗೆ ಆಚರಿಸುತ್ತಿರುವದು ನನಗೆ ತುಂಬಾ ಖುಷಿಯಾಗಿದೆ. ಕನ್ನಡ ಶಾಲೆಗಳು ಉಳಿಯಬೇಕು ಗ್ರಾಮೀಣ ಪ್ರದೇಶದ ಮಕ್ಕಳು ಕನ್ನಡ ಶಾಲೆಗಳಲ್ಲಿ ಹೆಚ್ಚು ಹೆಚ್ಚು ಕಲಿತು ವಿದ್ಯಾವಂತರಾಗಿ ಕಲಿತ ಶಾಲೆಗೆ ಮತ್ತು ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಇಲ್ಲಿ ಕಲಿಯುವಂತ ಎಲ್ಲಾ ಮಕ್ಕಳು ವಿದ್ಯಾವಂತರಾಗಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳು, ಹಣಮಪ್ಪ ಅಸೂಟಿ, ವೀರಣ್ಣ ಯಾಳಗಿ, ಮಲ್ಲಪ್ಪ ನಾಲತ್ವಾಡ, ಊರಿನ ಗುರುಹಿರಿಯರು, ಸಿಬ್ಬಂದಿ ವರ್ಗ, ಶಾಲೆಯ ಮುದ್ದು ಮಕ್ಕಳು ಮಹಾ ಸ್ವಾಮಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
