ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆ; ಕ್ರಮಕ್ಕೆ ಆಗ್ರಹ

Samagraphrabha
1 Min Read

ಸಮಗ್ರಪ್ರಭ ವಿಶೇಷ ಸುದ್ದಿ

ಮಂಜುನಾಥ ಕುದರಿಕೋಟಿ

ಗಜೇಂದ್ರಗಡ: ಪಟ್ಟಣದ ಪ್ರಮುಖ ಬೀದಿಗಳು ಹಾಗೂ ವೃತ್ತಗಳಲ್ಲಿ ಬಿಡಾಡಿ ದನಗಳು ಮಲಗಿರುವುದು, ಪರಸ್ಪರ ಕಾದಾಡುವುದು ಸಾಮಾನ್ಯವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವುದರ ಜತೆಗೆ ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳಿಗೆ ಸಮಸ್ಯೆ ಎದುರಾಗಿದೆ. ಗಜೇಂದ್ರಗಡ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಸ್ಥಳಾಂತರಕ್ಕೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ.

ಗಜೇಂದ್ರಗಡ ಪ್ರಮುಖ ರಸ್ತೆಯಲ್ಲಿ ಗುಂಪು ಗುಂಪಾಗಿ ನಿಲ್ಲುವ ಬಿಡಾಡಿ ದನಗಳು ವಾಹನಗಳ ಸಂಚಾರಕ್ಕೂ ಅಡಚಣೆ ಉಂಟು ಮಾಡುತ್ತಿವೆ. ಗಜೇಂದ್ರಗಡ ಭಾಗದಲ್ಲಿರುವ ಗುಡಿ, ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಎನ್ನದೇ ಬಿಡಾಡಿ ದನಗಳು ಎಲ್ಲ ಸಮಯದಲ್ಲೂ ರಸ್ತೆಗಳ ಮಧ್ಯೆ ಬಂದು ಕೂರುತ್ತವೆ. ಇದರಿಂದಾಗಿ ಬಸ್ಸು, ಕಾರು, ಆಟೊ ಸೇರಿದಂತೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಮಕ್ಕಳು ಶಾಲೆಗೆ ಹೋಗಿ ಬರುವ ಸಮಯವಾದ ಬೆಳಿಗ್ಗೆ ಮತ್ತು ಸಂಜೆ ಇಂತಹ ಕಿರಿಕಿರಿ ಜಾಸ್ತಿ ಇರುತ್ತದೆ.

- Advertisement -
Ad image

ದಿನೇ ದಿನೇ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದೆ ಇದರಿಂದ ನಿತ್ಯ ವಾಹನ ಸವಾರರಿಗೆ, ರಸ್ತೆ ಬದಿ ಅಡ್ಯಾಡುವವರಿಗೆ ಕಿರಿಕಿರಿ ಉಂಟಾಗುತ್ತಿದೆ ಇದರಿಂದ ಹಲವಾರು ಬೈಕ್ ಸವಾರರು ಬಿದ್ದು ಅಪಘಾತಗಳಾಗುತ್ತಿವೆ ಶೀಘ್ರವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಬಿಡಾಡಿ ದನಗಳು ಮತ್ತು ಬಿದಿ ನಾಯಿಗಳಿಂದ ಜನಸಾಮಾನ್ಯರನ್ನು ರಕ್ಷಿಸಬೇಕು.
ಪ್ರಕಾಶ್ ರಾಠೋಡ್, ಸಂಚಾಲಕರು ಕ್ರಾಂತಿ ಸೂರ್ಯ ಜೈಭೀಮ್ ಸೇನೆ.

Share this Article