ಬೀಜದುಂಡೆಗಳು ಹಸಿರು ಸಂಭ್ರಮದ ಮುನ್ನುಡಿ

Samagraphrabha
1 Min Read

ನವಲಗುಂದ : ಬೀಜದುಂಡೆಗಳು ಹೊಸ ಹೊಸ ಸಸ್ಯಗಳ ಉಗಮಕ್ಕೆ ನಾಂದಿಯಾಗಿದ್ದು, ಆ ಸಸ್ಯಗಳು ಬೆಳೆದು ಮರವಾಗಿ ಹೊಮ್ಮಿ ಹಸಿರು ಸಂಭ್ರಮಕ್ಕೆ ಮುನ್ನುಡಿ ಬರೆಯಲಿ. ಇಡೀ ಊರು
ಹಸಿರು ತೋರಣದಿಂದ ಕಂಗೊಳಿಸಲಿ ಎಂದು ಇಕೋ ಕ್ಲಬ್ ನ ನೋಡಲ್ ಶಿಕ್ಷಕರಾದ ದೀಪಕ ಮುತಾಲಿಕ ದೇಸಾಯಿ ಅವರು ಶುಭ ಹಾರೈಸಿದರು.

ಬಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಶಿವರಾಮ ಕಾರಂತ ಇಕೋ ಕ್ಲಬ್ ನ 2025-26 ನೇ ಸಾಲಿನ ಚಟುವಟಿಕೆಗಳನ್ನು ಬೀಜದುಂಡೆ ತಯಾರಿಕಾ ಕಾರ್ಯಾಗಾರದ ಮೂಲಕ ಆರಂಭಿಸಿದ ಅವರು ಮೇಲಿನಂತೆ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ಮುಖ್ಯಗುರುಗಳಾದ ಎಂ.ಬಿ.ಪವಾಡಶೆಟ್ಟರ ಮಾತನಾಡಿ, ಗಿಡ ಬೆಳೆಸುವುದೇ ಜನನ, ಗಿಡ ಕಡಿಯುವುದೇ ಮರಣ, ಕಡಿದ ಮರಗಳ ಎರಡರಷ್ಟು ಮರಗಳನ್ನು ಬೆಳೆಸುವುದೇ ಜೀವನ ಎಂದು ಮಕ್ಕಳಿಗೆ ಹಸಿರು ಬದುಕಿನ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಗುರುಗಳಾದ ಎಸ್.ಬಿ.ಕಡಕೋಳ, ಪಿ.ಎನ್.ಬಳ್ಳಾರಿ, ಎನ್.ಎನ್.ಮಾಳಣ್ಣವರ, ಎಸ್.ಬಿ.ಸವದತ್ತಿ, ನಿರ್ಮಲಾ ಸಂಗಳ, ಗೀತಾ ಹಂಡಿ, ಪ್ರದೀಪ ಹೂಗಾರ ಹಾಗೂ ಇಕೋ ಕ್ಲಬ್ ನ ವಿದ್ಯಾರ್ಥಿ ಸದಸ್ಯರು ಉಪಸ್ಥಿತರಿದ್ದರು.

- Advertisement -
Ad image

Share this Article