ನವಲಗುಂದ: ಸರ್ವ-ಧರ್ಮ ಸಮನ್ವಯದ ಸಂಕೇತ ಶ್ರೀ ಅಜಾತ ನಾಗಲಿಂಗ ಮಠವಾಗಿದೆ ಎಂದು ಶಾಸಕ ಎನ್. ಎಚ್ ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಅಜಾತ ನಾಗಲಿಂಗಜ್ಜನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರೀಮಠದಲ್ಲಿ ಗದ್ದುಗೆ ಮೇಲೆ ಪಂಜಾ ಹಾಗೂ ಬೈಬಲ್ ಇಟ್ಟು ಪೂಜೆ ಸಲ್ಲಿಸುವ ಮೂಲಕ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿ ಯಾಗಿದೆ, ಪ್ರತೀ ವರ್ಷದಂತೆ ಈ ವರ್ಷವೂ ಆರಾಧ್ಯದೈವ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ 144ನೇ ಆರಾಧನಾ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಗಾಂಧಿ ಮಾರುಕಟ್ಟೆಯಲ್ಲಿ ಸರ್ಕಾರದಿಂದ 20 ಲಕ್ಷದಲ್ಲಿ ನಾಗಲಿಂಗಜ್ಜನ ಪ್ರವೇಶ ದ್ವಾರ (ಕಮಾನ) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು ಮುಂದಿನ ವರ್ಷದೊಳಗೆ ಉದ್ಘಾಟನೆ ಮಾಡಲಾಗುವುದೆಂದರು.
ದಿವ್ಯ ಸಾನಿಧ್ಯವನ್ನು ಮಠದ ಪೀಠಾಧ್ಯಕ್ಷರಾದ ಶ್ರೀ ವೀರಯ್ಯ ಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಸಿ.ಪಿ.ಐ ರವಿ ಕಪ್ಪತನವರ, ಶಿವಾನಂದ ಅಂಬಿಗೇರ, ಪಿ.ಎಸ್.ಐ ಜನಾರ್ಥನ ಭಟ್ರಳ್ಳಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸಿದ್ದಯ್ಯ ಸ್ವಾಮಿಗಳು, ವಿಜಯಪ್ಪಗೌಡ ಪಾಟೀಲ, ಆನಂದ ಹವಳಕೋಡ, ಸಂತೋಷಗೌಡ ಪಾಟೀಲ,ವಿಕಾಸ ತದ್ದೆವಾಡಿ, ಅರುಣ ಸುಣಗಾರ, ನಂದಿನಿ ಹಾದಿಮನಿ, ಮದಾರಸಾಬ ಉಗರಗೋಳ, ಭರಮಪ್ಪ ಕಾತರಕಿ, ಚಂದ್ರು ಅಸುಂಡಿ, ಪ್ರಕಾಶ ಗೋಂದಳೆ, ಅಸ್ಫಾಕ ಚಾಹುಸೇನ, ದೇವಪ್ಪ ಭೋವಿ, ಸುರೇಶ ಪಾಟೀಲ, ಭರತೇಶ ಡಿ. ಪಾಟೀಲ, ಮನೋಹರ ಎ. ಪಾಟೀಲ, ಮೌನೇಶ ವಿಶ್ವಜ್ಞ, ಎಂ.ಡಿ. ಬಡಿಗೇರ, ನರಸಪ್ಪ ಬಡಿಗೇರ, ನಾಗಪ್ಪ ಭೋವಿ, ಪ್ರಕಾಶ ಭೋವಿ, ವಿನಾಯಕ ಹಿರೇಮಠ, ಮಾರುತಿ ಭೋವಿ, ಸುರೇಶ ಹಡಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…
