ಜಿಲ್ಲಾಧ್ಯಂತ ಅಕ್ರಮ ಮಣ್ಣು ಮಾಫಿಯಾ..!!
ಸಮಗ್ರ ಪ್ರಭ ವಿಶೇಷ ಸುದ್ದಿ
ಮಂಜುನಾಥ ಅಚ್ಚಳ್ಳಿ.
ಗದಗ : ಜಿಲ್ಲೆಯಲ್ಲಿ ಹಗಲು-ರಾತ್ರಿ ಎಗ್ಗಿಲ್ಲದೇ ಅಕ್ರಮ ಮಣ್ಣು ದಂಧೆ ಸಾಗಾಟ ಬಲು ಜೋರಾಗಿಯೆ ನಡೆಯುತ್ತಿದ್ದು ಒಂದೆಡೆ ವರ್ಷದಿಂದ ವರ್ಷಕ್ಕೆ ಖನಿಜ ಸಂಪನ್ಮೂ ಹೊಂದಿದ ಗುಡ್ಡದ ಅಂಚಿಗೂ ಕನ್ನ ಹಾಕಿದ್ದಾರೆ,ಇನ್ನೊಂದೆಡೆಗೆ ಗಾಳಿ ವಿದ್ಯುತ್ ಕಂಪನಿಯ ಆಮಿಷಕ್ಕೆ ರೈತರು ಫಲವತ್ತಾದ ಭೂಮಿಯಲ್ಲಿ ಮಣ್ಣು ಅಗೆಯುತ್ತಿದ್ದಾರೆ ಇದರಿಂದ ನಮ್ಮ ಖನಿಜ ಸಂಪನ್ಮೂಲಗಳ ಜೊತೆಗೆ ಭೂಮಿಗೆ ಒಡಲಿಗೆ ದೊಡ್ಡ ದೊಡ್ಡ ಯಂತ್ರಗಳನ್ನು ಉಪಯೋಗಿಸಿ ರಾಜಾರೋಷವಾಗಿ ಮಣ್ಣು ತುಂಬಿಕೊಂಡು ಊರ ತುಂಬಾ ಓಡಾಡುತ್ತಿವೆ ಇದು ಸಾರ್ವಜನಿಕರ ಕಣ್ಣಿಗೆ ಬಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,ಕಂದಾಯ ಇಲಾಖೆಯ ಕಣ್ಣಿಗೆ ಕಂಡರು ಕಾಣದಂತೆ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಅನುಮತಿಯೇ ಬೇರೆ ಜಮೀನಿನಲ್ಲಿ ಮಾಡುವ ದಂಧೆನೆ ಬೇರೆ :
ಕೃಷಿ ಜಮೀನು ಸಮತಟ್ಟು ಮಾಡುತ್ತೇವೆ ಎಂದು ಕೃಷಿ ಇಲಾಖೆಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಮನಸ್ಸೋ ಇಚೇಚಿ 20ರಿಂದ30 ಅಡಿ ಆಳ ತೆಗೆದು ಮಣ್ಣು ಮಾರಾಟ ಮಾಡುತ್ತಾರೆ.

ರೈತರಿಗೆ ಹಣದ ಆಮೀಷವೊಡ್ಡಿ ಜಮೀನುಗಳಲ್ಲಿ ಅಪಾರ ಮಣ್ಣನ್ನು ಲೂಟಿ ಮಾಡಲು ಮೊದಲೆ ಎಲ್ಲಾ ಯೋಜಿಸಿರುತ್ತಾರೆ ಅಮಾಯಕ ರೈತರಿಗೆ ಹಣದ ಆಸೆ ತೋರಿಸಿ ಫಲವತ್ತಾದ ಭೂಮಿಯನ್ನು ದೊಡ್ಡ ದೊಡ್ಡ ಜಿಸಿಬಿ ಹಿಟ್ಯಾಚಿ ಯಿಂದ ಅಗೆದು 6 ಚಕ್ರವುಳ್ಳ ಟಿಪ್ಪರ ಮುಖಾಂತರ ಮಾರಾಟ ಮಾಡುತ್ತಾರೆ.
ಜಿಲ್ಲೆಯ ಗದಗ ತಾಲೂಕು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಈ ಮಣ್ಣು ಮಾಫಿಯಾ ನಡೆದಿದೆ,ಶಿರಹಟ್ಟಿ, ಗಜೇಂದ್ರಗಡ,ಹೊಳೆಆಲೂರ ಸೇರಿದಂತೆ ವಿವಿಧೆಡೆ ಸರ್ಕಾರದ ನಿಯಮ ಗಾಳಿಗೆ ತೂರಿ ಭಾರಿ ಮಣ್ಣು ಗಣಿಗಾರಿಕೆ ಮಾಫಿಯಾ ನಡೆಯುತ್ತಿದೆ.
ಈ ಅಕ್ರಮ ಮಣ್ಣು ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಾಂತರ ತೆರಿಗೆ ವಂಚನೆ ಆಗುತ್ತಿದ್ದೆ ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳಬೇಕು ಅಕ್ರಮ ಮಣ್ಣು ಲೂಟಿ ಮಾಡಲು ಉಪಯೋಗಿಸುವ ವಾಹನ ಜಪ್ತಿಮಾಡಿ ಕ್ರಮ ಕೈಗೊಳಬೇಕು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕು ಎಂದು ಸಾರ್ವಜನಿಕರ ಪರವಾಗಿ “ಸಮಗ್ರ ಪ್ರಭ” ಪತ್ರಿಕೆ ಆಗ್ರಹಿಸುತ್ತದೆ.

