ಕಳಪೆ ಬೀಜ ವಿತರಣೆ ಕ್ರಮಕ್ಕೆ ಆಗ್ರಹ- ಮಾಬುಸಾಬ ಯರಗುಪ್ಪಿ

Samagraphrabha
1 Min Read

ನವಲಗುಂದ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಬೀಜ ತೆಗೆದುಕೊಂಡು ಹೋಗಿ ಬಿತ್ತಿ ಬೆಳೆ ಬಾರದೆ ರೈತ ಕಂಗಾಲಾಗಿದ್ದು ಬೀಜ ವಿತರಣಾ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.

ಈ ಕುರಿತು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದ ಅವರು ತಾಲೂಕಿನ ನಾಗನೂರ ಗ್ರಾಮದ ರೈತ ಹುಸೇನಸಾಬ ಮುಜಾವರ ಅವರು 28-05-2025ರಂದು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ 21 ಪಾಕೇಟ ಬೀಜರಾಜ ಕಂಪನಿಯ ಹೆಸರಿನ ಬೀಜಗಳನ್ನು ಖರೀದಿಸಿ ತಮ್ಮ ಮಾಲ್ಕಿ ವಹಿವಾಟಿನಲ್ಲಿರುವಂತಹ 13 ಎಕರೆ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದು ಅದು ಸರಿಯಾಗಿ ಮೊಳಕೆ ಒಡೆದಿರುವುದಿಲ್ಲ, ಸದರಿ ಬೀಜ ಕಳಪೆ ಇರುವುದರಿಂದ ಅಲ್ಲಿ ಹೆಸರಿನ ಬೆಳೆಯು ಸರಿಯಾಗಿ ಹುಟ್ಟಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಹುಸೇನಸಾಬ ಮುಜಾವರ ಮಾತನಾಡಿ ದಿನಾಂಕ 24-06-2025 ರಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿದರು ಸಹ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ, ರೈತರ ಅನಕೂಲಕ್ಕಿರುವ ರೈತ ಸಂಪರ್ಕ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಸಬ್ಸಿಡಿ ದರದಲ್ಲಿ ದೂರೆಯುತ್ತದೆ ಎಂದು ಹೆಸರು ಬಿತ್ತಿರುವಂತಹ ಹೆಸರಿನ ಬೀಜ ಹುಸಿಯಾಗಿದೆ, ಎಕರೆಗೆ 15 ಸಾವಿರ ರೂಪಾಯಿ ಬೀಜ, ಗೂಬ್ಬರ, ಟ್ರ್ಯಾಕ್ಟರ್ ಬಾಡಿಗೆಗಾಗಿ ಖರ್ಚು ಮಾಡಿದ್ದೇನೆ, ನನ್ನ ಈ ಪರಿಸ್ಥಿತಿಗೆ ಕಾರಣಿಕರ್ತರಾದ ಬೀಜ ಪೂರೈಕೆ ಮಾಡಿದ ಸಂಸ್ಥೆಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಕಳಪೆ ಬೀಜ ವಿತರಣೆ ಮಾಡಿದ್ದಕ್ಕೇ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ವಿತರಿಸುವಂತೆ ಮನವಿಯಲ್ಲಿ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಮಕ್ತುಮಸಾಬ ಅಲ್ಲಿಬಾಯಿ, ಮಹಮ್ಮದಲಿ ಮಿರ್ಜಿ, ಬಿ.ಎಚ್ ಮುಜಾವರ, ಬಶೀರಅಹ್ಮದ ಹುನಗುಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

- Advertisement -
Ad image

Share this Article