ಪ್ರೇಯಸಿಯನ್ನು ಕೊಂದು ಜಮೀನಿನಲ್ಲಿ ಹೂತಿಟ್ಟ ಪಾಗಲ ಪ್ರೇಮಿ
ಸಮಗ್ರ ಪ್ರಭ ವಿಶೇಷ ಸುದ್ದಿ
ಮಂಜುನಾಥ ಅಚ್ಚಳ್ಳಿ
ಗದಗ : ಕಳೆದ 6 ತಿಂಗಳಿಂದ ಯುವತಿ ಕಾಣೆಯಾಗಿದ್ದ ಪ್ರಕರಣವೊಂದರಲ್ಲಿ ತಾನು ಪ್ರೀತಿ ಮಾಡಿದ ಪ್ರೇಯಸಿ ಮದುವೆ ಆಗು ಎಂದು ಪೀಡಿಸಿದಕ್ಕೆ ಅವಳನ್ನು ಕೊಂದು ಜಮೀನುವೊಂದರಲ್ಲಿ ಹೂತುಹಾಕಿ 6 ತಿಂಗಳಾದರು ನಂಗೆನೂ ಸಂಭಂಧವಿಲ್ಲ ಎನ್ನುವ ರೀತಿಯಲ್ಲಿ ತಿರಗುತ್ತಿದ್ದ ಪಾಗಲ ಪ್ರೇಮಿಯ ಅಸಲಿ ಬಣ್ಣ ಬಯಲು ಮಾಡಿ ಮಣ್ಣಲ್ಲಿ ಮಣ್ಣಾಗಿದ್ದ ಪ್ರೀತಿ-ಪ್ರೇಮದ ಕೊಲೆ ಪ್ರಕರಣಕ್ಕೆ ಪೊಲೀಸರ ಚಾಣಾಕ್ಷತನ ತನಿಖೆಯಿಂದ ಕೊಲೆ ರಹಸ್ಯ ಬಯಲಾಗಿದೆ ಸಿನಿಮಾ ಮಾದರಿಯಲ್ಲಿ ಸಾಕ್ಷಿ ನಾಶ ಮಾಡುತ್ತಿದ್ದ ಕೊಲೆ ಆರೋಪಿ ಕಿಲಾಡಿ ಪ್ರಿಯಕರ ಇಂದು ಪೊಲೀಸರ ಅತಿಥಿಯಾಗಿದ್ದಾನೆ.
ಘಟನೆ ಹಿನ್ನೆಲೆ:
ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಕೊಲೆಯಾದ ಹುಡಗಿ ಮಧುಶ್ರೀ ಅಂಗಡಿ ಅದೇ ಗ್ರಾಮದ ಸತೀಶ್ ಹಿರೇಮಠ ಕೊಲೆ ಆರೋಪಿ 6 ವರ್ಷ ಇಬ್ಬರು ಪರಸ್ಪರ ಪ್ರೀತಿ ಮಾಡುತಿದ್ದರು ಇವರ ಪ್ರೀತಿ ಪ್ರೇಮದ ವಿಷಯ ಮಧುಶ್ರೀ ಕುಟುಂಬಸ್ಥರಿಗೆ ಗೊತ್ತಾಗಿದೆ. ಇದೇ ಕಾರಣದಿಂದ ಮಧು ಶ್ರೀಯನ್ನು ಗದಗ ಶಹರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಮಧುಶ್ರೀಯನ್ನು ಬಿಟ್ಟಿರುತ್ತಾರೆ ಕೆಲವು ತಿಂಗಳು ಕಾಲ ದೂರ ಇದ್ದ ಈ ಜೋಡಿ ಪುನಃ ಒಂದಾಗಿತ್ತು.
ಇದರ ನಡುವೆ 2024 ಡಿಸೆಂಬರ್ 16 ರ ರಾತ್ರಿ ಮಧುಶ್ರೀ ಗದಗ ನಗರದ ಅವರ ಸಂಬಂಧಿಕರ ಮನೆಯಿಂದ ಹೊರ ಬಂದಿದ್ದಳು ಅಂದಿನಿಂದ ಸಂಬಂಧಿಕರು ಕುಟುಂಬ ಸದಸ್ಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು ಅವಳ ಸುಳಿವು ಮಾತ್ರ ಸಿಗಲಿಲ್ಲ ಇತ್ತ ಪಾಗಲ್ಲ ಪ್ರೇಮಿಯು ಹಾಯಾಗಿ ತಾನು ತನ್ನ ಕೆಲಸ ಮಾಡುತ್ತ ಇದ್ದನ್ನು ಕಾಣೆಯಾದ ಕೆಲ ದಿನಗಳ ನಂತರ 2025 ಜನೆವರಿ 12 ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣವನ್ನು ಮನೆಯವರು ದಾಖಲಿಸುತ್ತಾರೆ.
ಅಂದಿನಿಂದ ಶುರವಾದ ತನಿಖೆ ಮೊದಲು ಪೊಲೀಸರು ಸತೀಶ್ ಮೇಲೆ ಅನುಮಾನದಿಂದ ವಿಚಾರಣೆ ಆರಂಭ ಮಾಡುತ್ತಾರೆ ಆತ ನನಗೆ ಏನು ಗೊತ್ತಿಲ್ಲ ಅಂತಾ ಹೇಳಿ ಏನು ಗೋತಿಲ್ಲದವನಂತೆ ಚಾಲಾಕಿ ಸುಮ್ಮನಿರುತ್ತಾನೆ ಇನಷ್ಟು ತನಿಖೆಗೆ ಇಳಿದ ಪೋಲಿಸರು ಇಬ್ಬರು ಒಂದೇ ಬೈಕ್ ನಲ್ಲಿ ಹೋಗಿರೋ ಸಿಸಿ ಟಿವಿ ವಿಡಿಯೋ ಸಿಗುತ್ತದೆ ಇದರ ಆಧಾರದ ಮೇಲೆ ಸತೀಶ್ ನನ್ನು ಮತ್ತೆ ವಿಚಾರಣೆಗೆ ಒಳಪಡುಸುತ್ತಾರೆ ಪಾಗಲ ಪ್ರೇಮಿ ಅಂದು ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸೋ ರೀತಿಯಲ್ಲಿ ಬೈಕ್ ಮೇಲೆ ಇಬ್ಬರು ಹೊಗಿದ್ದು, ನಿಜ ಆದರೆ ನಾನು ಮಧುಶ್ರೀಯನ್ನು ಹಾತಲಗೇರಿ ಗ್ರಾಮದ ಬಳಿ ಬಿಟ್ಟು, ನಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಹೋಗಿದ್ದೇನೆ ಅವಳು ಎಲ್ಲಿಗೇ ಹೋಗಿದ್ದಾಳೆ ಅಂತಾ ಗೊತ್ತಿಲ್ಲ ಅಂತಾ ಹೇಳಿ ಹೋಗುತ್ತಾನೆ ಇವನ ಮೇಲೆ ಮತಷ್ಟು ಅನುಮಾನ ಬಂದ ಪೋಲಿಸರು ಹೆಚ್ಚಿನ ತನಿಖೆ ಆರಂಭಿಸಿದರು ನಂತರ ಆತನ ಮೊಬೈಲ್ ನಲ್ಲಿನ ಇನ್ನೊಂದ ಸಿಮ್ ಗೆ ಒಂದು ಕಂಪನಿ ಮೆಸೇಜ್ ಬಂದಿರುತ್ತೆ ಆಗಲೇ ನಾಪತ್ತೆ ಕೇಸ್ ಗೆ ಟ್ವಿಸ್ಟ್ ಸಿಗುತ್ತದೆ ಮತ್ತೆ ಅವನನ್ನು ಠಾಣೆಗೆ ಕರೆಯಿರಿಸಿ ವಿಚಾರಿಸಿದಾಗ ಕೊಲೆ ಪ್ರಕರಣ ಬಾಯಿಬಿಡುತ್ತಾನೆ ಪಾಗಲ್ ಸತೀಶ್.

ಪಾಗಲ್ ಪ್ರೇಮಿ ಕೊಲೆ ಮಾಡಿದ್ದು ಹೇಗೆ :
6 ತಿಂಗಳುಕಾಲ ಚಳ್ಳೆಹಣ್ಣು ತಿನಿಸಿದ ಪಾಗಲ್ ಪ್ರೇಮಿ ಪೋಲಿಸರಿಗೆ ಲಾಕ್ ಆದ್ ತಕ್ಷಣ ಒಂದೋದಾಗಿ ಬಾಯಿಬಿಡುತ್ತಾ ಹೋಗುತ್ತಾನೆ 2024 ಡಿಸೆಂಬರ್ 16 ರಂದು ಪ್ರೇಯಸಿ ಕೊಲೆಯಾದ ಮಧುಶ್ರೀಯನ್ನು ಕರೆದುಕೊಂಡು ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದ ಒಂದು ತೋಟದ ಮನೆಗೆ ಬಂದಿರುತ್ತಾನೆ ಆಗ ಮಧುಶ್ರೀ ಮದುವೆಯಾಗು ಅಂತಾ ಹಠ ಹಿಡಿಯುತ್ತಾಳೆ ಆಗ ಇಬ್ಬರ ನಡುವೆ ಜಗಳವಾಗಿದ್ದು ಜಗಳ ವಿಕೊಪಕ್ಕೆ ಹೋಗಿ ಮಧುಶ್ರೀಯನ್ನು ಅವಳದೇ ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡುತ್ತಾನೆ ನಂತರ ಪಕ್ಕದ ಹಳ್ಳದಲ್ಲಿ ಅವಳ ಶವವನ್ನು ಹೊತು ಹಾಕಿ, ಏನೂ ನಡೆದೆಯಿಲ್ಲ ಎನ್ನುವ ಹಾಗೇ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ ಇಷ್ಟಲ್ಲದೇ ಪಾಗಲ್ ಪ್ರೇಮಿ ಸತೀಶ್ ಆಗಾಗ ಬಂದು ಸಾಕ್ಷಿ ನಾಶ ಮಾಡಲು ಹೂತಿದ್ದ ಶವದ ಎಲುಬು ಗಳನ್ನು ಬೇರೆ ಕಡೆ ಹಾಕಿ, ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದನು.
ಒಂದು ಮೆಸೆಜ್ ಇಂದ ಆರೋಪಿ ಲಾಕ್ :
ಅಂದು ಸ್ವಿಚ್ ಆಪ್ ಆದ ಮೊಬೈಲ್ ಗೆ ಕಂಪನಿಯ ಒಂದು ಮೆಸೇಜ್ ಬಂದಿರುತ್ತೆ ಆರೋಪಿ ಸತೀಶ್ ಹೇಳೋ ಲೊಕೇಶನ್ ಬೇರೆ ಮೊಬೈಲ್ ಗೆ ಬಂದಿರೋ ಮೆಸೇಜ್ ಲೊಕೇಶನ್ ಬೇರೆಯಾಗಿರುತ್ತೇ ಹೀಗಾಗಿ ಪೊಲೀಸರು ತೀವ್ರವಾಗಿ ವಿಚಾರಣೆ ಮಾಡಿದಾಗ ಕೊಲೆ ಮಾಡಿರೋದಾಗಿ ಬಾಯಿಬಿಟ್ಟ ಜೊತೆಗೆ ಶವವನ್ನು ಹೂತು ಹಾಕಿದ ಜಾಗವನ್ನು ತೋರಿಸಿದ್ದಾನೆ. ಸದ್ಯ ದೇಹದ ಕೆಲವು ಎಲುಬು ಸಿಕ್ಕಿದ್ದು, ಇನ್ನೂ ಅವಳ ರುಂಡ ಸಿಕ್ಕಿಲ್ಲಾ, ಹೀಗಾಗಿ ಪೊಲೀಸರು ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಪೊಲೀಸರು ಮಧುಶ್ರೀ ಶವದ ಅವಶೇಷಗಳನ್ನು ಹಳ್ಳದಲ್ಲಿ ಪತ್ತೆ ಮಾಡಿದ್ದಾರೆ ಡಿಎನ್‌ಎ ಪರೀಕ್ಷೆ ಮಾಡಲು ಕಳುಹಿಸುತ್ತಿದ್ದಾರೆ. ಮದುವೆಯಾಗು ಅಂದಿದಕ್ಕೆ ಪ್ರೀಯಕರ ಸತೀಶ್ ಪ್ರೇಯಸಿ ಮಧುಶ್ರೀ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲು ದೃಶ್ಯ ಸಿನಿಮಾ ಮಾದರಿಯಲ್ಲಿ ಪ್ರಯತ್ನ ಮಾಡಿದ್ದ ಆದರೆ ಅದೊಂದು ಮೆಸೇಜ್ ಆರು ತಿಂಗಳ ನಂತರ ಕೊಲೆಯ ರಹಸ್ಯವನ್ನು ಬಯಲು ಮಾಡಿದೆ.

