ಸರ್ಕಾರದ ಯೋಜನೆ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಲಿ : ಜಿ ಎಸ್ ಪಾಟೀಲ

Samagraphrabha
1 Min Read

ರೋಣ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಅನುದಾನ ಖರ್ಚು ಮಾಡುತ್ತಿದೆ.‌ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ‌ ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಲಿ‌ ಎಂದು ಶಾಸಕ‌ ಜಿ.ಎಸ್.‌ ಪಾಟೀಲ ಹೇಳಿದರು.

ಪಟ್ಟಣದ ಎಂ.ಅರ್. ಬಿ.ಸಿ. ಶಾಲೆಯಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನನ್ನ ಹಿಂದಿನ‌ ಅವಧಿಯಲ್ಲಿ ಶಾಲೆ, ಕಾಲೇಜ್ ನಿರ್ಮಾಣಕ್ಕೆ ಬಹಳಷ್ಟು ಅನುದಾನ ಬಿಡುಗಡೆ ಮಾಡಿಸಿದ್ದೆ.‌ ನನ್ನ ಅವಧಿ ಮುಗಿದ ನಂತರ ಬಂದ ಶಾಸಕರು ಆ ಅನುದಾನ ಬೇರೆಡೆ ತೆಗೆದುಕೊಂಡು ಹೋದರು. ಸರ್ಕಾರಿ ವಿಜ್ಞಾನ ಕಾಲೇಜ್ ಅನ್ನು ರೋಣದಿಂದ‌ ಸ್ಥಳಾಂತರಿಸಿ ಈ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹರಿಹಾಯ್ದರು.
ಶಾಸಕರಾದವರು ಬಡವರ, ಹಿಂದುಳಿದವರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು.‌ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು ಎಂದರು.
ಎಂ.ಆರ್. ಬಿ.ಸಿ. ಶಾಲೆಯ ಜಾಗವನ್ನು ಅಳತೆ ಮಾಡಿ ಸುಸಜ್ಜಿತ ಕಾಂಪೌಂಡ್ ನಿರ್ಮಿಸುವಂತೆ ಇಂಜಿನಿಯರ್ ಗೆ ಸೂಚಿಸಿದರು. ಜತೆಗೆ ಶಾಲೆಗೆ ಅವಶ್ಯವಿರುವ ನೀರಿನ ಟ್ಯಾಂಕ್ ಅನ್ನು ಒದಗಿಸುವಂತೆ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಶಾಸಕರು‌ ಸೂಚಿಸಿದರು.
ಇದೇ ವೇಳೆ‌ ಎಸ್ ಡಿಎಂಸಿ‌ ವತಿಯಿಂದ ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತ ತಳಕೇರಿ ಅವರನ್ನು ಸನ್ಮಾನಿಸಲಾಯಿತು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ‌ ಸಮಿತಿ ತಾಲೂಕು ಅಧ್ಯಕ್ಷ‌ ಮಿಥುನ ಪಾಟೀಲ, ವಕೀಲ ವಿ.ಅರ್. ಗುಡಿಸಾಗರ, ಬಸವರಾಜ ನವಲಗುಂದ ಅಕೆಯ ಪಾಟೀಲ ನಾಜಬೆಂಗಮ ಯಲಿಗಾರ ವಿದ್ಯಾ ದೊಡಮನಿ ಶಪಿಕ್ ಮೊಗನುರ ಕೆಪಿಸಿಸಿ ಸದಸ್ಯ ಸಂಜಯ ದೊಡ್ಡಮನಿ, ಬಿಇಒ ಎಂ.ಎ ಫಣಿಬಂದ, ಅಕ್ಷರ ದಾಸೋಹ ಸಹಾಯಕ‌ ನಿರ್ದೇಶಕ ಆರ್.ಎನ್. ನಾಯ್ಕರ, ಎಸ್ ಡಿಎಂಸಿ‌ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

Share this Article