ಗಜೇಂದ್ರಗಡ:ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಯುವ ಜನತೆ ಇದರಿಂದ ಹೊರ ಬಂದು ಸಮಾಜದಲ್ಲಿ ಉತ್ತಮ ಬದಕನ್ನು ರೂಪಿಸಿಕೊಳ್ಳಬೇಕು ಎಂದು ಪೊಲೀಸ್ ಹವಾಲ್ದಾರಾದ ಸಂಗಮೇಶ್ ಹಲಿಬಾಗಿಲ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಧಕ ದ್ರವ್ಯ, ಕಳ್ಳ ಸಾಗಣಿಕೆ ವಿರೋಧ ದಿನದ ಪ್ರಯುಕ್ತ ಪ್ರಭಂದ ಸ್ಪರ್ಧೆಯಲ್ಲಿ
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಾರ್ವಜನಿಕರು ಸಹಕಾರದ ಜೊತಗೆ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದದ್ದು, ಅದರಲ್ಲಿ ಶಾಲೆ, ಕಾಲೇಜು, ಹತ್ತಿರ, ಗುಟ್ಕಾ, ಸಿಗರೇಟ್, ಗಾಂಜಾ, ಮದ್ಯೆ ಸೇವನೆ, ಇನ್ನೂ ಹಲವಾರು ಘಟನೆಗಳು ಕಂಡು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ಹಾಗೂ 100ಕ್ಕೆ ಕರೆ ಮಾಡಿ, ಮಾಧಕ ದ್ರವ್ಯ, ತಡಗೇಟ್ಟುವಿಕೆಯಲ್ಲಿ ಎಲ್ಲರ ಪಾತ್ರ ಮಹತ್ವವಾದದ್ದು ಎಂದು ತಿಳಿಸಿದರು.
ಪ್ರಥಮ ಬಹುಮಾನವನ್ನು, ಕುಮಾರಿ ಕಾವ್ಯ ಹುರಕಡ್ಲಿ, ದ್ವಿತೀಯ ಬಹುಮಾನವನ್ನು ಕುಮಾರಿ ವೀಣಾ ಅಂಗಡಿ, ತೃತೀಯ ಬಹುಮಾನವನ್ನು ಸುಮಿತ್ ರಾಠೋಡ್ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಎಸ್ ಬಿ ಗೆದಗೇರಿ, ಕೆ ಹೆಚ್ ಗೋಲಗೇರಿ, ಎಮ್ ಬಿ ಗಣವಾರಿ, ಬಿ ಎಸ್ ಉಣಚಗೇರಿ, ಹಾಗೂ ಶಾಲೆಯ ವಿದ್ಯಾರ್ಥಿಗಳು, ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸ್ಥಳೀಯ ಪೊಲೀಸ್ ಠಾಣೆಯ ಎ, ಎಸ್, ಐ, ಹೆಚ್, ವಿ, ಜಗ್ಗಲ್, ಪಿ, ಎಮ್, ಭಜಂತ್ರಿ, ಎಮ್ ಡಿ ಮೇಟಿ, ಇನ್ನೂ ಮುಂತಾದ ಶಿಕ್ಷಕ ವೃಂದ ಉಪಸ್ಥಿತರಿದ್ದರು.

