ಗದಗ :ಪದ್ಮಶಾಲಿ ಸಮಾಜದದ ವತಿಯಿಂದ ಇದೇ ತಿಂಗಳು ದಿನಾಂಕ ಜೂನ್ 29 ರಂದು ರಾಜ್ಯ ಮಟ್ಟದ ವಧು ವರರ ಸಮಾವೇಶವನ್ನು ಗದಗ ಜಿಲ್ಲೆಯ ನರಗುಂದ ಪಟ್ಟಣದ ಸವದತ್ತಿ ರಸ್ತೆಯಲ್ಲಿಯುವ ಮಾರ್ಕೇಂಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪದ್ಮಶಾಲಿ ಸಂಘದ ಪ್ರಾಂತೀಯ ಸದಸ್ಯರಾದ ಸತ್ಯನಾರಾಯಣ ಪಪ್ತಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಇದೇ ತಿಂಗಳು ಜೂನ 29 ರಂದು ಪದ್ಮಶಾಲಿ ಸಮಾಜ ವಧು-ವರರ ಸಮಾವೇಶ ಹಾಗೂ
ಸಮಾಜ ಶಕ್ತಿ ಟ್ರಸ್ಟ್ ಕಮಿಟಿ ಇವರು ಆಯೋಜಿಸಿದ ಕರ್ನಾಟಕ ಸೇವಾ ರತ್ನ ಪ್ರಶಸ್ತಿಯ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರಣ ಸಮಸ್ತ ಪದ್ಮಶಾಲಿ ಸಮಾಜ ಬಾಂಧವರು, ಸಮಾಜದ ಟ್ರಸ್ಟ್ ಕಮಿಟಿ ಯುವಕದ ಸಂಘದವರು ಹಾಗೂ ಮಹಿಳಾ ಮಂಡಳದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣಿಭೂತರಾಗಬೇಕು.
29 ರಂದು ಪದ್ಮಶಾಲಿ ಸಮಾಜದ ವಧು ವರರ ಸಮಾವೇಶ
