ನವಲಗುಂದ: ನವಲಗುಂದ ಪುರಸಭೆ ಕಟ್ಟಡ ನಿರ್ಮಿಸಬೇಕೆಂಬುದು ಬಹಳ ದಿನಗಳ ಕನಸಾಗಿತ್ತು. ನೂತನ ಕಟ್ಟಡಕ್ಕೆ ರೂ. 7.50 ಕೋಟಿ ಹಾಗೂ ನಗರದಲ್ಲಿ ಒಳ ಚರಂಡಿ ಯೋಜನೆಗಾಗಿ ಈಗಾಗಲೇ ಮೊದಲು ಹಂತದಲ್ಲಿ 28 ಕೋಟಿ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಪುರಸಭೆ ವತಿಯಿಂದ ಅಧ್ಯಕ್ಷರು, ಸರ್ವ ಸದಸ್ಯರು ಶಾಸಕ ಎನ್. ಎಚ್ ಕೋನರಡ್ಡಿಯವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ತಹಶೀಲ್ದಾರ ಸುಧೀರ ಸಾವಕಾರ, ಮುಖ್ಯಾಧಿಕಾರಿ ಶರಣು ಪೂಜಾರ, ಸ್ಥಾಯಿ ಸಮಿತಿ ಅಧ್ಯಕ್ಷ ಹನಮಂತ ವಾಲಿಕಾರ, ಸದಸ್ಯರಾದ ಜೀವನ ಪವಾರ, ಶರಣಪ್ಪ ಹಕ್ಕರಕಿ, ಮಂಜುಳಾ ಜಾಧವ, ಪದ್ಮಾವತಿ ಪೂಜಾರಿ, ಅನ್ನಪೂರ್ಣಾ ಸುಣಗಾರ, ನಾಮನಿರ್ದೇಶಿತ ಸದಸ್ಯರಾದ ಲಕ್ಷಣ ಹಳ್ಳದ, ಮದಾರಸಾಬ ಉಗರಗೋಳ, ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಮುಧೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
