ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ:ಶಾಸಕ ಎನ್. ಎಚ್ ಕೋನರಡ್ಡಿ

Samagraphrabha
1 Min Read

ನವಲಗುಂದದ: ಪಟ್ಟಣದ ಹೆಬಸೂರ ಪ್ಲಾಟನಲ್ಲಿ ಕುರುಬ ಸಮಾಜದ ಜಾಗೆಯಲ್ಲಿ ಕನಕ ಭವನ ಕಟ್ಟಡದ ಭೂಮಿ ಪೂಜೆಯನ್ನು ಶಾಸಕ ಎನ್. ಎಚ್ ಕೋನರಡ್ಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಸಕರಿಗೆ ಮುಖ್ಯಮಂತ್ರಿಗಳ ವಿಶೇಷ 25 ಕೋಟಿ ಅನುದಾನದಲ್ಲಿ ನವಲಗುಂದ ಕನಕ ಭವನಕ್ಕೆ ರೂ. 50.00 ಲಕ್ಷ, ಅಣ್ಣಿಗೇರಿ ಕನಕ ಭವನಕ್ಕೆ ರೂ. 50 ಲಕ್ಷ, ಹುಬ್ಬಳ್ಳಿ ತಾಲ್ಲೂಕು ಕುಸುಗಲ್ ಗ್ರಾಮದಲ್ಲಿ ರೂ. 20 ಲಕ್ಷ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸುತ್ತಿರುವದು ಹೆಮ್ಮೆಯ ಸಂಗತಿ. ಇದೇ ರೀತಿ ಎಲ್ಲ ಸಮುದಾಯಗಳಿಗೆ ಅನುದಾನ ಕೊಡುವ ಪ್ರಯತ್ನವನ್ನು ಮಾಡಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂದಾನಿಗಳು, ಮಾಜಿ ಸಚಿವರಾದ ಕೆ.ಎನ್.‌ಗಡ್ಡಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ನವಲಗುಂದ ತಹಶೀಲ್ದಾರ ಸುಧೀರ ಸಾವುಕಾರ, ತಾ.ಪಂ. ಇಒ ಭ್ಯಾಗ್ಯಶ್ರೀ ಜಾಗೀರದಾರ, ಕಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ, ಪಿ.ಎಸ್‌.ಐ ಜನಾರ್ಧನ ಭಟ್ರಳ್ಳಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಗೊಲ್ಲಪ್ಪ ಗೊಲ್ಲನಾಯ್ಕರ, ಈಶ್ವರ ಕಾಳಪ್ಪನವರ, ಪ್ರೇಮಾ ನಾಯ್ಕರ, ಅರುಣ ಮಜ್ಜಗಿ, ಹನಮಂತಪ್ಪ ಇಬ್ರಾಹಿಂಪೂರ, ಸ್ಥಾಯಿ ಸಮಿತಿ ಚೇರಮನ್‌ ಹನಮಂತ ವಾಲಿಕರ, ಸದಸ್ಯರಾದ ಸುರೇಶ ಮೇಟಿ, ಅಂಜುಮನ ಸಂಸ್ಥೆ ಅಧ್ಯಕ್ಷ ಅಲ್ಲಾಸಾಬ ಕಲ್ಲಕುಟ್ರಿ, ಡಿ.ಕೆ.ಹಳ್ಳದ, ವಿಕಾಸ ತದ್ದೆವಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.‌

Share this Article