ಶಿತಿಲಾವಸ್ಥೆಯಲ್ಲಿ ತಾಲೂಕು ಪಂಚಾಯತ್ ಕಟ್ಟಡ:

Samagraphrabha
2 Min Read

ಜೀವ ಭಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು

ತಾಲೂಕ ಕಛೇರಿಯ ಕಟ್ಟಡಗಳ ಅವ್ಯವಸ್ಥೆ

ಸಮಗ್ರ ಪ್ರಭ ವಿಶೇಷ ಸುದ್ದಿ

ಮಂಜುನಾಥ ಕುದರಿಕೋಟಿ

- Advertisement -
Ad image

ಗಜೇಂದ್ರಗಡ : ಪಟ್ಟಣದ ಗದಗ ರಸ್ತೆಯಲ್ಲಿ ಇರುವ ತಾಲೂಕು ಪಂಚಾಯತ್ ಕಾರ್ಯಾಲಯ ಸುಮಾರು ವರ್ಷಗಳಿಂದ ಸಂಪೂರ್ಣ ಶಿತಿಲಾವಸ್ಥೆಗೆ ತಲುಪಿದೆ. ಸುಮಾರು ವರ್ಷಗಳಿಂದ ಈ ಕಟ್ಟಡವನ್ನು ಜಿಲ್ಲಾಡಳಿತ ಬಾಡಿಗೆ ತೆಗೆದುಕೊಂಡು ತಾಲೂಕು ಪಂಚಾಯತಿ ಇಲಾಖೆಯನ್ನು ಇಲ್ಲಿ ನಿರ್ಮಾಣ ಮಾಡಿದೆ ಆದರೆ ಮುಂದುಗಡೆಯಿಂದ ಸುಸಜಿತವಾಗಿ ಕಾಣುವ ಈ ಕಟ್ಟಡ ಒಳಗಡೆ ಹೋದಂತೆಲ್ಲ ಸಂಪೂರ್ಣ ಬಿರುಕು ಬಿಟ್ಟು ಮೇಲ್ಚಾವಣಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೋಡೆಗಳೆಲ್ಲ ಬಿರುಕು, ಮೂಲ ಸೌಲಭ್ಯಗಳ ಕೊರತೆ:

ತಾಲೂಕು ಪಂಚಾಯತಿ ಕಟ್ಟಡದ ಗೋಡೆಗಳೆಲ್ಲ ಪೂರ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ, ಮಳೆಗಾಲದಲ್ಲಿ ನಿರ್ವಹಣೆ ಇಲ್ಲದೆ ಸೋರುತ್ತಿದ್ದು ಇದಕ್ಕೆ ತಾಲೂಕು ಪಂಚಾಯತ್ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಕಟ್ಟಡದಲ್ಲಿ ಶೌಚಾಲಯಗಳ ಕೊರತೆ ಇದೆ ಮುರಿದ ಬಾಗಿಲುಗಳು, ಕಟ್ಟಡದ ಸುತ್ತ ಮುಳ್ಳು, ಮುರಿದ ಬಾಗಿಲುಗಳು ಜನರನ್ನು ಕೈ ಬಿಸಿ ಕರೆಯುತ್ತಿವೆ. ಸಂಜೆ ಆಗುತ್ತಿದ್ದಂತೆ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಕಟ್ಟಡದ ಬಿರುಕುಗಳನ್ನು ನೋಡಿ ರೈತರು ಜನ ಸಾಮಾನ್ಯರು ತಮ್ಮ ಸವಲತ್ತುಗಳನ್ನು ತೆಗೆದುಕೊಳ್ಳಲು ಬರುತ್ತಿಲ್ಲ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಿಬ್ಬಂದಿಗಳು ಕಂಡು ಕಾಣದತ್ತೆ ಕೆಲಸ ನಿರ್ವಹಿಸುತ್ತಿರುವುದು ತುಂಬಾ ವಿಷಾದದ ಸಂಗತಿ.

ತಾಲೂಕಿನಾದ್ಯಂತ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಕಟ್ಟಡಗಳು ಹಾಗೂ ಶಾಲೆಗಳು:

ತಾಲೂಕಿನಲ್ಲಿ ಹಲವಾರು ಕಟ್ಟಡಗಳು ಹೀಗೆ ಶೀತಲಾವಸ್ಥೆಯಲ್ಲಿವೆ ಇಂದಲ್ಲ ನಾಳೆ ಬೀಳುವ ಪರಿಸ್ಥಿತಿ ಮತ್ತು ಮಳೆಗಾಲದಲ್ಲಿ ನಿರ್ವಹಣೆ ಇಲ್ಲದೆ ಸೋರುವ ಪರಿಸ್ಥಿತಿ ನಿರ್ಮಾಣವಾಗಿದೆ, ತಹಸಿಲ್ದಾರ್ ಕಚೇರಿಯು ಸೋರುತ್ತಿದ್ದು ಸ್ಥಳಾಂತರಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಚಿಲಜರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕಟ್ಟಡದ ಮೇಲ್ಚಾವಣಿ ಕುಸಿದು ಒಬ್ಬ ಶಿಕ್ಷಕನ ಸ್ಥಿತಿ ಚಿಂತಾ ಜನಕವಾಗಿದ್ದು, ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಂಭೀರ ಗಾಯಗಳಾಗಿವೆ . ಉಳಿದ ವಿದ್ಯಾರ್ಥಿಗಳು ಶಾಲೆಯ ಹೊರಗೆ ಇದ್ದುದ್ದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇದೇ ತೆರನಾಗಿ ತಾಲೂಕಿನಲ್ಲಿ ಹಲವಾರು ಶಾಲಾ ಕಟ್ಟಡಗಳು ಬೀಳುವ ಪರಿಸ್ಥಿತಿಯಲ್ಲಿದ್ದು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಾಕ್ಸ್

ಗಜೇಂದ್ರಗಡ ನೂತನ ತಾಲೂಕಾಗಿ ಘೋಷಣೆಯಾಗಿದ್ದು ಇಲ್ಲಿ ಸರ್ಕಾರಿ ಕಟ್ಟಡಗಳು ಹಾಗೂ ಮೂಲ ಸೌಲಭ್ಯಗಳ ಕೊರತೆ ಇದೆ ಆದ್ದರಿಂದ ಜನತೆಗೆ ತುಂಬಾ ತೊಂದರೆಯಾಗುತ್ತಿದ್ದು ನಾವು ಹಲವಾರು ಬಾರಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಸಚಿವರಿಗೆ, ಶಾಸಕರಿಗೆ, ಸಂಸದರಿಗೆ ಹಲವಾರು ಭಾರಿ ಮನವಿಯನ್ನು ಕೊಟ್ಟಿದ್ದೇವೆ ಅದನ್ನು ಪರಿಶೀಲಿಸಿ ಆದಷ್ಟು ಬೇಗನೆ ಕಟ್ಟಡ ಕಾಮಗರಿಗಳನ್ನು ಕೈಗೊಳ್ಳಬೇಕು ಈಗಿರುವಂತಹ ತಾಲೂಕು ಪಂಚಾಯತಿಯನ್ನು ಸುಸಜ್ಜಿತವಾದ ಕಟ್ಟಡಕ್ಕೆ ಸ್ಥಳಾಂತರಿಸಬೇಕು.

* ಅನಿಲ್ ಕಾರ್ಣೀ , ಸಾಮಾಜಿಕ ಹೋರಾಟಗಾರ

Share this Article