ಶರೀಪ ಹುಡೇದ
ನವಲಗುಂದ : ಪಟ್ಟಣದ ತೆಗ್ಗಿನಕೇರಿ ಓಣಿಯಲ್ಲಿರುವಂತಹ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ-9 ದೇವಸ್ಥಾನದಲ್ಲಿ ನಡೆಯುತ್ತಿರುವದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆ ಗೆ ಹಿಡಿದ ಕನ್ನಡಿಯಾಗಿದೆ..

ಪುರಸಭೆ ಮಾಲ್ಕಿಯಲ್ಲಿರುವಂತಹ ಜಾಗೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಟ್ಟು ಕೊಡಲು ಪುರಸಭೆಯಲ್ಲಿ ಈ ಹಿಂದೆಯೇ ಠರಾವ ಆಗಿದ್ದು ಜಿಲ್ಲಾಧಿಕಾರಿಗಳ ಅನುಮೋದನೆ ಪುರಸಭೆಗೆ ದೊರತಿದ್ದು ಸದ್ಯ ಆನ್ಲೈನ್ ಪ್ರಕ್ರಿಯೆ ಪೂರ್ಣ ಗೊಂಡ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಲ್ಲಿ ನೊಂದಣಿ ಪ್ರಕ್ರಿಯೆ ನಡೆಯುವುದೆಂದು ಅಧಿಕಾರಿಗಳು ತಿಳಿಸಿದ್ದು ಪ್ರಕ್ರಿಯೇ ಕಾರ್ಯ ಅತೀ ತುರ್ತು ಮುಕ್ತಾಯ ವಾಗಲಿ ಎನ್ನುವುದು ಸಮಗ್ರ ಪ್ರಭ ಪತ್ರಿಕೆಯ ಸಾಮಾಜಿಕ ಕಳ-ಕಳಿಯಾಗಿದೆ.
ನಿತ್ಯ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ, ಇದರಿಂದ ಮಕ್ಕಳ ಶಿಕ್ಷಣಕ್ಕೇ ತೊಂದರೆಯಾಗುತ್ತದೆ, 1 ರಿಂದ 4ನೇ ತರಗತಿ ಹೊಂದಿರುವ ಶಾಲೆಯಲ್ಲಿ 30 ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ, ಇಲ್ಲಿ ಇಬ್ಬರು ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಕೂಡ ಸಿಗದಾಗಿದೆ. ಕುಡಿಯುವ ನೀರು, ಶೌಚಾಲಯ ಮತ್ತು ಆಟದ ಮೈದಾನದ ವ್ಯವಸ್ಥೆ ಇಲ್ಲ. ಇದರಿಂದ ಮಕ್ಕಳು ಶೌಚಕ್ಕೆ ಮನೆಗೆ ಹೋಗಬೇಕಾಗಿದೆ. ದೇವಸ್ಥಾನದ ಒಂದೇ ಸೂರಿನಡಿ ನಡೆಯುತ್ತಿರುವುದರಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ದೇವಸ್ಥಾನದ ಹಿಂಬದಿಯಲ್ಲಿಯೇ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ವಾಹನ ಸಂಚಾರ ದಟ್ಟಣೆ ಇದ್ದೇ ಇರುತ್ತದೆ. ಶೀಘ್ರ ಕಟ್ಟಡ ನಿರ್ಮಾಣ ಮಾಡಿದರೆ ಶಾಲೆಯ ಮಕ್ಕಳಿಗೆ ಬಹಳ ಅನಕೂಲವಾಗುತ್ತದೆ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಸ್ವಂತ ಕಟ್ಟಡಕ್ಕೇ ಬೇಕಾದಂತಹ ಕಾಗದ ಪತ್ರದ ವ್ಯವಸ್ಥೆ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಬೇಕೆಂಬುವುದು ಪಾಲಕರ ಆಗ್ರಹವಾಗಿದೆ.
ಉಡಚಮ್ಮನ ದೇವಸ್ಥಾನದಲ್ಲಿ ಸರ್ಕಾರಿ ಶಾಲೆ ನಡೆಯುತ್ತಿರುವದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದು ಈ ವರ್ಷ ಮಕ್ಕಳ ಸಂಖ್ಯೆ ಬಹಳ ಕಡಿಮೆಯಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಈ ಶಾಲೆಗೆ ಸ್ವಂತ ಜಾಗೆಯ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಕಟ್ಟಡ ಕಟ್ಟಲು ಅನಕೂಲ ಮಾಡಿಕೊಡಬೇಕು..
ಮಾಬುಸಾಬ ಎಂ. ಯರಗುಪ್ಪಿ
ಆರ್.ಟಿ.ಐ ಕಾರ್ಯಕರ್ತ, ನವಲಗುಂದ,
ಸಾರ್ವಜನಿಕರ ಬೇಡಿಕೆಯಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಪುರಸಭೆ ಮಾಲ್ಕಿಯಲ್ಲಿರುವಂತಹ ಜಾಗೆ ಮಂಜೂರಿಗಾಗಿ ಪ್ರಸ್ತಾವಣೆಗೆ ಕಳುಹಿಸಿದ್ದೆವು, ಮಂಜೂರಾತಿಗೆ ಆದೇಶ ಬಂದಿದೆ, ಆನಲೈನgtgನಲ್ಲಿ ಈ ಆಸ್ತಿಗೆ ಬದಲಾವಣೆಗೆ ಕಳುಹಿಸಿದ್ದೇವೆ, ಸದ್ಯದಲ್ಲಿ ಪುರಸಭೆ ಮಾಲ್ಕಿ ಜಾಗ ಶಿಕ್ಷಣ ಇಲಾಖೆಗೆ ಬಿಟ್ಟು ಕೊಡುತ್ತೇವೆ.
ಶರಣು ಪೂಜಾರ
ಮುಖ್ಯಾಧಿಕಾರಿಗಳು, ಪುರಸಭೆ ನವಲಗುಂದ
ಪುರಸಭೆಯವರು ತಮ್ಮ ಮಾಲ್ಕಿಯಲ್ಲಿರುವಂತಹ ಜಾಗೆಯನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ-9ಕ್ಕೇ ಬಿಟ್ಟು ಕೊಡುವಂತಹ ಪ್ರಕ್ರಿಯೆಯ ಕೊನೆಯ ಹಂತದಲ್ಲಿದೆ, ಅತೀ ಶಿಘ್ರದಲ್ಲಿ ನೋಂದಣಿ ಮಾಡಿಕೊಂಡು ಹೊಸ ಕಟ್ಟಡ ಕಟ್ಟಲು ಆರಂಭ ಮಾಡುತ್ತೇವೆ.
ಶಿವಾನಂದ ಮಲ್ಲಾಡ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆ, ನವಲಗುಂದ

