ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ-ಬೆಣ್ಣೆಹಳ್ಳಿ ಹಳ್ಳಕ್ಕೆ ಅಡ್ಡಲಾಗಿ ಹೈಲೆವೆಲ್ ಬ್ರಿಡ್ಜ್ ನಿರ್ಮಾಣಕ್ಕೆ ಸುಮಾರು 250 ಲಕ್ಷ ರೂಪಾಯಿಗಳ ಕಾಮಗಾರಿಗೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಸುಮಾರು 15 ವರ್ಷಗಳ ಬೇಡಿಕೆ ಇದಾಗಿದ್ದು ಈ ಹಿಂದೆ ಹಳ್ಳ ದಾಟುವಾಗ ಅನೇಕ ಜನ ಈ ಹಳ್ಳದಲ್ಲಿ ಬಿದ್ದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ನಾನು ಶಾಸಕನಾದ ತಕ್ಷಣ ಇದನ್ನು ಸರ್ಕಾರದ ಗಮನಕ್ಕೆ ತಂದು ಈ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ್ದೇನೆ ಆದಷ್ಟು ಶೀಘ್ರದಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೇಮಗಿರೀಶ ಹಾವಿನಾಳ, ಕೆ ವಿ ಹಂಚಿನಾಳ, ಪ್ರಶಾಂತ ಗುಡದಪ್ಪನವರ, ಪರಮೇಶ ಗುಡಿಮನಿ, ಮೈಲಾರಪ್ಪ ಕಲಕೇರಿ, ಬನ್ನೆಪ್ಪ ಚೂರಿ, ಮಂಜಯ್ಯ ಹಳ್ಳಿ, ರಜನಿಕಾಂತ ದೇಸಾಯಿ, ಕೋಟೆಪ್ಪ ಕಲಕೇರಿ, ಬಸವರಾಜ ಡಂಬಳ, ಬಸವರಾಜ ಚಿಗನ್ನವರ, ಶ್ರೀನಿವಾಸ ಅಬ್ಬಿಗೇರಿ, ರೂಪಲಪ್ಪ ಲಮಾಣಿ, ಧರಮಸಿಂಗ್ ಲಮಾಣಿ, ಲೋಹಿತ ಪುರದ, ಪರಶುರಾಮ ಕಿಳ್ಳಿಕ್ಯಾತರ, ಹನುಮಂತ ನಾಯಕ, ಮಾರುತಿ, ರಂಗಪ್ಪ ನಾಯ್ಕ, ವೀರೇಶ ಸಜ್ಜನ, ಅಂಬವ್ವ ಕಟ್ಟಿಮನಿ, ಶಂಕರ ಉಳ್ಳಾಗಡ್ಡಿ, ಶಿವಪುತ್ರಪ್ಪ ಪೂಜಾರ ಸೋಮರೆಡ್ಡಿ, ವಿನಾಯಕ ಕರಿಬಿಷ್ಠಿ, ಮಹೇಶ ದೇಸಾಯಿ, ಮಲ್ಲಿಕಾರ್ಜುನ ಹಣಜಿ, ಆರ್ ಎಸ್ ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
