ಗದಗ : ಸರ್ಕಾರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಕಂದಾಯ ಇಲಾಖೆಗೆ ವೇಗ ನೀಡಿದ್ದರು ಕೆಲವೊಂದು ಅಧಿಕಾರಿಗಳು ನಿಷ್ಕಾಳಜಿಯಿಂದ ಅರ್ಜಿ ವಿಲೇವಾರಿ ವಿಳಂಬದಿಂದ ಸಾರ್ವಜನಿಕರು ಕಛೇರಿಯಿಂದ ಕಛೇರಿಗೆ ಅಲೆದಾಡುತ್ತಿದ್ದಾರೆ ಇತಂಹದೊಂದು ಪ್ರಕರಣ ಗದಗ ತಹಶೀಲ್ದಾರ ಕಚೇರಿಯಲ್ಲಿ ನಡೆದಿದ್ದು ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 15+ ಪ್ರಕರಣಗಳಲ್ಲಿ ಭೂಮಿ ತಂತ್ರಾಂಶದಿಂದ ಅರ್ಜಿ ವಿಲೇವಾರಿ ಮಾಡದೆ ಇದ್ದ ಪರಿಣಾಮ ಕಂದಾಯ ನಿರೀಕ್ಷಕ ಹಡಗಲಿಮಠ ಅವರಿಗೆ ಕಾರಣ ಕೇಳಿ ಎಸಿ ನೋಟಿಸ ಜಾರಿ ಮಾಡಿದ್ದಾರೆ.

ಸೋಮವಾರ ಗದಗ ತಹಶೀಲ್ದಾರ ಕಛೇರಿಗೆ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಎಂ ಆಕಸ್ಮಿಕವಾಗಿ ಭೇಟಿ ನೀಡಿದ್ದರು ಇದೆ ಸಂದರ್ಭದಲ್ಲಿ ಕಂದಾಯ ನೀರಿಕ್ಷಕರ ಭೂಮಿ ಲಾಗಿನ ಸೇರಿದಂತೆ ಕಚೇರಿಯ ವಿವಿಧ ಅರ್ಜಿ ಹಾಗೂ ಕಡತಗಳನ್ನು ಪರಿಶೀಲಿಸಿದರು ವಿತ್ ನೋಟಿಸ್ ಗೆ ಸಂಬಂಧಿಸಿದಂತೆ ಗದಗ ಶಹರದ ಕಂದಾಯ ನಿರೀಕ್ಷಕರಾದ ನಿರಂಜನಯ್ಯ ಹಡಗಲಿಮಠ ಅವರ ಭೂಮಿ ತಂತ್ರಾಂಶದಲ್ಲಿ 15 ದಿನಗಳ ಮೇಲ್ಪಟ್ಟ ಪ್ರಕರಣಗಳು 09, ಹಾಗೂ 7 ದಿನಗಳ ಮೇಲ್ಪಟ್ಟ ಪ್ರಕರಣಗಳು 08, ಬಾಕಿ ಇರುವುದು ಕಂಡು ಬಂದಿದ್ದು ಇದರಿಂದ ಭೂಮಿ ಪ್ರಗತಿಗೆ ಕುಂಟಿತವಾಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರಿ ಕೆಲಸದಲ್ಲಿ ನೀರಾಸಕ್ತಿ ನಿಷ್ಕಾಳಜಿತನವನ್ನು ತೋರಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ತನೆ) ನಿಯಮಗಳು 1966 ಸಾಮಾನ್ಯ ತತ್ವಗಳು (1) (2) ಮತ್ತು (3) ನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದ ಕುರಿತಾಗಿ ಕಾರಣ ಕೇಳಿ ನೋಟಿಸು ಜಾರಿಮಾಡಿದ್ದಾರೆ ಸದರಿ ನೋಟಿಸು ತಲುಪಿದ 24 ಘಂಟೆಯೊಳಗಾಗಿ ಖುದ್ದಾಗಿ ಇರುವ ಎಲ್ಲ ಪ್ರಕರಣಗಳನ್ನು ವಿಲೇವಾರಿಯೊಂದಿಗೆ ನಿಮ್ಮ ಲಿಖಿತ ಉತ್ತರ ಸಲ್ಲಿಸಲು ಗದಗ ಉಪವಿಭಾಗಾಧಿಕಾರಿ ಕಂದಾಯ ನಿರೀಕ್ಷನಿಗೆ ನೋಟಿಸು ಜಾರಿ ಮಾಡಿದ್ದಾರೆ.
