ತಹಸೀಲ್ದಾರ್ ಕಛೇರಿ ಸ್ಥಳಾಂತರ ಖಂಡಿಸಿ ಪ್ರತಿಭಟನೆ

Samagraphrabha
2 Min Read

ಗಜೇಂದ್ರಗಡ : ಪಟ್ಟಣದ ಹೃದಯ ಭಾಗದಲ್ಲಿರುವ ದಂಡಾಧಿಕಾರಿಗಳ ಕಾರ್ಯಾಲಯವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಸ್ಥಳಾಂತರಿಸುವಂತೆ ತಹಸಿಲ್ದಾರ್ ಅವರು ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು ಇದನ್ನು ತಡೆಹಿಡಿಯಬೇಕು ಎಂದು ಕಚೇರಿ ಸ್ಥಳಾಂತರ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಬಾಬು ಜಗಜೀವನ್ ರಾಮ್ ಆದಿ ಜಾಂಬವ ಯುವ ಬ್ರಿಗೇಡ್ ಕರ್ನಾಟಕ ಸಂಘಟನೆ ರವರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಗಜೇಂದ್ರಗಡ ಪಟ್ಟಣವು ತಾಲೂಕು ಘೋಷಣೆಯಾಗಿದ್ದು, ನೂತನ ಸರಕಾರಿ ಕಟ್ಟಡಗಳನ್ನು ನಿರ್ಮಿಸಲು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿದ್ದು ಕಟ್ಟಡ ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ. ಆದರೆ ಏಕಾ ಏಕಿಯಾಗಿ ಜಿಲ್ಲಾಧಿಕಾರಿಗಳು ಈಗಿರುವ ತಹಸೀಲ್ದಾರ್ ಕಚೇರಿಯನ್ನು ಸ್ಥಳಾಂತರಿಸುವಂತೆ ತಹಸಿಲ್ದಾರ್ ಕಚೇರಿಗೆ ಪ್ರಸ್ತಾವನೆಯನ್ನು ನೀಡಿದ್ದಾರೆ ಈ ಪ್ರಸ್ತಾವನೆಗೆ ತಹಸೀಲ್ದಾರ್ ರವರು ಉತ್ತರವನ್ನು ನೀಡಿದ್ದು ಎಪಿಎಂಸಿ ಯಾರ್ಡ್ ನಲ್ಲಿ ಕಚೇರಿಯನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದು ಈ ಆದೇಶವನ್ನು ಹಿಂಪಡೆಯಬೇಕೆಂದು ಹಲವಾರು ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮಂಜುನಾಥ್ ಬುರಡಿ ಮಾತನಾಡಿ ನಾವು ಸ್ಥಳಾಂತರ ಮಾಡಬೇಕಾಗಿರುವದು ತಾಲೂಕು ಪಂಚಾಯತಿಯನ್ನು ತಹಸೀಲ್ದಾರ್ ಕಚೇರಿಯನ್ನಲ್ಲ ಸರಕಾರಿ ಕೆಲಸ ಸಾರ್ವಜನಿಕ ಕೆಲಸ, ಆದರೆ ಇಲ್ಲಿ ಕಾಣದ ಕೈಗಳ ಕೆಲಸವಾಗಿದೆ. ತಹಸೀಲ್ದಾರ್ ಕಚೇರಿ ಇದ್ದ ಸ್ಥಳದಲ್ಲೇ ಇರಬೇಕು. ಸಿಎಲ್ 7 ಬಾರ್ ಆಂಡ್ ರೆಸ್ಟೋರೆಂಟ್ ಮಾಡಲು ಈ ಕಛೇರಿಯನ್ನು ಬೇರೆ ಕಡೆ ಸ್ಥಳಾಂತರ ಮಾಡುತ್ತಿದ್ದಾರೆ. ಈ ಕಛೇರಿಯು ಪಟ್ಟಣದ ಹೃದಯ ಭಾಗದಲ್ಲಿ ಇರುವದರಿಂದ ಅಂಗವಿಕಲರಿಗೆ, ವೃದ್ಧರಿಗೆ, ಮಹಿಳೆಯರಿಗೆ, ಹಿರಿಯರಿಗೆ ಮತ್ತು ಬಡವರಿಗೆ ತುಂಬಾ ಅನುಕೂಲವಾಗಿದೆ. ಈ ಕಚೇರಿ ಬಸ್ ನಿಲ್ದಾಣಕ್ಕೆ ಹತ್ತಿರವಿರುವದರಿಂದ ಕಾಲ್ ನಡಿಗೆಯಿಂದ ಬರಬಹುದು ಬೇರೆ ಕಡೆ ಸ್ಥಳಾಂತರ ಮಾಡಿದರೆ ದುಡ್ಡು ಕೊಟ್ಟು ಹೋಗಬೇಕಾಗುತ್ತದೆ ಇದು ಬಡವರಿಗೆ ಹೊರೆ ಆಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ತಮ್ಮ ಆದೇಶವನ್ನು ಮರಳಿ ಪಡೆಯಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಉಗ್ರ ಹೋರಾಟ ಮಾಡಲಾಗುವದು.

- Advertisement -
Ad image

ತಹಸೀಲ್ದಾರ್ ಕಚೇರಿ ಸ್ಥಳಾಂತರ ಕಂಡನಿಯ ಜಿಲ್ಲಾಧಿಕಾರಿ ಈ ಆದೇಶ ಮರಳಿ ಪಡೆಯಬೇಕು ಈ ಕಚೇರಿಯಿಂದ ರೈತರಿಗೆ ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ತುಂಬಾ ಅನುಕೂಲವಾಗಿದೆ. ಸ್ಥಳಾಂತರ ಮಾಡಿದ್ದೆ ಆದರೆ ದಲಿತ ಸಂಘರ್ಷ ಸಮಿತಿಯಿಂದ ತಾಲೂಕಿನಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕಚೇರಿಯ ಸ್ಥಳಾಂತರದ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಸಾರ್ವಜನಿಕರ ಅನುಕೂಲ ಮರೆತು ಪ್ರಭಾವಿಗಳ ಮಾತು ಕೇಳಿ ಸ್ಥಳಾಂತರಿಸಿದ್ದೆ ಆದರೆ ಮುಂದಿನ ದಿನಮಾನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಈ ವಿಷಯವನ್ನು ತಿಳಿಸಿ ಬೃಹತ್ ಪ್ರಮಾಣದ ಹೋರಾಟ ಕೈಗೊಳ್ಳಲಾಗುವುದು.
ಡಿ. ಜಿ ಕಟ್ಟಿಮನಿ, ಜಿಲ್ಲಾಧ್ಯಕ್ಷ ಕರ್ನಾಟಕ ದಲಿತ ಸಂಘರ್ಷ ಸಮಿತಿ

ಈ ಸಂದರ್ಭದಲ್ಲಿ ಮಾರುತಿ ಹಾದಿಮನಿ, ಶಿವು ಬುಮದ್, ರವಿ ಮಾದರ, ಮಾರುತಿ ಹಾದಿಮನಿ, ಶಿವಪ್ಪ ಮಾದರ, ಯಮನೂರಪ್ಪ ಹರಿಜನ, ಯಮೂನರ ಮಾದರ, ಚೆನ್ನಪ್ಪ ಪುಜಾರ, ದುರಗೇಶ ಹಿರೇಮನಿ, ಆನಂದ ಮಾದರ, ಪ್ರವೀಣ ತೆಗ್ಗಿನಮನಿ, ಭೀಮೇಶ್ ಮಾದರ, ಮೈಲಾರಪ್ಪ ಮಾದರ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಹಾಗೂ ಪಟ್ಟಣದ ಮುಖಂಡರು ಭಾಗಿಯಾಗಿದ್ದರು.

Share this Article