ನವಲಗುಂದ: ವಿದ್ಯಾರ್ಥಿಗಳು ಗುರುವಿನ ಗುಲಾಮನಾಗಿ ವಿದ್ಯೆಯನ್ನು ಕಲಿತು ಸಾಧನೆ ಮಾಡಬೇಕೆಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ-7ರಲ್ಲಿ ಗಂಗಾಧರ ಕತ್ತಿ ಅವರ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ನೋಟಬುಕ್, ಪೆನ್ ವಿತರಣೆ ಮಾಡಿ ಮಾತನಾಡಿದ ಅವರು ಹುಟ್ಟುಹಬ್ಬದ ಆಚರಣೆಗಾಗಿ ಸಾವಿರಾರು ರೂಪಾಯಿ ಅನಾವಶ್ಯಕವಾಗಿ ಖರ್ಚು ಮಾಡುತ್ತಾರೆ, ಆದರೆ ಈ ಯುವಕ ಮಕ್ಕಳ ಕಲಿಕೆಗಾಗಿ ನೋಟಬುಕ್ ವಿತರಣೆ ಮಾಡಿದ್ದು ಮಾದರಿಯ ಕೆಲಸವಾಗಿದೆ ಎಂದರು…
ಈ ಸಂದರ್ಭದಲ್ಲಿ ಗಂಗಾಧರ ಕತ್ತಿ, ಮಹಮ್ಮದಲಿ ಮಿರ್ಜಿ, ಮುಖ್ಯ ಶಿಕ್ಷಕಿ ಎಲ್.ಕೆ ಬಿಕನಳ್ಳಿ, ಸಹ ಶಿಕ್ಷಕಿ ವಾಯ್.ಎಲ್ ಸುಣಗಾರ ಉಪಸ್ಥಿತರಿದ್ದರು.
